ಕೂಡಿಗೆ, ಡಿ. ೬: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಾರಂಗಿ ಮುಖ್ಯ ನಾಲೆಗೆ ಹೊಂದಿಕೊAಡಿರುವ ಉಪ ನಾಲೆಗಳ ದುರಸ್ತಿ, ಮತ್ತು ಅದಕ್ಕೆ ಸಂಬAಧಿಸಿದ ನೂತನ ಕಾಲುವೆಗಳ ನಿರ್ಮಾಣ ಕಿರು ಸೇತುವೆ ಸೇರಿದಂತೆ ಅನೇಕ ಉಪ ಕಾಲುವೆಗಳ ನಿರ್ಮಾಣ ಕೆಲಸವನ್ನು ಕೈಗೊಳ್ಳುವ ಮೂಲಕ ರೈತರ ಜಮೀನಿಗೆ ಸಮರ್ಪಕವಾಗಿ ನಾಲೆಯ ನೀರನ್ನು ಒದಗಿಸುವ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಮುಖೇನ ಈಗಾಗಲೇ ರೂ. ೫೦. ಕೋಟಿಯ ಕ್ರಿಯಾ ಯೋಜನೆ ತಯಾರಾಗಿದೆ. ಹಣಕಾಸು ಇಲಾಖೆಯ ವತಿಯಿಂದ ಹಣ ಬಿಡುಗಡೆಗೊಂಡು ಇಲಾಖೆಯ ನಿಯಮಾನುಸಾರ ಟೆಂಡರ್ ಪ್ರಕ್ರಿಯೆಯು ನಡೆದಿದ್ದು ಕಾಮಗಾರಿಯು ಶೀಘ್ರದಲ್ಲಿ ಆರಂಭಗೊಳ್ಳುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಕೂಡಿಗೆಗೆ ಭೇಟಿ ನೀಡಿದ ಸಂದÀರ್ಭದಲ್ಲಿ ಮಾಹಿತಿ ನೀಡಿದ ಅವರು ಈಗಾಗಲೇ ಭತ್ತದ ಬೆಳೆಯ ಕಟಾವು ಆರಂಭಗೊAಡಿರುವ ಹಿನ್ನೆಲೆಯಲ್ಲಿ ಮುಂದಿನ ಸಾಲಿನ ಭತ್ತದ ನಾಟಿಯ ಬೇಸಾಯಕ್ಕೆ ನೀರಿನ ಬಳಕೆಗೆ ಅನುಕೂಲವಾಗುವಂತೆ, ಮತ್ತು ಈಗಾಗಲೇ ಅಣೆಕಟ್ಟೆಯಿಂದ ಹರಿಸುತ್ತಿರುವ ನೀರು ಸ್ಥಗಿತಗೊಂಡ ಬಳಿಕ ಟೆಂಡರ್ ಪಡೆದ ಗುತ್ತಿಗೆದಾರ ಉಪ ಕಾಲುವೆಗಳ ಕಾಮಗಾರಿಯನ್ನು ಆರಂಭಿಸಲು ಕಾವೇರಿ ನೀರಾವರಿ ನಿಗಮದ ನಿಯಮಾನುಸಾರ ಕಾಮಗಾರಿಯನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ಕಾಮಗಾರಿಯು ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮದ ೧೮. ನೇ ತೂಬಿನ ವರೆಗಿನ ಉಪ ನಾಲೆಗಳು ದುರಸ್ತಿಗೆ ಸಂಬAಧಿಸಿದ ಟೆಂಡರ್ ಪ್ರಕ್ರಿಯೆಯು ಮುಕ್ತಾಯವಾಗಿ ಬೆಂಗಳೂರಿನ ಗುತ್ತಿಗೆದಾರ ಟೆಂಡರ್ ಪಡೆದಿದ್ದಾರೆ. ಈಗಾಗಲೇ ನೀರಾವರಿ ಇಲಾಖೆಯ ವತಿಯಿಂದ ಸಿದ್ಧಗೊಂಡಿರುವ ಕ್ರಿಯಾ ಯೋಜನೆಯ ಅನುಗುಣವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಟೆಂಡರ್ ದಾರರಿಗೆ ಆದೇಶವನ್ನು ರಾಜ್ಯ ಮಟ್ಟದಲ್ಲಿ ನಿಗಮದ ಮುಖೇನ ನೀಡಲಾಗಿದೆ, ಅದರಂತೆಯೇ ಕಾಮಗಾರಿ ಯನ್ನು ನಡೆಸಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ.