ಮಡಿಕೇರಿ, ಡಿ. ೬: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಘಟಕ ಹಾಗೂ ಸಂತ ಅನ್ನಮ್ಮ ದೇವಾಲಯದ ಸಹಯೋಗದಲ್ಲಿ ತಾ.೭ ರಂದು (ಇಂದು) ಕ್ರಿಸ್ಮಸ್ ಗಾನ ತರಂಗ ಜಿಲ್ಲಾ ಮಟ್ಟದ ಗಾಯನ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ಮೂರನೇ ವರ್ಷದ ಸ್ಪರ್ಧೆ ನಡೆಯಲಿದ್ದು, ವೀರಾಜಪೇಟೆ ವಲಯ ಶ್ರೇಷ್ಠ ಗುರು ಫಾ.ಜೇಮ್ಸ್ ಡೊಮೆನಿಕ್ ಧ್ವಜಾರೋಹಣ ಹಾಗೂ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ೨.೩೦ ಗಂಟೆಗೆ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಡಾ. ಫ್ರಾನ್ಸೀಸ್ ಸೆರಾವೋ ಎಸ್.ಜೆ. ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ.
ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯೇಶನ್ನ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಅಂತೋಣಿ ರಾಬಿನ್ ವಹಿಸಲಿದ್ದು, ವಿರಾಜಪೇಟೆ ಶ್ರೇಷ್ಠ ಗುರು, ಸ್ಪರ್ಧೆಯ ಪ್ರಧಾನ ಪೋಷಕ ಫಾ.ಜೇಮ್ಸ್ ಡೊಮೆನಿಕ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯೇಶನ್ನ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಪೋಷಕರಾಗಿ ಉದ್ಯಮಿ ಟೋನಿ ವಿನ್ಸೆಂಟ್, ವಿಶೇಷ ಆಹ್ವಾನಿತರಾಗಿ ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಡಿ.ಕೆ. ಬ್ರಿಜೇಶ್, ಬೆಂಗಳೂರು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಣಕಾಸಿನ ನಿರ್ದೇಶಕ ಫಾ.ಎ.ಜೆ. ಟೋನಿ, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕಾರ್ಯಕ್ರಮ ಸಹ ಪ್ರಾಯೋಜಕ ಭಾರತ ವಲಯ ಸಮುದಾಯ ಸೇವಾ ಅಧ್ಯಕ್ಷ ಮೈಮ್ ದಿನೇಶ್ ಮತಿಯಾಸ್ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಮಡಿಕೇರಿ ವಲಯ ಶ್ರೇಷ್ಠ ಗುರು ಫಾ.ಜಾರ್ಜ್ ದೀಪಕ್, ದಕ್ಷಿಣ ಮಧ್ಯ ಭಾರತ ವಲಯ ನಿರ್ದೇಶಕ ಮೈಮ್ ಮ್ಯಾಥ್ಯೂ ಕುರಿಯನ್, ವೀರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ಮದಲೈ ಮುತ್ತು, ಪೊನ್ನಂಪೇಟೆ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ಮ್ಯಾನುವೆಲ್ ಡಿ’ಸೋಜ, ಗೋಣಿಕೊಪ್ಪ ಸಂತ ತೋಮಸ್ ಶಾಲೆ ಪ್ರಾಂಶುಪಾಲ ಫಾ.ಆಂಟೋನಿ ಪಯಾಂಪಳ್ಳಿ, ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸಹಾಯಕ ಗುರು ಫಾ.ಅಭಿಲಾಶ್ ಜಾರ್ಜ್, ಕೆದಮುಳ್ಳೂರು ಫಾತಿಮಾ ಮಾತಾ ದೇವಾಲಯ ಧರ್ಮಗುರು ಫಾ.ವಿಲ್ಫ್ರೆಡ್ ಎ, ಕೂಡಿಗೆ ಪವಿತ್ರ ಕುಟುಂಬ ದೇವಾಲಯ ಧರ್ಮಗುರು ಫಾ.ಚಾರ್ಲ್ಸ್ ನೊರೋನ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯೇಶನ್ ಕಾರ್ಯಾಧ್ಯಕ್ಷ ಲಾರೆನ್ಸ್ ವಿ.ಎ., ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್ ಪಾಲ್ಗೊಳ್ಳಲಿದ್ದಾರೆ.
ಸೌತ್ ಕೊಡಗು ಕ್ರಿಶ್ಚಿಯನ್ ಅಸೋಶಿಯೇಶನ್ ಅಧ್ಯಕ್ಷ ಎ.ಜೆ.ಬಾಬು, ಕೊಡಗು ಕ್ರೆöÊಸ್ತ ಸೇವಾ ಸಂಘದ ಅಧ್ಯಕ್ಷ ಬೇಬಿ ಮ್ಯಾಥ್ಯೂ, ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್, ವೀರಾಜಪೇಟೆ ಸೆಂಟ್ ಜೋಸೆಫ್ ಕಾನ್ವೆಂಟ್ ಸಿಸ್ಟರ್ ರೋಸಿ ಡಿ’ಸ, ಪಾಲಿಬೆಟ್ಟ ಲೂರ್ದು ಮಾತೆ ಕಾನ್ವೆಂಟ್ ಸಿಸ್ಟರ್ ತೆರೇಸಾ ಆ್ಯನ್, ಸಂತ ಅನ್ನಮ್ಮ ದೇವಾಲಯ ಪಾಲನಾ ಸಮಿತಿ ಕಾರ್ಯದರ್ಶಿ ಆಂಟೋನಿ ಆಲ್ವಾರೀಸ್ ಭಾಗವಹಿಸಲಿದ್ದಾರೆ.
ಸಂಜೆ ೫ ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಲಿದ್ದು, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಅಂತೋಣಿ ರಾಬಿನ್ ಉಪಸ್ಥಿತರಿರಲಿದ್ದಾರೆ.
ಸ್ಪರ್ಧೆಯಲ್ಲಿ ಒಂದು ಧರ್ಮಕೇಂದ್ರದಿAದ ಹಾಗೂ ಒಂದು ವಿದ್ಯಾಕೇಂದ್ರದಿAದ ಒಂದು ತಂಡಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕನಿಷ್ಟ ೫ ಸದಸ್ಯರು ಗರಿಷ್ಠ ೨೦ ಸದಸ್ಯರು ಇರಬೇಕು. ವಿಜೇತರಿಗೆ ಪ್ರಥಮ ರೂ.೨೦,೦೦೦, ದ್ವಿತೀಯ ೧೫,೦೦೦ ಹಾಗೂ ತೃತೀಯ ರೂ.೧೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದೆಂದರು.
ಚಿತ್ರಕಲೆ ಸ್ಪರ್ಧೆ ಎರಡು ವಿಭಾಗಗಳಿದ್ದು, ಸ್ಪರ್ಧಿಗಳು ತಮ್ಮ ಸ್ವಂತ ಧರ್ಮಕೇಂದ್ರ ಅಥವಾ ಶಿಕ್ಷಣ ಸಂಸ್ಥೆಗೆ ಮಾತ್ರವೇ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ವಿಜೇತರಾದವರಿಗೆ ಪ್ರಥಮ ರೂ.೩,೦೦೦, ದ್ವಿತೀಯ ೨,೦೦೦ ಹಾಗೂ ತೃತೀಯ ೧,೦೦೦ ನಗದು ಹಾಗೂ ಟ್ರೋಫಿ ವಿತರಿಸಲಾಗುದೆಂದು ತಿಳಿಸಿದರು.
ಸ್ಪರ್ಧೆಯಲ್ಲಿ ೨೦ಕ್ಕಿಂತ ಹೆಚ್ಚಿನ ತಂಡಗಳು ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅಸೋಸಿಯೇಶನ್ ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್ ಮಾತನಾಡಿ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಕ್ರಿಶ್ಚಿಯನ್ ಡೆವಲಪ್ಮೆಂಟ್ ಬೋರ್ಡ್ (ಸಿಡಿಸಿ) ನಲ್ಲಿ ದೊರಕುವ ಯೋಜನೆಗಳ ಬಗ್ಗೆ ಸಮುದಾಯ ಬಾಂಧವರಿಗೆ ಅರಿವು ಮೂಡಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ನ ಕಾರ್ಯದರ್ಶಿ ಆಂಟೋಣಿ ಡಿ’ಸೋಜ, ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್, ಖಜಾಂಚಿ ಜೇಮ್ಸ್ ಡಿ’ಸೋಜಾ, ಸಂಘಟನಾ ಕಾರ್ಯದರ್ಶಿ ಮರ್ವೀನ್ ಲೋಬೋ ಉಪಸ್ಥಿತರಿದ್ದರು.