ಕಡಂಗ, ಡಿ. ೧೦ : ಸ್ಥಳೀಯ ಅಹಮದ್ ಉಲ್ ಕಬೀರ್ ರಿಫಾಯಿ ರಾತೀಬ್ ಸಂಘದ ನಾಲ್ಕನೇ ವಾರ್ಷಿಕೋತ್ಸವ ಪ್ರಯುಕ್ತ ಕಡಂಗ ಬದ್ರಿಯಾ ಮಸೀದಿಯ ಸಮೀಪದಲ್ಲಿ ಎರಡು ದಿನದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಮೆಡಿಕಲ್ ಕ್ಯಾಂಪ್ ಮತ್ತು ಹಿಜಾಮ ಆರೋಗ್ಯ ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಕೇರಳದ ಅಬ್ದುಲ್ ಲತೀಫ್ ಸಖಾಫಿ ನೇತೃತ್ವದ ಮದನಿಯಂ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾತೀಬ್ ಸಂಘದ ಅಧ್ಯಕ್ಷ ಶಮಿರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ರಾಶಿದ್ ಉಸ್ತಾದ್ ಅವರು ನೆರವೇರಿಸಿದರು. ದಫ್ ರಾತೀಬ್ ಸಂಘದ ವತಿಯಿಂದ ದಫ್ ಕಾರ್ಯಕ್ರಮ ಮತ್ತು ಕುತ್ ರಾತೀಬ್ ನಡೆಸಲಾಯಿತು.

ಮುಖ್ಯ ಭಾಷಣವನ್ನು ಮುದ್ರರಿಸರಾದ ಸ್ವಾದಿಕ್ ಸಖಾಫಿ ನಿರ್ವಹಿಸಿದರು. ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ., ಮುಯದ್ದೀನ್ ಜುಮಾ ಮಸೀದಿ ಖತೀಬರಾದ ರಫೀಕ್ ಲತೀಫಿ, ಸುಬೀರ್ ಸಿ.ಈ., ಮೊಯಿದು ಕುಟ್ಟಿ ಉಸ್ತಾದ್, ಯೂಸಫ್, ಉಸ್ತಾದ್ ಅಬ್ದುರಹಮಾನ್ ಸಹದಿ, ಅಬ್ದುಲ್ ಸಲಾಂ ಆರ್ಮಿ, ಅಶ್ರಫ್ ಸಿ.ಎ., ಫತ್ತಹ್, ಸುಲೈಮಾನ್, ರಜಾಕ್, ಅಬ್ದುರಹ್ಮನ್, ಕರೀಂ, ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನೆರವೇರಿತು.