ಸುಂಟಿಕೊಪ್ಪ, ಡಿ. ೧೩: ಸುಂಟಿಕೊಪ್ಪದ ಪಂಪ್‌ಹೌಸ್ ಭಾಗದಲ್ಲಿ ಕಡಿಮೆ ವಿದ್ಯುತ್ ವೋಲ್ಟೇಜ್ ಇರುವ ಬಗ್ಗೆ ದಶಕಗಳಿಂದ ದೂರು ಬರುತ್ತಿದ್ದ ಹಿನ್ನಲೆಯಲ್ಲಿ ಸುಂಟಿಕೊಪ್ಪ ಸೆಸ್ಕ್ ವತಿಯಿಂದ ನೂತನ ಪರಿವರ್ತಕವನ್ನು ಅಳವಡಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಯಿತು.

ಕಳೆದ ೨ ದಶಕಗಳಿಗೂ ಹೆಚ್ಚು ಕಾಲದಿಂದ ಸುಂಟಿಕೊಪ್ಪದ ಪಂಪ್‌ಹೌಸ್ ಬಡಾವಣೆಯಲ್ಲಿ ಕಡಿಮೆ ವಿದ್ಯುತ್ ವೋಲ್ಟೇಜ್‌ನಿಂದಾಗಿ ಸಾಕಷ್ಟು ತೊಂದರೆ ಇತ್ತು. ಮಕ್ಕಳ ವಿದ್ಯಾರ್ಜನೆಗೂ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಈ ಭಾಗದ ನಿವಾಸಿಗಳು ಪಂಚಾಯಿತಿ, ಸೆಸ್ಕ್ ಇಲಾಖೆಗೆ ದೂರು ನೀಡಿ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಬೇಡಿಕೆಯನ್ನು ಸಲ್ಲಿಸಿದ್ದರು.

ಸಮಸ್ಯೆ ಗಂಭೀರತೆಯನ್ನು ಮನಗಂಡು ಸಂಬAಧಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಪಂಪ್‌ಹೌಸ್ ಬಡಾವಣೆಯಲ್ಲಿ ಸೆಸ್ಕ್ ಇಲಾಖೆಯ ಕಿರಿಯ ಇಂಜಿನಿಯರ್ ಲವಕುಮಾರ್ ನೇತೃತ್ವದಲ್ಲಿ ನೂತನವಾದ ೬೩ ಕೆ.ವಿ. ಸಾಮ್ಯರ್ಥದ ಪರಿವರ್ತಕವನ್ನು ಅಳವಡಿಸಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಸುನಿಲ್ ಕುಮಾರ್, ಈ ವಿಭಾಗದ ಸದಸ್ಯರುಗಳಾದ ಬಿ.ಎಂ. ಸುರೇಶ್, ವಸಂತಿ ಹಾಗೂ ಭಾಗದ ನಿವಾಸಿಗಳು ಇದ್ದರು.