ವೀರಾಜಪೇಟೆ, ಡಿ. ೬: ವೀರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಹಾಗೂ ದಾನಿಗಳ ನೆರವಿನೊಂದಿಗೆ ಆಯೋಜಿತ ಜಿಲ್ಲಾಮಟ್ಟದ ಆಹಾರ ಮೇಳ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾಮಟ್ಟದ ಆಟೋಟ ಸ್ಪರ್ಧೆಯಲ್ಲಿ ಮೂರ್ನಾಡುವಿನ ಜ್ಞಾನಜ್ಯೋತಿ ಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದ ಬಾಕ್ಸ್ ಕ್ರಿಕೆಟ್‌ನಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆ (ಪ್ರ), ವೀರಾಜಪೇಟೆಯ ಕೂರ್ಗ್ ವ್ಯಾಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದ ಥ್ರೋಬಾಲ್ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆ ಪ್ರಥಮ ಸ್ಥಾನ ಹಾಗೂ ವೀರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (ದ್ವಿ)ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಜ್ಞಾನಜ್ಯೋತಿ ಶಾಲೆ ಮೂರ್ನಾಡು (ಪ್ರ), ವೀರಾಜಪೇಟೆ ಬ್ರೆöÊಟ್ ಪಬ್ಲಿಕ್ ಶಾಲೆ (ದ್ವಿ), ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಜ್ಞಾನಜ್ಯೋತಿ ಶಾಲೆ ಮೂರ್ನಾಡು, (ಪ್ರ) ಸ್ಥಾನ ಹಾಗೂ ವೀರಾಜಪೇಟೆಯ ರೂಲಿಕ್ಸ್ ಶಾಲೆ (ದ್ವಿ) ಸ್ಥಾನ ಪಡೆದುಕೊಂಡಿತು. ಫುಟ್ಬಾಲ್ ಕ್ರೀಡೆಯಲ್ಲಿ ಅಮ್ಮತ್ತಿಯ ನೇತಾಜಿ ಪ್ರೌಢಶಾಲೆ(ಪ್ರ), ಮೂರ್ನಾಡು ಪ್ರೌಢಶಾಲೆ (ದ್ವಿ) ಸ್ಥಾನ ಪಡೆದುಕೊಂಡಿತು. ವಾಲಿಬಾಲ್ ಕ್ರೀಡೆಯಲ್ಲಿ ಸಿದ್ದಾಪುರ ಪ್ರೌಢಶಾಲೆ (ಪ್ರ) ವೀರಾಜಪೇಟೆಯ ಮೊರಾರ್ಜಿ ವಸತಿ ಶಾಲೆ (ದ್ವಿ) ಸ್ಥಾನ ಪಡೆದುಕೊಂಡಿತು. ಫುಡ್‌ಫೆಸ್ಟ್ನಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಬಗೆಯ ತಿಂಡಿ ತಿನಿಸುಗಳ ಅಂಗಡಿಗಳನ್ನಿಟ್ಟು ಯಜ್ಞ ಮತ್ತು ತಂಡ, ವಿಜ್ಞಾನ ವಿಭಾಗ (ಪ್ರ), ಲಿಖಿತ್ ಮತ್ತು ತಂಡ,ವಾಣಿಜ್ಯ ವಿಭಾಗ (ದ್ವಿ) ಪುನೀತ್ ಮತ್ತು ತಂಡ, ಕಲಾವಿಭಾಗ (ತೃ) ಸ್ಥಾನ ಪಡೆದರು. ಫುಡ್ ಫೆಸ್ಟ್ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.

ಸಮಾರೋಪ ಸಮಾರಂಭ

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್. ಸಲ್ಡಾನ ಅವರು ಮಾತನಾಡಿ, ವೀರಾಜಪೇಟೆಯಲ್ಲಿ ಆರಂಭಗೊAಡ ಕಾವೇರಿ ಮಹಿಳಾ ಕಾಲೇಜು ಪದವಿ ಪೂರ್ವ ಕಾಲೇಜಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿದೆ. ಕಾವೇರಿ ಕಾರ್ನಿವಲ್ ಆಯೋಜಿಸುವ ಬಗ್ಗೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರು, ಸಹಕಾರ ನೀಡುತ್ತಾ ಬರುತ್ತಿದ್ದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಕಾಲೇಜಿನ ವತಿಯಿಂದ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಓದು ಮುಗಿಸಿ ಕಾಲೇಜಿನಿಂದ ಹೊರಹೋದಾಗ ಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಬದುಕಿನಲ್ಲಿ ಸಾಧನೆಯ ಮೆಟ್ಟಿಲು ಏರಲು ಶಕ್ತಿ ತುಂಬುವAತಹ ಕಾರ್ಯಕ್ರಮಗಳನ್ನು ಕಾಲೇಜು ವತಿಯಿಂದ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಮ್ಮತ್ತಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸೋಮೆಯಂಡ ಎಸ್. ಪೂಣಚ್ಚ, ಮುಳಿಯ ಚಿನ್ನಾಭರಣ ಮಳಿಗೆಯ ಗೋಣಿಕೊಪ್ಪಲು ಶಾಖೆಯ ವ್ಯವಸ್ಥಾಪಕರಾದ ಕಿಶೋರ್ ಬಿ.ಎಸ್, ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ನುಚ್ಚುಮಣಿಯಂಡ ಎಂ.ನಾಣಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಆಲೆಮಾಡ ಗಾಯತ್ರಿ, ಪುಟ್ಟಿಚಂಡ ಡಯಾನ, ಕಾಳೇಂಗಡ ದಮಯಂತಿ ಮತ್ತಿತರರು ಉಪಸ್ಥಿತರಿದ್ದರು.