ನಾಪೋಕ್ಲು: ಸ್ಥಳೀಯ ಕೊಡವ ಸಮಾಜದಲ್ಲಿ ಪುತ್ತರಿ ಹಬ್ಬವನ್ನು ಆಚರಿಸಲಾಯಿತು. ಕೊಡವ ಸಮಾಜದಲ್ಲಿ ಮೊದಲು ನೆರೆಕಟ್ಟಿದ ಬಳಿಕ ಪ್ರಾರ್ಥನೆ ಸಲ್ಲಿಸಿ ಬೊಟ್ಟೋಳಂಡ ರಾಜ ಭೋಜಪ್ಪ ಅವರು ಕಂಗAಡ ಜಾಲಿ ಪೂವಪ್ಪ ಅವರ ಗದ್ದೆಯಲ್ಲಿ ಕದಿರನ್ನು ತೆಗೆದರು. ನಂತರ ಕದಿರನ್ನು ವಿತರಿಸಲಾಯಿತು. ಈ ಸಂದರ್ಭ ಎಂ.ಎA. ನರೇಂದ್ರ ಸ್ವಾಮಿ, ಬೊಟ್ಟೋಳಂಡ ಗಣೇಶ, ಚೇತನ್, ಮಣವಟ್ಟಿರ ಡಿಕ್ಕ, ಕುಂಚ್ಚೆಟಿರ ಸುಧಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಮಡಿಕೇರಿ: ಕೊಡಗು ವಿದ್ಯಾಲಯದಲ್ಲಿ ಪುತ್ತರಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು.

ಶಾಲೆಯ ಆವರಣದಲ್ಲಿ ಬೆಳೆದ ಭತ್ತದ ಕದಿರನ್ನು ಪ್ರಾಂಶುಪಾಲೆ ಸುಮಿತ್ರಾ ಕೆ.ಎಸ್., ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಹಾಗೂ ಸಂಯೋಜಕಿ ಮಿಲನ್ ಕುಮಾರಿ ಅವರು ಕಟಾವು ಮಾಡಿ, ವಿದ್ಯಾರ್ಥಿಗಳ ಜೊತೆಗೆ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳು ಕೊಡವ ಪರಂಪರೆಯನ್ನು ಬಿಂಬಿಸುವ ವೇಷಭೂಷಣದಲ್ಲಿ ಮೆರವಣಿಗೆ ನಡೆಸಿ ಸಭಾಂಗಣಕ್ಕೆ ಆಗಮಿಸಿದರು. ಪಾರಂಪರಿಕ ಪುತ್ತರಿ ಕುತ್ತಿಯಲ್ಲಿ ರವಿ ಅವರು ಕದಿರನ್ನು ಹೊತ್ತು ತಂದದ್ದು ಸಂಸ್ಕೃತಿಯ ನೈಜ ಸೊಬಗನ್ನು ಅನಾವರಣಗೊಳಿಸಿತು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಲಭಿಸಿತು.

ಸಭಾಂಗಣದಲ್ಲಿ ನಡೆದ ಸಮೂಹ ನೃತ್ಯ, ಸಮೂಹ ಗಾನ, ಫ್ಯಾಶನ್ ವಾಕ್ ಹಾಗೂ ಪುತ್ತರಿ ಹಬ್ಬದ ಮಹತ್ವವನ್ನು ಎತ್ತಿಹಿಡಿದ ನೃತ್ಯ-ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಬ್ಬಗಳು ಏಕತೆ, ಸೌಹಾರ್ದತೆ ಮತ್ತು ಸಂಸ್ಕೃತಿ ಜ್ಞಾನದ ದಿಕ್ಕಿನಲ್ಲಿ ಮಕ್ಕಳನ್ನು ನಡೆಸುತ್ತವೆ ಎಂದು ಸಂಯೋಜಕಿ ಮಿಲನ್ ಕುಮಾರಿ ಮಾತನಾಡಿದರು.

ಕಾರ್ಯಕ್ರಮವನ್ನು ತಾರಿತ್ ಮತ್ತು ಇಶಾನ್ವಿ ನಿರ್ವಹಿಸಿದರು. ನೀಲ್ ನಾಚಪ್ಪ ಸ್ವಾಗತಿಸಿ, ಪೂರ್ವಿಕಾ ವಂದಿಸಿದರು. ಪೋಷಕರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ನೆರವೇರಿತು. ಪುತ್ತರಿಯ ಪ್ರಮುಖ ಖಾದ್ಯವಾದ ತಂಬಿಟ್ಟನ್ನು ಎಲ್ಲಾ ಮಕ್ಕಳಿಗೂ, ಸಿಬ್ಬಂದಿ ವರ್ಗಕ್ಕೂ ಹಾಗೂ ಪೋಷಕರಿಗೂ ವಿತರಿಸಲಾಯಿತು.ನಾಪೋಕ್ಲು: ಹುತ್ತರಿ ಹಬ್ಬವನ್ನು ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಆಚರಿಸಲಾಯಿತು. ಸಮಾಜದ ಆವರಣದಲ್ಲಿ ನಿರ್ಮಿಸಿದ ಗದ್ದೆಯಿಂದ ಸಮಾಜದ ಅಧ್ಯಕ್ಷ ಕೋಂಬಾರನ ಬಸಪ್ಪ ಅವರ ನೇತೃತ್ವದಲ್ಲಿ ಕದಿರು ತೆಗೆದು ಸಮಾಜದಲ್ಲಿ ನೆರೆದಿದ್ದ ಸಮುದಾಯದವರಿಗೆ ವಿತರಿಸಲಾಯಿತು. ಇದಕ್ಕೂ ಮೊದಲು ಹಬ್ಬದ ಪ್ರಯುಕ್ತ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗಿತ್ತು. ಕೊಡಗು ಗೌಡ ಯುವ ವೇದಿಕೆ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಪದಾಧಿಕಾರಿಗಳಾದ ನಡುವಟ್ಟಿರ ಲಕ್ಷö್ಮಣ್, ನಡುಮನೆ ಚಂಗಪ್ಪ, ನಿರ್ದೇಶಕರಾದ ಹೊಸೂರು ರಾಘವ, ಕುಂಟುಪುಣಿ ರಮೇಶ್, ಕೊಂಬಾರನ ಸುಬ್ಬಯ್ಯ, ತೋಟಂಬೈಲು ಇಂದಿರಾ, ಚಪ್ಪೆರ ಯಮುನಾ, ಕುಂಟುಪುಣಿ ಶೀಲ, ಮೈಸೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಸಮಾಜದ ಅಧ್ಯಕ್ಷೆ ನಡುವಟ್ಟಿರ ಗೀತಾ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡೀರ ಬಸಪ್ಪ, ಹೂಟಗಳ್ಳಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪೊನ್ನಚ್ಚನ ಅಪ್ಪಯ್ಯ, ಯುವ ವೇದಿಕೆಯ ಅಧ್ಯಕ್ಷ ಮೊಟ್ಟನ ಕೌಶಿಕ್, ಪಾಣತ್ತಲೆ ನಾಗೇಶ್ ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಪೊನ್ನೆಟಿ ನಂದ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.ಚೆಟ್ಟಳ್ಳಿ: ಕೊಡಗಿನ ಸಂಸ್ಕೃತಿ, ಭಾಷೆ, ಆಚಾರ ವಿಚಾರ ಮಕ್ಕಳ ಮನದಾಳದಲ್ಲಿ ಬೇರು ಬಿಡಬೇಕು ಎಂಬ ಉದ್ದೇಶದಿಂದ ದಕ್ಷಿಣ ಕೊಡಗಿನ ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಪ್ರಿಪ್ರೇಟರಿ ಸ್ಕೂಲ್ ಒಂದು ವಿಶಿಷ್ಟ ಪ್ರಯತ್ನದ ಮೂಲಕ ಮತ್ತೆ ಪ್ರಶಂಸೆಗೆ ಪಾತ್ರವಾಗಿದೆ.

ಈ ಬಾರಿಯೂ ಶಾಲೆಯ ಪುಟ್ಟಮಕ್ಕಳು ಗದ್ದೆಗೆ ತೆರಳಿ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯದಲ್ಲಿ ತೊಡಗಿ ಪುತ್ತರಿ ನಮ್ಮೆಯನ್ನು ಆಚರಿಸಿದರು. ತಳಿರು ತೋರಣಗಳಿಂದ ಶೃಂಗರಿಸಿದ ಭತ್ತದ ಗದ್ದೆಗೆ ತೆರಳಿದ ಮಕ್ಕಳು ಹಿರಿಯರು ತೋರಿಸಿದ ರೀತಿಯಲ್ಲಿ ಕುಯಿಲು ಮಾಡಿದ ಕದಿರನ್ನು ತಂದರು.ಶ್ರೀಮAಗಲ: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಪೊರಾಡ್ ಮಂದ್‌ನಲ್ಲಿ ಪುತ್ತರಿ ಕೋಲ್‌ಮಂದ್ ವಿಜೃಂಭಣೆಯಿAದ ನಡೆಯಿತು.

ಆರಂಭದಲ್ಲಿ ಸಾಂಪ್ರದಾಯಿಕವಾಗಿ ಆಣ್ಣೀರ ಐನ್‌ಮನೆಗೆ ಆಗಮಿಸಿದ ಊರಿನವರು ವಡ್ಡೋಲಗದೊಂದಿಗೆ ಊರಿನ ತಕ್ಕರನ್ನು ಮಂದ್‌ಗೆ ಕರೆತಂದರು. ನಂತರ ಮಲ್ಲೇಂಗಡ ಐನ್ ಮನೆಯಿಂದ ಸಾಂಪ್ರದಾಯಿಕ ‘ಚಂಗ’ನನ್ನು ವಾಲಗದೊಂದಿಗೆ ಕರೆ ತಂದ ನಂತರ ‘ಮಂದ್ ಪುಡಿಪ' ಕಾರ್ಯ ನಡೆಯಿತು.

ತದನಂತರ ಅಂಬಲದಲ್ಲಿ ಪ್ರಾರ್ಥಿಸಿ ಪುತ್ತರಿ ಕೋಲಾಟ್ ನಡೆಯಿತು. ನಂತರ ಪರೆಯ ಕಳಿ ಮತ್ತು ಸಾಮೂಹಿಕವಾಗಿ ವಾಲಗತಾಟ್‌ನಲ್ಲಿ ಕುಣಿದು ಸಂಭ್ರಮಿಸಿದರು.

ನಂತರ ಪದ್ಧತಿಯಂತೆ ವಾಲಗದೊಂದಿಗೆ ಮಲ್ಲೇಂಗಡ ಕುಟುಂಬದ ಐನ್‌ಮನೆಗೆ ಚಂಗನನ್ನು ಬಿಟ್ಟುಕೊಟ್ಟ ಊರಿನವರಿಗೆ ಮಲ್ಲೇಂಗಡ ಕುಟುಂಬಸ್ಥರು ಉಪಚರಿಸಿದರು.

ಅಣ್ಣೀರ ಐನ್‌ಮನೆಗೆ ಊರಿನ ತಕ್ಕರೊಂದಿಗೆ ಆಗಮಿಸಿದ ಊರಿನವರಿಗೆ ಅಣ್ಣೀರ ಕುಟುಂಬಸ್ಥರು ಸಾಂಪ್ರದಾಯಿಕ ಪದ್ಧತಿಯಂತೆ ಉಪಚರಿಸಿದರು. ಈ ಸಂದರ್ಭ ಊರಿನ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಕಾರ್ಯದರ್ಶಿ ಮೀದೇರಿರ ಹರೀಶ್ ಕಾರ್ಯಕಾರಿ ಮಂಡಳಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.ಚೆಟ್ಟಳ್ಳಿ: ಮಡಿಕೇರಿ ಸಮೀಪದ ಕಡಗದಾಳುವಿನ ಕುರುಳಿ ಅಂಬಲ ಮಂದ್‌ನಲ್ಲಿ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ನಡೆಯಿತು. ಡಿಸೆಂಬರ್ ೩ ರ ಸಂಜೆ ಈಡ್, ಡಿ. ೭ ರ ಮುಂಜಾನೆ ಮಂದ್ ತೊರ್‌ಪ. ತಾ. ೯ ರಂದು ಊರಿನವರು ಮಂದ್‌ನಲ್ಲಿ ಸೇರಿ ಮಧ್ಯಾಹ್ನ ೧೨ ಗಂಟೆಗೆ ಊರ್ ತಕ್ಕರ ಮನೆಗೆ ತೆರಳಿ ಫಲಹಾರ ಊಟೋಪಚಾರದ ನಂತರ ತಳಿಯಕ್ಕಿ ಬೊಳ್‌ಚ ದುಡಿಕೊಟ್ಟ್ ಪಾಟ್ ಒಡ್ಡೋಲಗದೊಂದಿಗೆ ಊರ್ ತಕ್ಕರನ್ನು ಮಂದ್‌ಗೆ ಕರೆ ತರಲಾಯಿತು. ನಂತರ ಊರ್ ಕೋಲ್ ನಡೆಯಿತು. ೩ ಗಂಟೆಗೆ ದೇಶತಕ್ಕರನ್ನು ಹಾಗೂ ನಾಡಿನ ತಕ್ಕರನ್ನು ಮಂದ್‌ಗೆ ಕರೆತಂದು ಸತ್ಕರಿಸಲಾಯಿತು.ಮೂಲನೆಲೆಯಲ್ಲಿ ದೇವರನ್ನು ಪ್ರಾರ್ಥಿಸಿ ನಾಡ್‌ಕೋಲ್, ಬಾಳೋಪಾಟ್, ಬೊಳಕಾಟ್ ಪರೆಯ ಕಳಿ, ವಾಲಗತಾಟ್ ನಡೆಯಿತು. ಫಲಹಾರದ ನಂತರ ದುಡಿಕೊಟ್ ಪಾಟ್ ಒಡ್ಡೋಲಗದೊಂದಿಗೆ ಊರುತಕ್ಕರನ್ನು ತಕ್ಕರ ಮನೆಗೆ ಬೀಳ್ಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಂದ್ ಸಮಿತಿಯ ಅಧ್ಯಕ್ಷ ಮಾದೇಟಿರ ಬೆಳ್ಳಪ್ಪ, ಊರಿನ ತಕ್ಕರಾದ ಕೊರವಂಡ ರಾಮು ಅಯ್ಯಪ್ಪ, ಏಳು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಊರಿನ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದರು. ತಾ. ೧೦gಂದು ಮಹಾವಿಷ್ಣು ಪೂಜೆ, ಅಂದು ಸಂಜೆ ಮಂದ್‌ನಲ್ಲಿ ದೇವ ಕೋಲನ್ನು ಒಪ್ಪಿಸಲಾಗುವುದು. ಪುರಾತನ ನ್ಯಾಯ ತೀರ್ಮಾನದ ನೆಲೆಯೆಂದೇ ಪ್ರಸಿದ್ದಿ ಪಡೆದ ಹಾಗೂ ಕೊನೆಯ ಪುತ್ತರಿ ಕೋಲಾಟ್ ಇದಾಗಿದ್ದು ಪುತ್ತರಿ ಕಳೆದ ಐದನೇ ದಿನ ನಾಡು ಕೋಲಾಟ ಮುಗಿದು ಮಾರನೇಯ ದಿನ ದೇವರ ನೆಲೆಯಲ್ಲಿ ಕೋಲು ಒಪ್ಪಿಸಿದ ನಂತರ ಕೊಡಗಿನ ಮತ್ತೆಲ್ಲೂ ಕೋಲಿನ ಸದ್ದು ಕೇಳುವಂತಿಲ್ಲ. ಇಗ್ಗುತಪ್ಪ ದೇವರಿಂದ ಅನುವಾದ ಪಡೆದ ಇತಿಹಾಸವಿರುವ ಮತ್ತು ಎವ್ವ ಮಕ್ಕ ದೇಬುವರು ಕೊಡಗು ಪ್ರದೇಶಕ್ಕೆ ನೆಲೆ ಅರಸಿ ಬಂದಾಗ ಮೊದಲು ಸ್ಥಾನ ಕೇಳಿದ ಪುರಾತನ ಇತಿಹಾಸ ಹೊಂದಿರುವ ಕುರುಳಿ ಅಂಬಲ ಕೋಲ್ ಮಂದ್ ಇದಾಗಿದೆನ್ನುತ್ತಾರೆ ಹಿರಿಯರು.ಚೆಯ್ಯಂಡಾಣೆ: ಸಮೀಪದ ಕರಡ ಗ್ರಾಮದ ಬೇಲ್ಯಾಣೆ ಮಂದ್‌ನಲ್ಲಿ ಪುತ್ತರಿ ಕೋಲಾಟ ನಡೆಯಿತು.

ಈ ಸಂದರ್ಭ ಈಶ್ವರ ಭಗವತಿ ದೇವಸ್ಥಾನ ಅಧ್ಯಕ್ಷ ನಡಿಕೇರಿಯಂಡ ಸೋಮಯ್ಯ, ಉಪಾಧ್ಯಕ್ಷ ಪಟ್ರಪಂಡ ಜಗದೀಶ್ ಗ್ರಾಮಸ್ಥರು ಉಪಸ್ಥಿತರಿದ್ದರು.ಶ್ರೀಮಂಗಲ:ವಿಶೇಷ ಪೌರಾಣಿಕ ಹಿನ್ನೆಲೆಯೊಂದಿಗೆ ಪ್ರಸಿದ್ಧಿ ಪಡೆದಿರುವ ನೆಮ್ಮಲೆ ಗ್ರಾಮದ ಶ್ರೀದುರ್ಗಿ ದೇವಿಯ ವಾರ್ಷಿಕ ಉತ್ಸವ ಹಾಗೂ ಪುತ್ತರಿ ನಮ್ಮೆ ವಿಜೃಂಭಣೆಯಿAದ ಹಾಗೂ ಶ್ರದ್ಧಾ ಭಕ್ತಿಯಿಂದ ಜರುಗಿತು. ತಾ. ೨ರಂದು ಮಂಗಳವಾರ ಕೊಡಿಮರ ನಿಲ್ಲಿಸುವುದರೊಂದಿಗೆ ಆರಂಭವಾದ ಹಬ್ಬವು ೩ರಂದು ನೆರ್ಪು ಹಾಗೂ ೪ರಂದು ದೇವರ ಅವಭ್ರತ ಸ್ನಾನ ಹಾಗೂ ಪುತ್ತರಿ ಕದಿರು ಕೊಯ್ಯುವುದು ಹಾಗೂ ದೇವರ ಅಲಂಕ್ರತ ವಿಗ್ರಹ ದರ್ಶನ ಹಾಗೂ ನೃತ್ಯದೊಂದಿಗೆ ಸಮಾಪ್ತಿಯಾಯಿತು. ಊರಿನ ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಹ್ಯಾರಿ ನಾಣಯ್ಯ, ಅರ್ಚಕರಾದ ಡಿ.ಪಿ. ಜಯಂತ, ಡಿ.ಪಿ.ಜಯಚಂದ್ರ, ಊರಿನ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕುಂಞAಗಡ ಕೃಷ್ಣ ಭೀಮಯ್ಯ ಹಾಗೂ ಆಡಳಿತ ಮಂಡಳಿಯವರ ಮುಂದಾಳತ್ವದಲ್ಲಿ ನಡೆದ ಉತ್ಸವದಲ್ಲಿ ಗುರುವಾರ ಅಪರಾಹ್ನ ವಿವಿಧ ವಿಧಿ ವಿಧಾನ ಹಾಗೂ ಪೂಜಾ ಕೈಂಕರ್ಯಗಳು ನಡೆದು ಸಂಜೆ ೭-೦೦ ಗಂಟೆಗೆ ದೇವರ ದರ್ಶನ ಹಾಗೂ ನೃತ್ಯ ಪ್ರದರ್ಶನ, ೮ ಗಂಟೆಗೆ ದೇವರ ಅವಭ್ರತ ಸ್ನಾನ, ೯-೧೫ಕ್ಕೆ ದೇವರ ಕದಿರು ಕೊಯ್ಯುವುದು, ದೇವಸ್ಥಾನದ ನೃತ್ಯ ಪ್ರದಕ್ಷಿಣೆ, ವಸಂತಪೂಜೆಯೊAದಿಗೆ ನಮ್ಮೆ ಶ್ರದ್ಧಾಭಕ್ತಿಯಿಂದ ಜರುಗಿತು.

ನೂರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾದಿಗಳು ಹಬ್ಬದ ಆಚರಣೆಯನ್ನು ಕಣ್ತುಂಬಿಕೊಳ್ಳುವುದರೊAದಿಗೆ ದೇವಿಯ ಆಶೀರ್ವಾದ ಪಡೆದುಕೊಂಡರು.