ವೀರಾಜಪೇಟೆ, ಡಿ. ೧೩: ಪುತ್ತರಿ ಹಬ್ಬದ ಪ್ರಯುಕ್ತ ಇತಿಹಾಸ ಪೂರ್ವದಿಂದ ನಡೆದುಕೊಂಡು ಬರುತ್ತಿರುವ ಆರಾಯಿರ ನಾಡ್ ಪೂಮಾಲೆ ಮಂದ್ ವಾರ್ಷಿಕ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ನಡೆಯಿತು.

ಆರಾಯಿರ ನಾಡ್ ಪೂಮಾಲೆ ಮಂದ್ ವೀರಾಜಪೇಟೆ ವತಿಯಿಂದ ಪೂಮಾಲೆ ಮಂದ್‌ನಲ್ಲಿ ವಾರ್ಷಿಕ ಪುತ್ತರಿ ಕೋಲಾಟ್ ಪ್ರದರ್ಶನ ಜರುಗಿದವು. ಭೈರನಾಡ್ ಎಡೆನಾಡ್, ಬೇಟೋಳಿನಾಡ್, ಪೊರೆವನಾಡ್ ಮತ್ತು ಕುಕ್ಲೂರು ಗ್ರಾಮ ನಾಡುಗಳು, ಐಮಂಗಲ, ಚೆಂಬೆಬೆಳ್ಳೂರು, ಮಗ್ಗುಲ, ತಲಕಟ್ಟಕೇರಿ, ದೇವಣಗೇರಿ, ಹಾಲುಗುಂದ, ಭೈರನಾಡ್, ಬೇಟೋಳಿ, ಆರ್ಜಿ, ನಾಂಗಾಲ, ಕುಕ್ಲೂರು, ಕಣ್ಣಂಗಾಲ, ವೈಪಡ( ಮಗ್ಗುಲ) ಬಿಟ್ಟಂಗಾಲ. ಹಚ್ಚಿನಾಡ್ (ಪಚ್ಚಾಟ್) ಪೆಗ್ಗಳ, ಮತ್ತು ಬಾಳುಗೋಡು ಗ್ರಾಮಗಳ ಜನರು ಸಾಂಪ್ರದಾಯಿಕ ಧಿರಿಸಿನಲ್ಲಿ ಪೂಮಾಲೆ ಮಂದ್‌ಗೆ ಪ್ರವೇಶ ಮಾಡಿದರು. ಎಲ್ಲಾ ಊರುಗಳ ಬಾಂಧವರಿAದ ಮೂರು ಸುತ್ತುಗಳ ಕೋಲಾಟ್ ಪ್ರದರ್ಶನ ನಡೆಯಿತು. ಏಳು ಜೋಡಿಗಳಿಂದ ಪರೆಯ ಕಳಿ ನಡೆಯಿತು. ತ್ರಿವೇಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಉಮ್ಮತಾಟ್, ಬೊಳಕಾಟ್ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಆರಾಯಿರ ನಾಡ್ ಪೂಮಾಲೆ ಮಂದ್ ಸಮಿತಿಯ ಮರಣ ನಿಧಿ ಫಂಡ್ ಅಧ್ಯಕ್ಷ ಚೇಂದAಡ ಪೊನ್ನಪ್ಪ ಮಾತನಾಡಿ ವರ್ಷದಲ್ಲಿ ಒಂದು ಭಾರಿ ನಡೆಯುವ ಕೊಡವ ಸಾಂಪ್ರದಾಯಿಕ ವಾರ್ಷಿಕ ಕೋಲ್ ಧೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕೊಡವ ಆಚಾರ ವಿಚಾರಗಳು ಜೀವಂತವಾಗಿರಿಸುವ ನಿಟ್ಟಿನಲ್ಲಿ ಕೊಡವ ಸಮುದಾಯ ಭಾಂದವರು ಮತ್ತು ಕೊಡವ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆಗಳನ್ನು ಉಳಿಸುವ ಮತ್ತು ಪ್ರೋತ್ಸಾಹಿಸಿದಲ್ಲಿ ಮಾತ್ರ ಮುಂದಿನ ಪೀಳಿಗೆಯು ಆಚರಣೆಗೆ ಮುಂದಾಗುತ್ತದೆ ಎಂದು ಹೇಳಿದರು. ಕೋಲಾಟ್, ಪರಿಯಕಳಿಯಲ್ಲಿ ಭಾಗವಹಿಸಿದ ವಿಜೇತರಿಗೆ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆರಾಯಿರ ನಾಡ್ ಪೂಮಾಲೆ ಮಂದ್ ಸಮಿತಿಯ ಅಧ್ಯಕ್ಷರಾದ ಅಜ್ಜನಿಕಂಡ ಸುಧೀರ್, ಉಪಾಧ್ಯಕ್ಷರಾದ ವಾಟೇರಿರ ಶಂಕರಿ ಪೂವಯ್ಯ, ಕಾರ್ಯದರ್ಶಿ ಪೊಟ್ಟಂಡ ಗಣೇಶ್ ಮತ್ತು ಕ್ರೀಡಾ ಸಮಿತಿ ಅಧ್ಯಕ್ಷ ಪುಗ್ಗೇರ ನಂದಾ ಹಾಗೂ ಊರು ತಕ್ಕ ನಾಡ್ ತಕ್ಕ ವಿವಿಧ ಊರುಗಳಿಂದ ಆಗಮಿಸಿದ ಕೊಡವ ಸಮುದಾಯ, ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.