ಸೋಮವಾರಪೇಟೆ, ಡಿ. ೫: ‘ಭೂಪಟದಲ್ಲಿ ಒಂದಾಗಿದ್ದೇವೆ-ಭಾವಪುಟದಲ್ಲಿ ಒಂದಾಗೋಣ’ ಎಂಬ ಘೋಷವಾಕ್ಯದಡಿ ಭಾರತ ಸ್ವಾತಂತ್ರ‍್ಯಹೋರಾಟಕ್ಕೆ ಪ್ರೇರಣೆ ನೀಡಿದ ಹಾಗೂ ಕನ್ನಡಿಗರ ಸಾಕ್ಷಿಪ್ರಜ್ಞೆಯನ್ನು ಸದಾ ಜಾಗೃತಗೊಳಿಸುವ ಮೂರು ಹಾಡುಗಳಿಗೆ ನೂರು ವರ್ಷ ತುಂಬಿದ ಸಂಭ್ರಮದ ಹಿನ್ನೆಲೆ ಕೊಡಗು ಜಿಲ್ಲಾ ಕನ್ನಡಸಿರಿ ಸ್ನೇಹ ಬಳಗದ ನೇತೃತ್ವದಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ‘ಶತ ಕಂಠದಲ್ಲಿ ಗೀತ ಸಂಗಮ’ ಕಾರ್ಯಕ್ರಮ ಹಬ್ಬದ ವಾತಾವರಣ ಸೃಷ್ಟಿಸಿತ್ತು.

ಸೋಮವಾರಪೇಟೆ ವ್ಯಾಪ್ತಿಯ ೨೧ಕ್ಕೂ ಅಧಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜನೆಗೊಂಡಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ದೇಶದ ಸ್ವಾತಂತ್ರ‍್ಯಕ್ಕಾಗಿ ಬಂಕಿಮಚAದ್ರ ಚಟರ್ಜಿ ರವರು ರಚಿಸಿದ ವಂದೇ ಮಾತರಂ ಗೀತೆಯು ೧೫೦ ವರ್ಷಗಳನ್ನು ಪೂರೈಸಿದ್ದು, ಏಕೀಕರಣಕ್ಕಾಗಿ ಹುಯಿಲುಗೋಳ ನಾರಾಯಣ ರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ೧೦೦ ವರ್ಷ ಹಾಗೂ ವಿಶ್ವಮಾನವ ಕುವೆಂಪು ರಚಿಸಿದ ಜಯ ಭಾರತ ಜನನಿಯ ತನುಜಾತೆ ಗೀತೆ ೧೦೦ ವರ್ಷಗಳನ್ನು ಪೂರೈಸಿರುವ ನೆನಪಿಗಾಗಿ ಆಯೋಜಿಸಿದ್ದ ಶತಕಂಠದಲ್ಲಿ ಗೀತ ಸಂಗಮ ಕಾರ್ಯಕ್ರಮದಲ್ಲಿ ನೂರಾರು ಕಂಠಗಳು ಒಂದಾಗಿ ಹಾಡಿದವು.

ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ೨೫ಕ್ಕೂ ಅಧಿಕ ಗಾಯಕರು ತಮ್ಮ ಕಂಠಸಿರಿಯಲ್ಲಿ ವಿವಿಧ ಕನ್ನಡ ಚಲನಚಿತ್ರಗಳ ಗೀತೆಗಳನ್ನು ಪ್ರಸ್ತುತಪಡಿಸಿ ಕನ್ನಡದ ವೈಭವ ಸಾರಿದರು.

ಕಲೆ-ಸಂಸ್ಕೃತಿ ಉಳಿವಿಗೆ ಎಲ್ಲರ ಸೇವೆ ಮುಖ್ಯ: ಶತ ಕಂಠದಲ್ಲಿ ಗೀತ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು, ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ. ಈ ಮಣ್ಣಿನ ಪಾವಿತ್ರ‍್ಯತೆ ಕಾಪಾಡಬೇಕು. ಕಲೆ, ಸಾಹಿತ್ಯ ಸಂಸ್ಕ್ರತಿಯ ಉಳಿವಿಗೆ ಎಲ್ಲರ ಕೈಜೋಡಿಸಬೇಕು ಎಂದರು.

ಸ್ವಾತಂತ್ರ‍್ಯದ ಕಿಚ್ಚು ಹೆಚ್ಚಿಸುವ ಹಿನ್ನೆಲೆ ವಂದೇ ಮಾತರಂ, ಮಾತೃಭೂಮಿಯನ್ನು ಕೊಂಡಾಡುವ ಹಿನ್ನೆಲೆ ಜೈ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಗಳು ರಚನೆಯಾಗಿವೆ. ಅಂದಿನ ಕವಿಗಳ ಮನಸ್ಸಿನ ತುಡಿತ ನಾಡು ನುಡಿಗೆ ಮೀಸಲಾಗಿತ್ತು ಎಂದು ಅಭಿಪ್ರಾಯಿಸಿದರು.

ಕವಿಭಾವಗಳಿಗೆ ಕಾರಣ ಬೇಕಿಲ್ಲ. ಹೃದಯದ ಸ್ಪಂದನ ಅಕ್ಷರ, ಬರಹ ರೂಪದಲ್ಲಿ ಹೊರಬರುತ್ತದೆ. ಸುಂದರ ಭಾವನೆಗಳು ಎಲ್ಲರಲ್ಲೂ ಹುದುಗಿರುತ್ತದೆ. ಕವಿತೆಯ ಸಾಲುಗಳು ಹಾಡುಗಾರಿಕೆಯ ಮೂಲಕ ಭಾವನೆಗಳನ್ನು ಕೆದಕುತ್ತದೆ. ನವೀರಾಗಿ ಆವರಿಸಿಕೊಳ್ಳುತ್ತವೆ. ಅಕ್ಷರ, ಹಾಡಿಗೆ ಜೀವ ತುಂಬುವವರೇ ಹಾಡುಗಾರರು. ಹವ್ಯಾಸಗಳಲ್ಲಿ ಹಾಡುಗಾರಿಕೆ, ಸಂಗೀತ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಕನ್ನಡಸಿರಿ ಸ್ನೇಹ ಬಳಗದ ನೇತೃತ್ವದಲ್ಲಿ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾಧ್ಯಕ್ಷ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕನ್ನಡ ಸಿರಿ ಸ್ನೇಹ ಬಳಗದಿಂದ ೫೦ಕ್ಕೂ ಅಧಿಕ ಕಾರ್ಯಕ್ರಮ ನಡೆಸಲಾಗಿದೆ. ಸ್ವಾತಂತ್ರ‍್ಯ ಹಾಗೂ ಕನ್ನಡತನವನ್ನು ಉದ್ದೀಪಿಸುವ ಗೀತೆಗಳಿಗೆ ೧೦೦ ಹಾಗು ೧೫೦ ವರ್ಷಗಳು ತುಂಬಿದ ಹಿನ್ನೆಲೆ ನೂರು ಕಂಠಗಳನ್ನು ಒಂದುಗೂಡಿಸುವ ಪ್ರಯತ್ನ ಯಶಕಂಡಿದೆ ಎಂದರು.

ಸಾಹಿತಿ, ಕವಿಗಳು, ಲೇಖಕರು ಕನ್ನಡ ಸಾರಸ್ವತ ಲೋಕದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ನಾಡು ನುಡಿಯ ರಕ್ಷಣೆ, ಜಾಗೃತಿಗೆ ಶ್ರಮಿಸಿದ್ದಾರೆ. ಇವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ವAದೇ ಮಾತರಂ, ಜೈ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡುಗಳನ್ನು ೧೦೦ಕ್ಕೂ ಅಧಿಕ ಗಾಯಕರು ಏಕಕಾಲದಲ್ಲಿ ಹಾಡುವ ಮೂಲಕ ಗೀತ ಸಂಗಮ ಕಾರ್ಯಕ್ರಮವನ್ನು ಅಂದಗಾಣಿಸಿದರು. ನಂತರ ೨೫ಕ್ಕೂ ಅಧಿಕ ಗಾಯಕರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.

ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ವಹಿಸಿದ್ದರು. ಇದೇ ಸಂದರ್ಭ ಲೇಖಕಿ ಶರ್ಮಿಳಾ ರಮೇಶ್ ಅವರು ರಚಿಸಿರುವ ಅವ್ವಯ್ಯಜ್ಜಿ ಕಥೆಗಳು ಮುತ್ತು ರತ್ನದ ರಾಜಕುಮಾರಿ ಪುಸ್ತಕವನ್ನು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶಿವಪ್ಪ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾದ್ಯಾಪಕಿ ತಿಲೋತ್ತಮೆ ನಂದಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್, ಕನ್ನಡ ಸಿರಿ ಸ್ನೇಹ ಬಳಗದ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ, ಕನ್ನಡ ಸಿರಿ ಸ್ನೇಹ ಬಳಗದ ಪ್ರೇಮಾ, ನ.ಲ. ವಿಜಯ, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್, ಮಾಜೀ ಅಧ್ಯಕ್ಷೆ ಸುಮಾ ಸುದೀಪ್, ರೋಟರಿ ಅಧ್ಯಕ್ಷೆ ವೀಣಾ ಮನೋಹರ್, ಜೇಸೀ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಲಯನ್ಸ್ ಅಧ್ಯಕ್ಷ ರಾಮಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಿಕಾ ಕುಮಾರ್, ದೇವೀ ಬಳಗದ ಅಧ್ಯಕ್ಷೆ ಕುಮುದಿನಿ ಜಗದೀಶ್, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ಸೀತಾ ಬಳಗದ ಅಧ್ಯಕ್ಷೆ ಯಶೋಧ, ಹಿರಿಯ ನಾಗರಿಕರ ಟ್ರಸ್ಟ್ ಅಧ್ಯಕ್ಷ ಕೆ.ಜಿ. ಸುರೇಶ್ ಸೇರಿದಂತೆ ಇತರರು ಇದ್ದರು.

ಇದೇ ಸಂದರ್ಭ ಸ್ವಾತಂತ್ರö್ಯಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಅವರು ಸೋಮವಾರಪೇಟೆಗೆ ಆಗಮಿಸಿದ್ದ ಸಂದರ್ಭ ಬೇಳೂರಿನಲ್ಲಿರುವ ಮನೆಯಲ್ಲಿ ಆತಿಥ್ಯ ಒದಗಿಸಿದ ಕುಟುಂಬದ ಸದಸ್ಯರಾದ ಗುರುಮಲ್ಲೇಶ್ ಅವರನ್ನು ಕನ್ನಡ ಸಿರಿ ಸ್ನೇಹ ಬಳಗದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ನಿವೃತ್ತ ಚಿತ್ರಕಲಾ ಶಿಕ್ಷಕ ಊರಾ ನಾಗೇಶ್, ಎಂ.ಎಲ್. ಪ್ರೇಮಾ, ರಾಣಿ ರವೀಂದ್ರ, ವಿಜಯ್ ಹಾನಗಲ್ ನಿರ್ವಹಿಸಿದರು.