ಕಣಿವೆ, ಡಿ. ೧೦: ಇಲ್ಲಿಗೆ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಎರಡು ದಿನಗಳ ಕಾಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಾರ್ಷಿಕ ಶಿಬಿರ ನಡೆಯಿತು. ಕೊಡಗು ಜಿಲ್ಲಾ ಹಾಗೂ ಕುಶಾಲನಗರ ತಾಲೂಕು ಸಮಿತಿಗಳ ವತಿಯಿಂದ ನಡೆದ ಶಿಬಿರದಲ್ಲಿ ಸ್ಕೌಟ್ಸ್ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಧ್ವಜಾರೋಹಣ ನೆರವೇರಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಜ್ಞಾನಗಂಗಾ ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ, ಪ್ರಾಂಶುಪಾಲೆ ಸತ್ಯ ಸುಲೋಚನಾ, ಸ್ಕೌಟ್ಸ್ ತರಬೇತುದಾರ ಕೆ.ಯು. ರಂಜಿತ್, ಜಿಲ್ಲಾ ಸಂಘಟನಾ ಆಯುಕ್ತೆ ಯು.ಸಿ. ದಮಯಂತಿ, ಸಿ.ಎಂ. ಸುಲೋಚನಾ, ಕೆ.ಬಿ. ಗಣೇಶ್, ಎಂ.ಎಸ್. ಗಣೇಶ್, ಡಿ.ವಿ. ಗಣೇಶ್ ಇದ್ದರು.