.ಪೊನ್ನಂಪೇಟೆ: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಶ್ರೀ ತೊಣಕೇರಿ ಭಗವತಿ ದೇವಸ್ಥಾನದಲ್ಲಿ ಸಂಪ್ರದಾಯದAತೆ ಆಚರಿಸಿಕೊಂಡು ಬರುತ್ತಿರುವ ಕೊಡಗಿನ ಸುಗ್ಗಿ ಹಬ್ಬ ಪುತ್ತರಿಯನ್ನು ಸಂಭ್ರಮದಿAದ ಆಚರಿಸಲಾಯಿತು.
ಬೆಳಿಗ್ಗೆ ೮ ಗಂಟೆಗೆ ಊರಿನ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರಾದ ಮುದ್ದಿಯಡ ಗಣೇಶ್ ಅವರ ಗದ್ದೆಯಲ್ಲಿ ದೇವಸ್ಥಾನದ ಅರ್ಚಕ ಅಶೋಕ್ ಭಟ್ ಭತ್ತದ ತೆನೆಗೆ ಪೂಜೆ ಸಲ್ಲಿಸಿದರು. ನಂತರ ಊರಿನವರಿಗೆಲ್ಲಾ ಕದಿರು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಕಳ್ಳಿಚಂಡ ಶಂಭು ಪೂವಯ್ಯ, ಊರಿನ ತಕ್ಕ ಮುಖ್ಯಸ್ಥ ಮಲಚೀರ ಬೋಜಪ್ಪ, ಚೀರಂಡ ಕಂದಾ ಸುಬ್ಬಯ್ಯ, ಮುದ್ದಿಯಡ ಮಂಜು ಗಣಪತಿ, ಆಲೆಮಾಡ ನವೀನ್ ದೇವಯ್ಯ, ಮುದ್ದಿಯಡ ಚಾಮಿ ಸೋಮಯ್ಯ, ಮುದ್ದಿಯಡ ಗಣೇಶ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಭಾಗಮಂಡಲ: ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿAದ ಗುರುವಾರ ಆಚರಿಸಲಾಯಿತು. ದೇವಾಲಯದ ಸಮೀಪದ ಗದ್ದೆಗೆ ತೆರಳಿ ಪೂಜೆ ವಿಧಿವಿಧಾನ ನೆರವೇರಿಸಲಾಯಿತು. ನಿಗದಿತ ಸಮಯದಲ್ಲಿ ಪೊಲಿಪೊಲಿ ಬಾ ಉದ್ಘೋಷಗಳ ನಡುವೆ ಪಟಾಕಿಗಳ ಮೊರೆತದೊಂದಿಗೆ ಕದಿರನ್ನು ಕೊಯ್ಲುಮಾಡಿ ಭತ್ತದ ಕದಿರಿನೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದಲ್ಲಿ ವಿಶೇಷ ಧಾನ್ಯಲಕ್ಷಿö್ಮ ಪೂಜೆಯನ್ನು ನೆರವೇರಿಸಿದರು.
ಪ್ರಥಮವಾಗಿ ಕದಿರು ದೇವರ ಗರ್ಭಗುಡಿ ಸೇರಿದಂತೆ ದೇವಾಲಯದ ವಿವಿಧ ಕಡೆಯಲ್ಲಿ ಕಟ್ಟಲಾಯಿತು. ಭಕ್ತರಿಗೆ ಕದಿರು, ತೀರ್ಥಪ್ರಸಾದವನ್ನು ವಿತರಿಸಲಾಯಿತು. ದೇವಾಲಯದಲ್ಲಿ ನಡೆದ ಆಚರಣೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಪೊನ್ನAಪೇಟೆ: ಪೊನ್ನಂಪೇಟೆ ದೇವಸ್ಥಾನದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಪುತ್ತರಿ ಆಚರಿಸಲಾಯಿತು. ಗದ್ದೆಯಿಂದ ಕದಿರು ತೆಗೆದುಕೊಂಡು ಬಂದು ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ನಂತರ ಸಾರ್ವಜನಿಕರು ಮನೆಗೆ ಕದಿರು ತೆಗೆದುಕೊಂಡು ಹೋಗುವ ಮೂಲಕ ಧಾನ್ಯ ಲಕ್ಷಿö್ಮಯನ್ನು ಮನೆ ತುಂಬಿಸಿಕೊAಡರು. ಪೊನ್ನಂಪೇಟೆ ವ್ಯಾಪ್ತಿಯ ನೂರಾರು ನಾಗರಿಕರು ಪಾಲ್ಗೊಂಡಿದ್ದರು.ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆ ನಡೆಯಿತು.
ಕುಶಾಲನಗರ ಕೊಡವ ಸಮಾಜದ ಆವರಣದಲ್ಲಿ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುAಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಅಂಜಪರವAಡ ಸನ್ನಿ ತಮ್ಮಯ್ಯ ಅವರು ಕುತ್ತಿ ಪೂಜೆ ನೆರವೇರಿಸಿ ಆವರಣದ ಗದ್ದೆಗೆ ತೆರಳಿ ಸಾಂಪ್ರದಾಯಿಕವಾಗಿ ಕದಿರು ತೆಗೆದರು. ನಂತರ ಕದಿರು ವಿತರಣೆ ನಡೆಯಿತು. ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ, ಸಹ ಕಾರ್ಯದರ್ಶಿ ಮೈಂದಪAಡ ಜಗದೀಶ್, ಖಜಾಂಚಿ ಬೊಳ್ಳಚಂಡ ಮುತ್ತಣ್ಣ, ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಸಾರ್ವಜನಿಕರು ಇದ್ದರು.ಮುಳ್ಳೂರು: ಸಮೀಪದ ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬವನ್ನು ಸಾಮೂಹಿಕವಾಗಿ ಸಂಭ್ರಮದಿAದ ಆಚರಿಸಲಾಯಿತು.
ಅರೆಭಾಷೆ ಗೌಡ ಸಮಾಜದ ಬಾಂಧವರು ಗ್ರಾಮದ ಬೈಮನ ಕಾಂತಿ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಹುತ್ತರಿ ಹಬ್ಬದ ಪೂಜೆ ನೆರವೇರಿಸಿ ಕದಿರು ತೆಗೆದರು.
ನಂತರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭತ್ತದ ತೆನೆಯಲ್ಲಿ ನೆರೆ ಕಟ್ಟಿದರು ಬಳಿಕ ಸಮೂದಾಯದವರಿಗೆ ಕದಿರು ನೆರೆಯನ್ನು ವಿತರಣೆ ಮಾಡಿದರು. ಸಾಮೂಹಿಕವಾಗಿ ಹುತ್ತರಿ ಹಬ್ಬದ ಭೋಜನ ಸವಿದರು.
ಈ ಸಂದರ್ಭ ಸಮಾಜದ ಪ್ರಮುಖರಾದ ಎಡಿಕೇರಿ ಜಯರಾಮ್, ಪರ್ಲಕೋಟಿ ಸತೀಶ್, ಕರಕರನ ಪೆಮ್ಮಯ್ಯ, ಬೈಮನ ಮಹೇಶ್, ಕೆಮ್ಮಾರನ ದೇವಿಕಾಂತ್, ಕೈಬಿಲಿ ಬೇಬಿ, ಬೈಮನ ಪ್ರಕಾಶ್, ಪಟ್ಟಡ ಮೀನಾಕ್ಷಿ ಮುಂತಾದವರು ಇದ್ದರು.ಸಿದ್ದಾಪುರ: ಸಿದ್ದಾಪುರ ಸಮೀಪದ ಇಂಜಿಲಗೆರೆ ಪುಲಿಯೇರಿ ಗ್ರಾಮದ ಪೂಮಡಪುರದ ಮುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬವನ್ನು ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿAದ ಆಚರಿಸಲಾಯಿತು. ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳೊAದಿಗೆ ರಾತ್ರಿ ಶ್ರೀ ಮುತ್ತಪ್ಪ ದೇವರ ಮತ್ತು ಗುಳಿಗ ವಸೂರಿ ಮಾಲಾ ದೇವರುಗಳ ವೆಳ್ಳಾಟಂ ನಡೆಯಿತು.
ಬಳಿಕ ಸಮೀಪದ ಗದ್ದೆಯಲ್ಲಿ ಕದಿರು ತೆಗೆಯಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು. ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಪುತ್ತರಿ ಧಾರೆ ಪೂಜೆಯನ್ನು ನೆರವೇರಿಸಲಾಯಿತು.
ಊರಿನ ತಕ್ಕರಾದ ಮುಳ್ಳಂಡ ಕರಣ್ ಕಾವೇರಪ್ಪ ಅವರ ಸಮ್ಮುಖದಲ್ಲಿ ನಾಗ, ಕ್ಷೇತ್ರಪಾಲಕ, ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ಶ್ರೀ ಭಗವತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹಿರಿಯರಾದ ನಿವೃತ್ತ ಕ್ಯಾಪ್ಟನ್ ಮುಳ್ಳಂಡ ತಿಮ್ಮಯ್ಯ ಮಾತನಾಡಿ ಕೊಡಗಿನ ಸಂಪ್ರದಾಯದAತೆ ಪುತ್ತರಿ ನಮ್ಮೆಯ ಆಚರಣೆಯನ್ನು ಮಾಡುತ್ತಾ ಬರುತಿದ್ದು ಈ ವರ್ಷವು ಸಂಪ್ರದಾಯಬದ್ಧವಾಗಿ ನಮ್ಮೆಯನ್ನು ಆಚರಿಸುತಿದ್ದು ಎಲ್ಲರಿಗೂ ಒಳಿತಾಗಲೆಂದು ಬೇಡಿಕೊಂಡರು. ಮಹಾಮಂಗಳಾರತಿಯ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಿತು.ಸೋಮವಾರಪೇಟೆ: ಧಾನ್ಯ ಲಕ್ಷಿö್ಮÃಯನ್ನು ಮನೆ ತುಂಬಿಸಿಕೊಳ್ಳುವ ಹುತ್ತರಿ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯ ವಿವಿಧೆಡೆ ಸಂಭ್ರಮದಿAದ ಆಚರಿಸಲಾಯಿತು.
ಇಲ್ಲಿನ ಕೊಡವ ಸಮಾಜದ ವತಿಯಿಂದ ಆಂಜನೇಯ ದೇವಾಲಯ ಬಳಿಯಿರುವ ಗದ್ದೆಯಲ್ಲಿ ನೆರೆಕಟ್ಟಲಾಯಿತು. ನಂತರ ವಿಶೇಷ ಪೂಜೆ ಸಲ್ಲಿಸಿ, ಕದಿರು ತೆಗೆದು ಕೊಡವ ಸಮಾಜಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರಿಗೆ ವಿತರಿಸಲಾಯಿತು. ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು. ಸಮೀಪದ ಅರೆಯೂರು ಗ್ರಾಮದಲ್ಲಿ ಹಬ್ಬವನ್ನು ಸಡಗರದಿಂದ ಸಾಮೂಹಿಕವಾಗಿ ಆಚರಿಸಲಾಯಿತು. ಗ್ರಾಮದ ಸಮುದಾಯ ಭವನದಿಂದ ಗ್ರಾಮಸ್ಥರು, ನೆಂಟರಿಷ್ಟರೊAದಿಗೆ ವಾದ್ಯಗೋಷ್ಠಿಯ ಮೂಲಕ ದೇವಾಲಯದ ಗದ್ದೆಗೆ ತೆರಳಿ ಕದಿರು ತೆಗೆಯಲಾಯಿತು. ನಂತರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಕದಿರು ವಿತರಿಸಲಾಯಿತು.
ಗ್ರಾಮದ ಅಧ್ಯಕ್ಷ ಕೆ.ಎನ್. ಪಾಪಯ್ಯ, ಉಪಾಧ್ಯಕ್ಷ ವೆಂಕಟೇಶ್, ಮಾಜೀ ಅಧ್ಯಕ್ಷ ಅರುಣ್, ಕಿರಣ್, ಕುಮಾರ್, ದರ್ಶನ್, ಯಶ್ವಂತ್, ಉತ್ತಪ್ಪ, ಹರೀಶ್, ಸಂಪತ್, ವಸಂತ್, ದೇವಪ್ಪ ಸೇರಿದಂತೆ ಇತರರು ಇದ್ದರು.
ಯಡವನಾಡು ಗ್ರಾಮದಲ್ಲಿ ಗ್ರಾಮಸ್ಥರು ಹುತ್ತರಿ ಹಬ್ಬವನ್ನು ಸಂಭ್ರಮಿಸಿದರು. ಶಿವಬಸವೇಶ್ವರ ದೇವಾಲಯಕ್ಕೆ ಸೇರಿದ ಗದ್ದೆಯಲ್ಲಿ ಕದಿರು ತೆಗೆದು ಧಾನ್ಯಲಕ್ಷಿö್ಮÃಯನ್ನು ಘೋಷಣೆಗಳೊಂದಿಗೆ ದೇವಾಲಯಕ್ಕೆ ತರಲಾಯಿತು. ನಂತರ ಪೂಜೆ ಸಲ್ಲಿಸಿ ಗ್ರಾಮಸ್ಥರಿಗೆ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಗಣೇಶ್, ಖಜಾಂಚಿ ಭಾನುಪ್ರಕಾಶ್, ಪ್ರಮುಖರಾದ ಟಿ.ಕೆ.ರಮೇಶ್, ಡಿ.ಎಂ. ರಮೇಶ್, ಹೇಮಂತ್ ಪಾರೇರ, ಪಾಣತ್ತಲೆ ಸಣ್ಣಯ್ಯ, ನವೀನ್, ವಿಶ್ವನಾಥ್, ವೈ.ಬಿ. ಮಲ್ಲಪ್ಪ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಇದರೊಂದಿಗೆ ತಾಲೂಕಿನ ಗರ್ವಾಲೆ, ಸೂರ್ಲಬ್ಬಿ, ಕಿರಗಂದೂರು, ತಾಕೇರಿ, ಅಬ್ಬೂರುಕಟ್ಟೆ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಸಾಮೂಹಿಕ ಹುತ್ತರಿ ಆಚರಣೆಗಳು ನಡೆದವು.ಪೊನ್ನಂಪೇಟೆ: ಧಾನ್ಯಲಕ್ಷಿö್ಮಯನ್ನು ಮನೆಗೆ ಬರಮಾಡಿಕೊಳ್ಳುವ ಪುತ್ತರಿ ಹಬ್ಬವನ್ನು ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಶ್ರೀ ಮಹದೇವರ ದೇವಸ್ಥಾನದಲ್ಲಿ ಸಂಭ್ರಮದಿAದ ಆಚರಿಸಲಾಯಿತು.
ಶ್ರೀ ಮಹದೇವರ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಕಾಕಮಾಡ ಆದರ್ಶ ಅವರ ನೇತೃತ್ವದಲ್ಲಿ ಅರ್ಚಕರಾದ ಸುದರ್ಶನ್ ಭಟ್ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆಯ ಮೂಲಕ ದೇವರ ಗದ್ದೆಗೆ ತೆರಳಿ ಕದಿರು ತೆಗೆಯಲಾಯಿತು. ಬಳಿಕ ಮೆರವಣಿಗೆಯ ಮೂಲಕ ಬಂದು ದೇವರಿಗೆ ಪೂಜೆ ಸಲ್ಲಿಸಿ, ದೇವರಿಗೆ ಕದಿರು ಹಾಕಿ ತೀರ್ಥ ಪ್ರಸಾದ ಸ್ವೀಕರಿಸಲಾಯಿತು.
ಈ ಸಂದರ್ಭ ಗ್ರಾಮಸ್ಥರಾದ ಉತ್ತಯ್ಯ ಹಾಗೂ ಆರ್ಚಕರಾದ ಸುದರ್ಶನ್ ಭಟ್ ಅವರು ಪುತ್ತರಿ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.ಮಡಿಕೇರಿ: ಕಾಯಮಾನಿ ಭಗವತಿ ಕ್ಷೇತ್ರ ಹಾಗೂ ಅಮ್ಮಳೆ ನಾಗ ದೇವರ ಜಂಟಿ ವತಿಯಿಂದ ಕುಮುಟೂರು ಗ್ರಾಮದ ಕೋಟ್ರಂಗಡ ಮನು ಸೋಮಯ್ಯ ಅವರ ಗದ್ದೆಯಲ್ಲಿ ಪುತ್ತರಿ ಕದ್ ತೆಗೆಯುವ ಕಾರ್ಯವನ್ನು ಪುರೋಹಿತರಾದ ವಸಂತ ರವರ ಮುಖಾಂತರ ವಿಜೃಂಭಣೆಯಿAದ ಆಚರಿಸಲಾಯಿತು.
ಭಗವತಿ ದೇವಸ್ಥಾನದ ತಕ್ಕ ಮುಖ್ಯಸ್ಥರು, ಕಾಯಮಾನಿ ಗ್ರಾಮಸ್ಥರು, ಪ್ರಮುಖರಾದ ಕೋಟ್ರಂಗಡ ಮನು ಸೋಮಯ್ಯ, ಮಚ್ಚಾಮಾಡ ಚೇತನ್, ಚೋಕಿರ ಹ್ಯಾರಿ, ಚೆಕ್ಕೇರ ಕಿಶೋರ್, ಕೋಳೆರ ಪೊನ್ನಣ್ಣ ಬಲ್ಲಡಿಚಂಡ ಸುಬ್ರಮಣಿ, ಮೇಚಿರ ಚಿಪ್ಪ, ಗಣಪತಿ, ಲೋಕೇಶ್, ರತ್ತು, ಹರೀಶ್, ಅಯ್ಯಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಐಗೂರು: ಧಾನ್ಯಲಕ್ಷಿö್ಮಯನ್ನು ಪೂಜಿಸಿ ಮನೆಮನೆಗಳಿಗೆ ತುಂಬಿಕೊಳ್ಳುವ ಹುತ್ತರಿ ಹಬ್ಬವನ್ನು ಮಾದಾಪುರದಲ್ಲಿ ಆಚರಿಸಲಾಯಿತು. ಮಾದಾಪುರದ ಜಂಬೂರಿನ ಬಸವೇಶ್ವರ ದೇವಾಲಯದ ಆವರಣದಲ್ಲಿ ಸಮಿತಿ ವತಿಯಿಂದ ಉಳುಮೆ ಮಾಡಿ ಬೆಳೆದ ಭತ್ತದ ಕದಿರನ್ನು ಕೊಯ್ದು ಪೊಲಿ , ಪೋಲಿ ದೇವಾ ಎಂಬ ಘೋಷಣೆಯೊಂದಿಗೆ ದೇವಾಲಯದಲ್ಲಿ ಪೂಜಿಸಿ, ಗ್ರಾಮಸ್ಥರ ಮನೆಗಳಿಗೆ ಕದಿರನ್ನು ಹಂಚಲಾಯಿತು. ದೇವಾಲಯದ ಸಮಿತಿಯ ಮಂಜುನಾಥ್ ಮತ್ತು ಇತರರಿದ್ದರು.
- ಚಿತ್ರ, ವರದಿ : ದುಗ್ಗಳ ಸದಾನಂದ, ಹರೀಶ್ ಮಾದಪ್ಪ, ಸುನಿಲ್ ಕುಯ್ಯಮುಡಿ, ಚೆನ್ನನಾಯಕ್, ನಾಗರಾಜಶೆಟ್ಟಿ, ಮೂರ್ತಿ, ಭಾಸ್ಕರ್ ಮುಳ್ಳೂರ್, ಚಂದ್ರಮೋಹನ್, ರಫೀಕ್ ತೂಚಮಕೇರಿ, ವಿಜಯ್ ಹಾನಗಲ್, ಎಂ.ಎ. ಸುಕುಮಾರ್, ಕರುಣ್ ಕಾಳಯ್ಯ, ವಾಸು ಆಚಾರ್ಯ