ಪೊನ್ನಂಪೇಟೆ, ಡಿ. ೬: ಕಾರಣಾಂತರಗಳಿAದ ೧೯೫೫ ನೇ ಇಸವಿಯಿಂದ ಸ್ಥಗಿತಗೊಂಡಿದ್ದ, ನೂರಾರು ವರ್ಷಗಳ ಇತಿಹಾಸವಿರುವ, ಕೊಡಗಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವ, ದಿ.ನಡಿಕೇರಿಯಂಡ ಚಿಣ್ಣಪ್ಪನವರು ಬರೆದಿರುವ ಪಟ್ಟೋಲೆ ಪಳಮೆಯಲ್ಲಿ ಉಲ್ಲೇಖವಾಗಿರುವ ಪೊನ್ನಂಪೇಟೆ ತಾಲೂಕಿನ ತೂಚಮಕೇರಿ, ಚಿಕ್ಕಮುಂಡೂರು, ಮುಗುಟಗೇರಿ ಮತ್ತು ನಡಿಕೇರಿ ಗ್ರಾಮಗಳಿಗೆ ಸಂಬAಧಪಟ್ಟ ಗುದ್ರೋಡೆ ಮಂದ್‌ನಮ್ಮೆಗೆ ತಾ. ೬ ರಂದು ಅದ್ದೂರಿಯಾಗಿ ಮರು ಚಾಲನೆ ನೀಡಲಾಯಿತು.

ಮೊದಲಿಗೆ ಮಂದ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಅರಳಿಕಟ್ಟೆಯಲ್ಲಿ ನಡಿಕೇರಿ ಊರು ತಕ್ಕರಾದ ಕೋಳೆರ ನರೇಂದ್ರ ಮತ್ತು ಗ್ರಾಮಸ್ಥರು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ನಡಿಕೇರಿ, ಚಿಕ್ಕಮುಂಡೂರು ಮತ್ತು ಮುಗುಟಗೇರಿಯ ತಕ್ಕ ಮುಖ್ಯಸ್ಥರು ಕೊಡವರ ಸಂಪ್ರದಾಯದAತೆ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮಂದ್ ನಮ್ಮೆಗೆ ಚಾಲನೆ ನೀಡಲಾಯಿತು. ನಂತರ ಚಿಕ್ಕಮುಂಡೂರು, ತೂಚಮಕೇರಿ, ಮುಗುಟಗೇರಿ ಮತ್ತು ನಡಿಕೇರಿ ತಕ್ಕ ಮುಖ್ಯಸ್ಥರು ಗ್ರಾಮಸ್ಥರೊಡಗೂಡಿ, ಮಂದ್‌ಗೆ ಅತಿಥಿಗಳಾಗಿ ಆಗಮಿಸಿದ ಅಂಜಿಕೇರಿ ನಾಡ್ ತಕ್ಕ ಮುಖ್ಯಸ್ಥರನ್ನು ಕೊಡವರ ಸಂಪ್ರದಾಯದAತೆ ಕುಪ್ಯ ಚ್ಯಾಲೆ, ತಲೆಗೆ ವಸ್ತ್ರ ಧರಿಸಿ ತಳಿಯತಕ್ಕಿ ಬೊಳಕ್ ಮತ್ತು ಒಡ್ಡೋಲಗದೊಂದಿಗೆ ಸ್ವಾಗತಿಸಿದರು.

ನಂತರ ನಾಲ್ಕು ಗ್ರಾಮಸ್ಥರು ಒಟ್ಟಾಗಿ ಅರಳಿಕಟ್ಟೆಯ ಸುತ್ತ ಪುತ್ತರಿ ಕೋಲಾಟ ಆಡಿದರು. ನಾಲ್ಕು ಗ್ರಾಮಸ್ಥರ ಬೇರೆ ಬೇರೆ ತಂಡಗಳ ಮಹಿಳೆಯರಿಂದ ಉಮ್ಮತಾಟ್, ಪುರುಷರ ತಂಡದಿAದ ಕೋಲಾಟ್, ವಾಲಗತಾಟ್ ಮತ್ತು ಪರೆಯಕಳಿ ಮೂಡಿಬಂತು.

ಇದೇ ಸಂದರ್ಭ ಈ ಮಂದ್‌ಗೆ ಹೋಗುವ ರಸ್ತೆಯ ವ್ಯಾಜ್ಯ ಪರಿಹರಿಸಲು ಮುಂದಾಳತ್ವ ವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ನ್ಯಾಯಪೀಠದ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಅವರನ್ನು, ನಾಲ್ಕು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉತ್ತಪ್ಪ ಅವರು ೫೫ ವರ್ಷಗಳಿಂದ ಕಾರಣಾಂತರಗಳಿAದ ನಿಂತು ಹೋಗಿದ್ದ ಈ ಮಂದ್‌ನಮ್ಮೆಯು ಇಂದು ನಡೆಯುತ್ತಿರುವುದು ಹೆಮ್ಮೆಯ ವಿಚಾರ, ಇದು ಸಾವಿರಾರು ವರ್ಷಗಳವರೆಗೆ ಹೀಗೆಯೇ ಮುಂದುವರಿಯಲಿ ಎಂದು ಹಾರೈ ಸಿದರು. ಕಾರ್ಯಕ್ರಮದಲ್ಲಿ ವಾಲಗ ತಾಟ್ ಪೈಪೋಟಿಯಲ್ಲಿ ಪ್ರಥಮ ಸ್ಥಾನ ಪಡೆದ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)

ಮಾಣಿಯಪAಡ ಟ್ರಿಯಾನ ದೇಚಕ್ಕ, ದ್ವಿತೀಯ ಸ್ಥಾನ ಪಡೆದ ಹಿತಾರ್ಥ್ ಕಾರ್ಯಪ್ಪ, ತೃತೀಯ ಸ್ಥಾನ ಪಡೆದ ಗಾನವಿ ಪೊನ್ನಮ್ಮ ಅವರಿಗೆ ಬಹುಮಾನ ವಿತರಿಸಲಾಯಿತು. ಕೋಲಾಟ್, ಉಮ್ಮತಾಟ್ ಮತ್ತು ಪರೆಯಕಳಿ ತಂಡಗಳಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾಲ್ಕು ಊರಿನ ತಕ್ಕ ಮುಖ್ಯಸ್ಥರಾದ ಕೋಳೆರ ನರೇಂದ್ರ, ಪೆಮ್ಮಂಡ ಅರುಣ, ಕಳ್ಳಿಚಂಡ ರಾಬಿನ್, ಮಲಚೀರ ಬೋಜಪ್ಪ, ಅಂಜಿಕೇರಿ ನಾಡ್ ತಕ್ಕ ಮುಖ್ಯಸ್ಥರಾದ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಮತ್ತು ತೂಚಮಕೇರಿ, ಮುಗುಟಗೇರಿ, ಚಿಕ್ಕಮುಂಡೂರು ಮತ್ತು ನಡಿಕೇರಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.