ಮಡಿಕೇರಿ, ಡಿ. ೧೦: ಕೊಡಗು ಗೌಡ ಮಾಜಿ ಯೋಧರ ಒಕ್ಕೂಟದ ೧೫ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಕೊಡಗು ಗೌಡ ಸಮಾಜದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷ ತುಂತಜ್ಜಿರ ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಾನರರಿ ಕ್ಯಾಪ್ಟನ್ ಹುಲಿಮನೆ ಹರೀಶ್ ಕುಮಾರ್, ಅತಿಥಿಗಳಾಗಿ ಪೂಜಾರೀರ ಸೀತಮ್ಮ, ಕೋಳುಮುಡಿಯನ ಕುಶಾಲಪ್ಪ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರಂದ್ಲಾಜೆ ಆನಂದ ಭಾಗವಹಿಸಿದ್ದರು.

ತಳೂರು ಕಾಳಪ್ಪ, ತಳೂರು ಯಮುನ, ಹುಲಿಮನೆ ಹರೀಶ್ ಕುಮಾರ್, ಮೊಟ್ಟೆರ ಆನಂದ, ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪಡೆದ ಮೊಟ್ಟೆರ ಇಂದಿರಾವತಿ ಅವರನ್ನು ಸನ್ಮಾನಿಲಾಯಿತು.