ಮುಳ್ಳೂರು, ಡಿ. ೮: ಸಮೀಪದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅಂತರ್ ಪ.ಪೂ.ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಭಾರತಿ ಸಾಂಸ್ಕೃತಿಕ ವೈಭವ’À ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸ್ಥಳೀಯ ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ವಿವಿಧ ಪ.ಪೂ.ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿ ಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವೈಯಕ್ತಿಕ ಭಾವಗೀತೆ ಮತ್ತು ಜಾನಪದ ಗೀತೆ ಕನ್ನಡ ನಾಡು-ನುಡಿ ಸಂಸ್ಕೃತಿಗೆ ಸಂಬAಧಿಸಿದ ಏಕ ವ್ಯಕ್ತಿ ನೃತ್ಯ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ಸಭಿಕರನ್ನು ರಂಜಿಸಿದರು. ಸ್ಪರ್ಧೆಯಲ್ಲಿ ವಿಶೇಷ ವಾಗಿ ‘ಕೃತಕ ಬುದ್ದಿಮತ್ತೆ ಮಾನವ ಉದ್ಯೋಗಿಗಳಿಗೆ ಅಪಾಯಕಾರಿಯೇ’ ಎಂಬ ವಿಷಯಕ್ಕೆ ಕುರಿತಾದ ಚರ್ಚಾ ಸ್ಪರ್ಧೆಯಲ್ಲಿ ಭಾವಹಿಸಿದ ಸ್ಪರ್ಧಿಗಳು ವಿಷಯದ ಪರವಾಗಿ ಮತ್ತು ವಿರೋಧವಾಗಿ ವಾದ ಮಾಡಿದರು. ಆಧುನಿಕ ಮತ್ತು ವೇಗದ ತಂತ್ರಜ್ಞಾನದಲ್ಲಿ ಒಂದಾದ ಎಐ ವ್ಯವಸ್ಥೆಯಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಎಐ ತಂತ್ರಜ್ಞಾನದ ಅಗತ್ಯದ ಬಗ್ಗೆ ಸ್ಪರ್ಧಿಗಳು ಪರ ಮತ್ತು ವಿರೋಧಗಳ ವಾದ ಮಂಡಿಸುತ್ತಾ ಸಭಿಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವ[ಮೌಲ್ಯ ಮಾಪನ] ಪ್ರೊ. ಸುರೇಶ್ ಎಂ, ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಗನ್‌ಪಶಾಲ್, ಪ್ರಮುಖರಾದ ಎನ್.ಕೆ.ಅಪ್ಪಸ್ವಾಮಿ, ಮಹಮ್ಮದ್ ಖನ್ನಾ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಸ್.ಎನ್.ಮೋಹನ್‌ಕುಮಾರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಎಂ.ಎನ್.ಹರೀಶ್, ಉಪನ್ಯಾಸಕರಾದ ಸುರೇಂದ್ರ, ಚಂದ್ರಕಾAತ್, ಎಚ್.ಎಂ.ವಿವೇಕ್, ಬಿ.ಎಂ.ಪೊನ್ನಪ್ಪ, ವೇಧಕುಮಾರ್, ಕೆ.ನಿ.ಅಶಿತಾ, ರಾಜಶೇಖರಪ್ಪ ಮುಂತಾದವರು ಇದ್ದರು.