ಮಡಿಕೇರಿ, ಡಿ.೧೩ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾಪ್ರತಿಭೋತ್ಸವ ಸ್ಪರ್ಧೆಗಳು ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ, ಸಮೂಹ ಸ್ಪರ್ಧೆಗಳು ಇತ್ತೀಚೆಗೆ ನಗರದ ಗಾಂಧಿ ಭವನದಲ್ಲಿ ನಡೆಸಲಾಗಿತ್ತು.
ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾ. ೨೨ ರಂದು ಮೈಸೂರಿನ ಕಲಾಮಂದಿರದಲ್ಲಿರುವ ರಂಗಾಯಣದ ಆವರಣದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಜೇತರ ವಿವರ ಇಂತಿದೆ.
ಕರ್ನಾಟಕ/ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತದಲ್ಲಿ ಪ್ರಥಮ ಸ್ಥಾನ ಅಪೇಕ್ಷ ಆರ್.ರೈ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ,
ಶಾಸ್ತಿçÃಯ ನೃತ್ಯ (ಭರತನಾಟ್ಯ)ದಲ್ಲಿ ಪ್ರಥಮ ಸ್ಥಾನ ಆವಂತಿಕ ಟಿ.ಯು., ಸಂತ ಅನ್ನಮ್ಮ ಪ್ರೌಢ ಶಾಲೆ, ವೀರಾಜಪೇಟೆ
ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಲಿಶ್ಮಾ ಕೆ.ಕೆ., ಉದಯ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಗೇರಿ,
ಸುಗಮ ಸಂಗೀತದಲ್ಲಿ ಪ್ರಥಮ ಸ್ಥಾನ ಅಂಜಲಿನ ಮರಿಯಾ, ಸಂತ ಮೈಕಲರ ಶಾಲೆ, ಮಡಿಕೇರಿ
ಚಿತ್ರಕಲೆಯಲ್ಲಿ ಪ್ರಥಮ ಸ್ಥಾನವನ್ನುಕಾವೇರಿ ಪ್ರೌಢ ಶಾಲೆ, ವೀರಾಜಪೇಟೆಯ ಅರ್ಣವ್ ವಿ. ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ