ನಾಪೋಕ್ಲು, ಡಿ. ೬: ಕೊಡವ ಕುಟುಂಬಗಳಲ್ಲಿ ಕ್ರೀಡಾ ಸ್ಪೂರ್ತಿ ಏರು ಗತಿಯಲ್ಲಿದ್ದು ವರ್ಷದಿಂದ ವರ್ಷಕ್ಕೆ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳು ಕೊಡಗಿನಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ- ೨೦೨೬ ರ ಚಿನ್ಹೆ(ಲೋಗೋ) ಬಿಡುಗಡೆಗೊಳಿಸಿ ಮಾತನಾಡಿದರು.

ಕೊಡಗಿನಲ್ಲಿ ಹಾಕಿ ಕ್ರೀಡೆ ಗಿನ್ನಿಸ್ ದಾಖಲೆ ಮಾಡಿದೆ. ಅದರಂತೆ ಹಗ್ಗಜಗ್ಗಾಟ ಕ್ರೀಡೆಯು ಕೂಡ ದಾಖಲೆ ಮಾಡುವಂತಾಗಲಿ. ಇದಕ್ಕೆ ವಿವಿಧ ಕುಟುಂಬಸ್ಥರು ನಡೆಸುವ ಪ್ರಾಮಾಣಿಕ ಪ್ರಯತ್ನ ಫಲ ನೀಡಲಿ, ಕ್ರೀಡಾಕೂಟ ಸುಸೂತ್ರ ವಾಗಿ ಜರುಗಲಿ ಎಂದು ಶುಭ ಹಾರೈಸಿದರು .

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಕ್ರೀಡಾಕೂಟದ ಯಾಂತಮ್ (ಹಾಡು) ಬಿಡು ಗಡೆಗೊಳಿಸಿ ಮಾತನಾಡಿ, ಪಂಜಾಬ್ ಬಿಟ್ಟರೆ ಕೊಡಗು ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕೊಡವ ಕುಟುಂಬಗಳ ನಡುವಿನ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಕ್ರೀಡೆಗಳು ಜನಪ್ರಿಯ. ಕ್ರೀಡೆಯಿಂದ ಮನಶಾಂತಿ, ಆರೋಗ್ಯ ಲಭಿ ಸುತ್ತದೆ. ಕ್ರೀಡೆಯಿಂದಾಗಿ ಯುವ ಜನರು ಭವಿಷ್ಯ ಕಂಡುಕೊAಡಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು. ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಕ್ರೀಡೆ ಜನಪ್ರಿಯವಾಗುತ್ತಿದ್ದಂತೆ ವಿವಿಧ ಜನಾಂಗದವರೂ ಜಿಲ್ಲೆಯಲ್ಲಿ ಹಗ್ಗ ಜಗ್ಗಾಟ ಕ್ರೀಡೆಯನ್ನು ಆಯೋಜಿಸುತ್ತಿದ್ದಾರೆ. ಕೊಡಗಿನ ಮಣ್ಣು, ನೀರು, ಗಾಳಿ, ಪರಿಸರ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಕೊಡಗಿನ ಕ್ರೀಡೆ ಹಾಗೂ ಆಚಾರ, ವಿಚಾರಗಳು ವಿಭಿನ್ನವಾಗಿವೆ. ಇತರರನ್ನು ಗೌರ ವಿಸುವುದು ಇಲ್ಲಿನ ಜನರ ಗುಣವಾಗಿದೆ. ಇಲ್ಲಿಯ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಶ್ರೀಮಂತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ಮಾತನಾಡಿ, ಹಗ್ಗಜಗ್ಗಾಟ ಒಂದು ಪ್ರಾಚೀನ ಕಲೆಯಾಗಿದ್ದು ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿತ್ತು. ನಂತರ ಇದನ್ನು ಕ್ರೀಡೆಯಾಗಿ ಪರಿಗಣಿಸಲಾಯಿತು. ೨೦ ವರ್ಷಗಳ ಕಾಲ ಒಲಂಪಿಕ್ಸ್ನಲ್ಲಿ ಸ್ಪರ್ಧೆಯಾಗಿ ಜನಪ್ರಿಯವಾಗಿತ್ತು ಎಂದರು. ಕೊಡಗಿನ ಯುವಕರು ಎಲ್ಲಾ ಕ್ರೀಡೆಗಳಲ್ಲಿ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳಿಗೆ, ಯುವ ಜನರಿಗೆ ಸೂಕ್ತ ತರಬೇತಿ ನೀಡಿ ಅವರು ಕ್ರೀಡಾ ಕ್ಷೇತ್ರದಲ್ಲಿ ಮೇಲೆ ಬರುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಕೊಡವ ಟಗ್ ಆಫ್ ವಾರ್ ಕ್ರೀಡೆಯ ಪ್ರಾರಂಭದಿAದ ಇಲ್ಲಿಯವರೆಗೆ ಆಯೋಜಿಸಿದ ಕ್ರೀಡಾಕೂಟದ ಅಂಕೆ ಸಂಖ್ಯೆಗಳ ಒಳಗೊಂಡ ಮಾಹಿತಿ ನೀಡಿ ಮುಂದೆ ನಡೆಯುವ ಕ್ರೀಡಾ ಕೂಟದಲ್ಲಿ ಪುರುಷರು ಹಾಗೂ ಮಹಿಳೆಯರು ಅಲ್ಲದೆ ೧೪ ವರ್ಷದ ಮಕ್ಕಳಿಗೂ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)

ಅವಕಾಶ ನೀಡಲಾಗುವುದು ಎಂದರು. ಈ ಸಂದರ್ಭ ೨೦೨೭ ಕೊಡವ ಟಗ್ ಆಫ್ ವಾರ್ ಕ್ರೀಡಾಕೂಟವನ್ನು ವಿರಾಜಪೇಟೆಯಲ್ಲಿ ನಡೆಸಲು ಒಪ್ಪಿಕೊಂಡಿರುವ ಮುಂಡಿಯೋಳAಡ ಕುಟುಂಬಕ್ಕೆ ಅಕಾಡೆಮಿ ವತಿಯಿಂದ ಒಪ್ಪಿಗೆ ಪತ್ರವನ್ನು ನೀಡಿ ಶುಭ ಹಾರೈಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕೇ ರ್ ಬಲಿ ಸಮಿತಿ ಅಧ್ಯಕ್ಷ ಕೆ. ಬೋಪಣ್ಣ ವಹಿಸಿದ್ದು ಚೀಯಕಪೂವಂಡ ಕುಟುಂಬ ಸಮಿತಿಯ ಅಧ್ಯಕ್ಷ ಚೀಯಕಪೂವಂಡ ಎಂ. ಅಪ್ಪಚ್ಚು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾನಾಡಿದರು.

ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ಸಿ.ಎ. ನಾಚಪ್ಪ, ಜಂಟಿ ಕಾರ್ಯದರ್ಶಿ ಸಚಿನ್ ಮುತ್ತಪ್ಪ, ಖಜಾಂಚಿ ಸತೀಶ್ ದೇವಯ್ಯ, ಟೂರ್ನಮೆಂಟ್ ಡೈರೆಕ್ಟರ್ ಸಿ.ಡಿ. ನವೀನ್, ನಿರ್ದೇಶಕರಾದ ಪ್ರಕಾಶ್ ಮಂದಪ್ಪ, ಸುನಿಲ್ ಮಾಚಯ್ಯ, ಸಚಿನ್ ಪೂವಯ್ಯ, ಪಾಲ್ಗೊಂಡಿದ್ದರು.. ಯಶಸ್ವಿ ನಾಚಪ್ಪ ಪ್ರಾರ್ಥಿಸಿದರೆ, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ಶ್ವತನ್ ಚಂಗಪ್ಪ ವಂದಿಸಿದರು.

-ದುಗ್ಗಳ ಸದಾನಂದ.