ಐಗೂರು, ಡಿ. ೬: ರೂ. ೨೫ ಲಕ್ಷ ವೆಚ್ಚದಲ್ಲಿ ಗರಗಂದೂರು (ಬಿ) ಗ್ರಾಮದ ಪರಿಶಿಷ್ಟ ಪಂಗಡದ ಕಾಲೋನಿಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ರಸ್ತೆಯ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಈ ವ್ಯಾಪ್ತಿಯ ಜನರ ಬೇಡಿಕೆಗಳಿಗೆ ಅನುದಾನದ ಲಭ್ಯತೆಯ ಮೇಲೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಪಂಚಾಯಿತಿ ಅಧ್ಯಕ್ಷೆ ಭೋಜಮ್ಮ, ಉಪಾಧ್ಯಕ್ಷ ಮುಸ್ತ್ತಾಫ, ಪಂಚಾಯಿತಿ ಸದಸ್ಯರಾದ ಸಲೀಂ ಹೊಸತೋಟ, ರಮೇಶ್., ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ, ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್, ಪಂಚಾಯಿತಿ ಕಾರ್ಯದರ್ಶಿ ವಿಶ್ವನಾಥ, ಕೆ.ಪಿ. ದಿನೇಶ್, ಕೆ.ಎಂ. ಲಕ್ಷö್ಮಣ, ಗೌತಮ್ ಶಿವಪ್ಪ, ಶಿವರಾಂ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.