ಸಿದ್ದಾಪುರ, ಡಿ. ೧೦ : ಆಸ್ತಿ ವಿಷಯಕ್ಕೆ ಸಂಬAಧಿಸಿದAತೆ ನಡೆದ ಕಲಹ ತೀವ್ರ ಸ್ವರೂಪ ಪಡೆದುಕೊಂಡಿದ್ದು ವೀರಾಜಪೇಟೆ ತಾಲೂಕು ಕಾವಾಡಿ ಗ್ರಾಮದ ಮಾಚಿಮಂಡ ಬ್ರಿಜೇಶ್ ಮಾದಪ್ಪ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಮಾಚಿಮಂಡ ಅಪ್ಪಚ್ಚು ಅವರನ್ನು ವೀರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇದೆ ಸಂದರ್ಭದಲ್ಲಿ ಗುಂಡಿನ ದಾಳಿಗೆ ಒಳಗಾದ ಬ್ರಿಜೇಶ್ ಮಾದಪ್ಪ ಅವರ ತಂದೆ ರತನ್ ಅವರ ಮೇಲೆ ಹಲ್ಲೆ ನಡೆಸಿದ ಅಪ್ಪಚ್ಚು ಅವರ ಪುತ್ರ ಅಮೃತ್ ಅಪ್ಪಯ್ಯ ಅವರನ್ನೂ ಬಂಧಿಸಲಾಗಿದೆ. ಗಾಯಾಳುಗಳು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾವಾಡಿ ಗ್ರಾಮದಲ್ಲಿರುವ ತೋಟದ ವಿಚಾರವಾಗಿ ಬ್ರಿಜೇಶ್ ಮಾದಪ್ಪ ಹಾಗೂ ಅಪ್ಪಚ್ಚು ನಡುವೆ ತಕರಾರು ಇದ್ದು ಆಸ್ತಿಯ ಗಲಾಟೆ ವಿಚಾರವಾಗಿ ಕಳೆದ ವರ್ಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬAಧ ವೀರಾಜಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇಂದು ಬೆಳಿಗ್ಗೆ ೭:೩೦ಕ್ಕೆ ಬ್ರಿಜೇಶ್ ಮಾದಪ್ಪ ಅವರು ತೋಟದಲ್ಲಿದ್ದಾಗ ಅಲ್ಲಿಗೆ ಆಗಮಿಸಿದ ಅಪ್ಪಚ್ಚು, ಬ್ರಿಜೇಶ್ ಅವರ ಕಡೆಗೆ ಬಂದೂಕಿನಿAದ ಗುಂಡಿನ ದಾಳಿ ಮಾಡಿದ್ದಾರೆ. ಇದು ಬ್ರಿಜೇಶ್ ಮಾದಪ್ಪ ಅವರಿಗೆ ತಗುಲದೇ ಇದ್ದಾಗ ಅಪ್ಪಚ್ಚು ಅವರು ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ. ಪರಿಣಾಮ ಬ್ರಿಜೇಶ್ ಅವರ ಎಡ ಕಾಲಿಗೆ ಗುಂಡು ತಗುಲಿ ಕೆಳಕ್ಕೆ ಬಿದ್ದಿದ್ದಾರೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ತಕ್ಷಣ ಬ್ರಿಜೇಶ್ ಅವರು ತಮ್ಮ ತಂದೆ ರತನ್ ಅವರಿಗೆ ಕರೆ ಮಾಡಿದಾಗ ರತನ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂದರ್ಭ ಬಂದೂಕಿನಿAದ ದಾಳಿ ನಡೆಸಿದ ಅಪ್ಪಚ್ಚು ಅವರ ಪುತ್ರ ಅಮೃತ್ ಹಾಗೂ ಅವರೊಂದಿಗೆ ಇದ್ದ ಮತ್ತೋರ್ವ ಅಪರಿಚಿತ ವ್ಯಕ್ತಿ ಕೂಡ ಸ್ಥಳದಲ್ಲಿದ್ದು, ರತನ್ ಅವರ ಮೇಲೆ ದೊಣ್ಣೆ, ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಗಾಯಗೊಂಡ ತಂದೆ-ಮಗನಿಗೆ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಗಾಯಾಳು ಬ್ರಿಜೇಶ್ ನೀಡಿದ ದೂರಿನನ್ವಯ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಅಪ್ಪಚ್ಚು ಮತ್ತು ಅವರ ಮಗ ಅಮೃತ್ ಅವರನ್ನು ಬಂಧಿಸಲಾಗಿದೆ.
ಬ್ರಿಜೇಶ್ ಅವರಿಗೆ ಎಡಕಾಲು ಗಾಯವಾಗಿದ್ದು ಅವರ ತಂದೆ ರತನ್ ಅವರ ಎಡ ಕಿವಿಗೆ ಗಾಯವಾಗಿದೆ. ಇಬ್ಬರೂ ವೀರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-ವಾಸು