ಮಡಿಕೇರಿ, ಡಿ. ೬: ಅಧಿಕಾರಿಗಳು ಯಾವುದೇ ಕಾರಣಕ್ಕೂ ಜನಪ್ರತಿ ನಿಧಿಗಳನ್ನು ನಿರ್ಲಕ್ಷಿಸದೆ ಪರಿಗಣ ನೆಗೆ ತೆಗೆದುಕೊಂಡು ಕೆಲಸ ನಿರ್ವ ಹಿಸಬೇಕು ಎಂದು ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಮಿತಿಯ ಕೆಲ ಸದಸ್ಯರುಗಳು, ಅಧಿಕಾರಿಗಳು ಜನಪ್ರತಿನಿ ಧಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ; ಜನಪ್ರತಿನಿಧಿಗಳು ನೀಡುವ ಯಾವುದೇ ಸಲಹೆ ಸೂಚನೆಗಳಿಗೆ ಮನ್ನಣೆ ನೀಡುತ್ತಿಲ್ಲ. ಕೆಲ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಉಡಾಫೆಯಿಂದ ವರ್ತಿಸುತ್ತಾರೆ. ಈ ಹಿನ್ನೆಲೆ ಯಲ್ಲಿ ಜನಪರವಾಗಿ ಕೆಲಸ ಮಾಡಲು ಜನಪ್ರತಿನಿಧಿಗಳಿಗೆ ತೊಂದರೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಯದುವೀರ್ ಒಡೆಯರ್ ಜನಪ್ರತಿನಿಧಿಗಳು ಜನರಿಂದ ಆಯ್ಕೆ ಆದವರಾಗಿದ್ದು, ಅವರುಗಳನ್ನು ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲ ಕ್ಷಿಸಬಾರದು; ಅವರ ಸಲಹೆ ಸೂಚನೆಗಳಿಗೆ ಸೂಕ್ತ ಮನ್ನಣೆ ನೀಡಬೇಕೆಂದು ನಿರ್ದೇಶನ ನೀಡಿದರು.
ಕಸ ವಿಲೇವಾರಿ ವಿಳಂಬ - ಅಸಮಾಧಾನ
ಮಡಿಕೇರಿ ನಗರಸಭೆ ವ್ಯಾಪ್ತಿಯ ಕಸ ವಿಲೇವಾರಿ ಘಟಕದಿಂದ ಕಸ ವಿಲೇವಾರಿ ಆಗದ ಬಗ್ಗೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೇ ತಿಂಗಳಿನಲ್ಲಿ ಸಭೆ ನಡೆಸಿ ಕಸ ವಿಲೇವಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೂ ಆ ಕಾರ್ಯ ನಡೆದಿಲ್ಲ ಏಕೆ ಎಂದು ಸಂಬAಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಮಳೆಯಿಂದ ಕೆಲಸ ತಡವಾಗಿದೆ ಎಂದು ಅಧಿಕಾರಿ ಉತ್ತರಿಸಿದಾಗ ಆಕ್ರೋಶಗೊಂಡ ಸಂಸದರು, ಎಲ್ಲದಕ್ಕೂ ಮಳೆಯ ನೆಪ ಹೇಳುತ್ತೀರಿ. ಕೊಡಗಿನಲ್ಲಿ ಹೆಚ್ಚು ಮಳೆ ಆಗುತ್ತದೆ ಎಂಬ ಅರಿವು ನಿಮಗಿಲ್ಲವೇ? ಮಳೆಗೆ ತಕ್ಕಂತಹ ಉಪಕರಣಗಳನ್ನು ಬಳಸಿ ವಿಲೇವಾರಿಗೆ ಕ್ರಮ ಕೈಗೊಳ್ಳಬಹುದಿತ್ತಲ್ಲ ಎಂದು ಹೇಳಿದರು. ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಮಳೆಯ ಕಾರಣ ನೀಡಿದರೆ ಒಪ್ಪಬಹುದು. ಆದರೆ ಕಸ ವಿಲೇವಾರಿಗೂ ಮಳೆಯ ನೆಪವೊಡ್ಡಿದ್ದಾರೆ ಹೇಗೆ ಎಂದು ಪ್ರಶಿಸಿದರು.
ನಗರಸಭಾ ಅಧ್ಯಕ್ಷೆ ಕಲಾವತಿ ಮಾತ ನಾಡಿ, ಹಸಿ ಕಸ, ಒಣ ಕಸವನ್ನು ಪ್ರತ್ಯೇಕಗೊಳಿಸಲಾಗಿದೆಯಾದರೂ ವಿಲೇವಾರಿ ಆಗಿಲ್ಲ ಎಂದು ಹೇಳಿದರು.
ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಇದು ಅಧಿಕಾರಿಗಳ ಕರ್ತವ್ಯ ಲೋಪ ವಾಗಿದೆ. ಈ ಹಿಂದೆ ಸಭೆ ನಡೆದು ಏಳು ತಿಂಗಳು ಕಳೆದರೂ ಕಸ ವಿಲೇವಾರಿ ಆಗಿಲ್ಲವೆಂದರೆ ಅದು ಅಧಿಕಾರಿಗಳ ಬೇಜವಾ ಬ್ದಾರಿತನದ ಪರಮಾವಧಿ ಎಂದರಲ್ಲದೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು. ಈ ವೇಳೆ ಮುಂದಿನ ಮಾರ್ಚ್ ಒಳಗಾಗಿ ವಿಲೇವಾರಿ ಕಾರ್ಯ ಮುಗಿಸುವುದಾಗಿ ಅಧಿಕಾರಿ ತಿಳಿಸಿದಾಗ ಇದು ನಿಮಗೆ ಕೊನೆಯ ಅವಕಾಶವಾಗಿದ್ದು, ಮಾರ್ಚ್ ಒಳಗೆ ಮುಗಿಯದಿದ್ದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಂಸದರು ಅಧಿಕಾರಿಗೆ ಎಚ್ಚರಿಕೆ ಇತ್ತರು.
ಅಮೃತ್ ಯೋಜನೆ ಸಮಸ್ಯೆ
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು, ಅಮೃತ್ ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)
ಯೋಜನೆಯಡಿ ರಸ್ತೆಗಳನ್ನು ಅಗೆಯಲಾಗುತ್ತಿದೆ. ಮೊದಲೇ ಜಿಲ್ಲೆಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ರಸ್ತೆಗಳನ್ನು ಅಗೆದು ಹೆಚ್ಚು ದಿನ ಹಾಗೆ ಬಿಡುವುದರಿಂದ ಪಾರ್ಕಿಂಗ್ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಿ ಜನ ನಮ್ಮನ್ನು ಬಯ್ಯುತ್ತಾರೆ. ಆದ್ದರಿಂದ ಈ ಸಮಸ್ಯೆ ಶೀಘ್ರ ಪರಿಹಾರ ಕಾಣಬೇಕೆಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ವೀರಾಜಪೇಟೆಯಲ್ಲೂ ಕೂಡ ಇದೇ ರೀತಿಯ ಸಮಸ್ಯೆ ಇದ್ದು, ಉತ್ತಮವಾದ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಹಾಕಲಾಗಿದೆ ಎಂದರು. ಈ ಸಂದರ್ಭ ಅಮೃತ್ ಯೋಜನೆ ಕಾಮಗಾರಿ ಬಗ್ಗೆ ಸಂಬAಧಿಸಿದವರಿAದ ಮಾಹಿತಿ ಪಡೆದ ಸಂಸದರು, ಮುಂದಿನ ಏಪ್ರಿಲ್ ಒಳಗೆ ಕಾಮಗಾರಿ ಮುಗಿದಿರಬೇಕೆಂದು ಸೂಚಿಸಿದರು.
ಕಸ ಎಸೆದರೆ ಕ್ರಮ ಕೈಗೊಳ್ಳಿ
ಜಿಲ್ಲೆಯಲ್ಲಿ ವಾಹನಗಳ ಮೂಲಕ ತಂದು ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಬೇಕು. ಅಂತಹ ಕೃತ್ಯಗಳು ಕಂಡುಬAದರೆ ಸಂಬAಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಂಸದ ಯದುವೀರ್ ಒಡೆಯರ್ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡು ಬಂದು ಆ ಬಗ್ಗೆ ಮಾಹಿತಿ ನೀಡಿದರೆ ಕಸ ಎಸೆಯುವವರ ವಿರುದ್ಧ ನಾವು ಪ್ರಕರಣ ದಾಖಲಿಸುತ್ತೇವೆ ಎಂದು ಎಸ್ಪಿ ರಾಮರಾಜನ್ ಹೇಳಿದರು. ಗ್ರಾಮೀಣ ಭಾಗಗಳಲ್ಲಿಯೂ ಕಸ ವಿಲೇವಾರಿ ಸಮಸ್ಯೆ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಮಿತಿ ಸದಸ್ಯೆ ಕಾಂತಿ ಸತೀಶ್ ಹೇಳಿದರು. ಕಸ ವಿಲೇವಾರಿಗೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಎಂಎಲ್ಸಿ ಸುಜಾ ಕುಶಾಲಪ್ಪ ಸೂಚಿಸಿದರು.
‘ಸಭೆ ನಿಗದಿ ಸಮರ್ಪಕವಾಗಿರಲಿ’
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಹಬ್ಬಗಳ ದಿನದಂದು ನಿಗದಿಪಡಿಸುವುದು ಬಳಿಕ ಮುಂದೂಡುವುದು ಸರಿಯಲ್ಲ. ಇಂದು ಕೂಡ ಹುತ್ತರಿ ಆಚರಣೆ ಕೆಲವೆಡೆ ನಡೆಯುತ್ತಿದ್ದು, ಇಂತಹ ದಿನಗಳಲ್ಲಿ ಸಭೆ ಹಮ್ಮಿಕೊಳ್ಳುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಈ ಬಗ್ಗೆ ಸಂಬAಧಿಸಿದವರು ಗಮನಹರಿಸಬೇಕೆಂದು ಸಮಿತಿ ಸದಸ್ಯೆ ಕಾಂತಿ ಸತೀಶ್ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ತನಗೆ ಮೊದಲೇ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಸಂಸದರು ಭರವಸೆಯಿತ್ತರು.
ಬಿಎಸ್‌ಎನ್‌ಎಲ್ ಅವ್ಯವಸ್ಥೆ
ಬಿಎಸ್‌ಎನ್‌ಎಲ್ ಅವ್ಯವಸ್ಥೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಬಿಎಸ್‌ಎನ್‌ಎಲ್ï ಜನರೇಟರ್‌ಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿ ದೂರವಾಣಿ ಕರೆಗೆ ಸ್ಪಂದಿಸುವುದಿಲ್ಲ. ಕನ್ನಡದಲ್ಲಿ ಮಾತನಾಡುವುದಿಲ್ಲ; ಎಂಬಿತ್ಯಾದಿ ದೂರುಗಳನ್ನು ಸಮಿತಿ ಸದಸ್ಯರುಗಳು ಸಭೆಯ ಮುಂದಿಟ್ಟರು. ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ ಬಿಎಸ್‌ಎನ್‌ಎಲ್ ಜನರೇಟರ್ ನಿರ್ವಹಣೆ ವಹಿಸಿಕೊಂಡಿರುವ ಏಜೆನ್ಸಿಗಳಿಂದ ಈ ಸಮಸ್ಯೆ ಆಗುತ್ತಿದೆ ಎಂದರು.
ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್, ಸಮಸ್ಯೆಗಳೇನೇ ಇದ್ದರೂ ತನ್ನ ಗಮನಕ್ಕೆ ತರಬೇಕು, ಏನೇನು ಸಮಸ್ಯೆಗಳಿವೆ; ಯಾಕೆ ಪರಿಹಾರವಾಗಿಲ್ಲ ಎಂಬ ಬಗ್ಗೆ ತನಗೆ ವರದಿ ನೀಡಬೇಕು. ಕನ್ನಡ ಭಾಷೆಯನ್ನು ಕಲಿಯುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಹಾಸ್ಟೆಲ್ ಅಕ್ಕಿಯಲ್ಲಿ ಹುಳ!
ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡ್ಲಿಪೇಟೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಹಾಸ್ಟೆಲ್‌ಗೆ ತಾನು ಭೇಟಿ ನೀಡಿದ ಸಂದರ್ಭ ಅಲ್ಲಿ ಮಕ್ಕಳ ಊಟಕ್ಕೆ ಬಳಸುವ ಅಕ್ಕಿಯಲ್ಲಿ ಹುಳುಗಳು ಕಂಡುಬAದಿವೆ. ಅಲ್ಲದೆ ಕುಡಿಯಲು ಸರಿಯಾದ ನೀರು ಇಲ್ಲದೆ ಹಲವು ನ್ಯೂನ್ಯತೆಗಳು ಕಂಡುಬAದಿದ್ದು, ಮಕ್ಕಳಿಗೆ ಏನಾದರೂ ಅನಾಹುತಗಳಾದರೆ ಇದಕ್ಕೆ ಯಾರು ಹೊಣೆ ಎಂದು ಸಂಬAಧಿಸಿದ ಅಧಿಕಾರಿಯ ವಿರುದ್ಧ ಕಿಡಿಕಾರಿದರು. ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಿಗೊಮ್ಮೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸೂಚಿಸಿದ ಸುಜಾ ಕುಶಾಲಪ್ಪ, ಕೊಡ್ಲಿಪೇಟೆ ಹಾಸ್ಟೆಲ್ ಅವ್ಯವಸ್ಥೆ ಹಿನ್ನೆಲೆಯಲ್ಲಿ ಸಂಬAಧಿಸಿದವರಿಗೆ ನೋಟೀಸ್ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ಆಹಾರಕ್ಕೆ ಅಕ್ಕಿ ಸರಬರಾಜು ಮಾಡುವ ಟೆಂಡರ್ ಪಡೆದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸಂಸದರು ನಿರ್ದೇಶನ ನೀಡಿದರು.
ಕಾರ್ಯಾಗಾರ ನಡೆಸಿ
ಕೃಷಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ ಎಂದು ಸಮಿತಿ ಸದಸ್ಯರು ಆರೋಪಿಸಿದರು. ಅಲ್ಲದೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ಬಳಿಗೆ ತೆರಳುತ್ತಿಲ್ಲ. ರೈತರನ್ನು ಸಂಪರ್ಕಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದವು. ಈ ವೇಳೆ ಮಾತನಾಡಿದ ಸಂಸದರು ಕೃಷಿ ಇಲಾಖೆಯಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೃಷಿ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕಾರ್ಯಾಗಾರ ನಡೆಸುವಂತೆ ಸೂಚಿಸಿದರಲ್ಲದೆ ರೈತರಿಗೆ ಯೋಜನೆಗಳು ತಲುಪುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸದಸ್ಯ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳ ಮಟ್ಟದಲ್ಲಿ ಸೂಕ್ತ ಚರ್ಚೆಗಳಾದರೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸುಲಭವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳನ್ನು ನಿರಂತರವಾಗಿ ಪರಿಶೀಲಿಸುವುದರೊಂದಿಗೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಸಂಸದರು ಸಂಬAಧಿಸಿದವರಿಗೆ ಸೂಚಿಸಿದರು.
ಯಾವುದೇ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆ ಕಾಮಗಾರಿಗಳ ಸಂಬAಧ ಸ್ಥಳಕ್ಕೆ ಭೇಟಿ ನೀಡಿ ಕೆಲಸ ಮಾಡಿದರೆ ಯಾವುದೇ ಯೋಜನೆ ಕಾಮಗಾರಿಗಳಲ್ಲಿ ಸಮಸ್ಯೆ ಸೃಷ್ಟಿ ಆಗದಂತೆ ತಡೆಯಬಹುದೆಂದು ಜಿಲ್ಲಾಧಿಕಾರಿ ವೆಂಕಟರಾಜಾ ಅಧಿಕಾರಿಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ ಡಿ.ಎಫ್.ಓ ಅಭಿಷೇಕ್ ಉಪಸ್ಥಿತರಿದ್ದರು.