ಕೂಡಿಗೆ, ಡಿ. ೧೦: ಕೂಡಿಗೆ ಹನುಮ ಸೇನಾ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಸರ್ಕಲ್ ಸಮೀಪದಲ್ಲಿರುವ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಸಭಾಂಗಣದ ಮುಂಭಾಗದಲ್ಲಿ ಧ್ವಜಸ್ತಂಭದ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿದರು.

ನಂತರ ಮಾತನಾಡಿದ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಯುವಕರಲ್ಲಿ ಸೇವಾ ಮನೋಭಾವ ಸೃಷ್ಟಿಯಾಗುತ್ತದೆ. ಗ್ರಾಮದ ಪ್ರಗತಿಪರ ಚಿಂತನೆಯ ಅಭಿವೃದ್ಧಿಗೆ ಸಹಕಾರವಾಗಲಿದೆ. ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಬಹು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹನುಮ ಸೇವಾ ಸೇನಾ ಸಮಿತಿ ಅಧ್ಯಕ್ಷ ಕೆ.ಎಸ್ ಶಿವಕುಮಾರ್, ಉಪಾಧ್ಯಕ್ಷ ರೀಜೂ, ಕಾರ್ಯದರ್ಶಿ ರವಿ, ಖಜಾಂಚಿ ಧರ್ಮ, ಶ್ರೀ ಸತ್ಯ ನಾರಾಯಣ ವ್ರತಾಚರಣೆ ಸಮಿತಿ ಅಧ್ಯಕ್ಷ ಗುರು, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ರಾವ್, ಅನಂತ, ಜಿಲ್ಲಾ ಯೂನಿಯನ್ ಸಹಕಾರ ಸಂಘದ ನಿರ್ದೇಶಕ ಎಸ್.ಆರ್. ಸುನಿಲ್ ರಾವ್, ಕೂಡಿಗೆ ಸಹಕಾರ ಸಂಘದ ಉಪಾಧ್ಯಕ್ಷ ಕೆ.ವಿ. ಬಸಪ್ಪ, ನಿರ್ದೇಶಕ ಕೆ.ಪಿ. ರಾಜು, ಉದ್ಯಮಿ ಕಿಶೋರ್, ಸಮಿತಿ ಗೌರವ ಅಧ್ಯಕ್ಷ ಕೇಶವ ರೈ, ಪ್ರಮುಖರಾದ ಮಂಜುನಾಥ, ಸುಬ್ಬಯ್ಯ, ಅರುಣ್ ಮಾದಪ್ಪ, ರಕ್ಷಿತ್, ವಿ. ಎಂ. ವಿಶ್ವ, ವೆಂಕಟೇಶ, ಸಮಿತಿ ಪದಾಧಿಕಾರಿಗಳು, ಸೇರಿದಂತೆ ಗ್ರಾಮಸ್ಥರು ಇದ್ದರು.