ಮಡಿಕೇರಿ, ಡಿ. ೧೪: ಬಾಡಗ-೧ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ, ಪೋಷಕರ ಹಾಗೂ ಸ್ತ್ರೀಶಕ್ತಿ ಸಂಘದ ಸಹಕಾರದೊಂದಿಗೆ ಅಕ್ಷರಾಭ್ಯಾಸ, ಸರಸ್ವತಿ ಪೂಜೆ, ಛದ್ಮವೇಷ ಕಾರ್ಯಕ್ರಮ ನೆರವೇರಿತು. ಛದ್ಮವೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಸಖಿ ಒನ್ ಸ್ಟಾಪ್ ಸೆಂಟರ್‌ನ ಅಧಿಕಾರಿ ಪ್ರಭ, ಅಂಗನವಾಡಿ ಕಾರ್ಯಕರ್ತೆರಾದ ಜಯಂತಿ, ಚೈತ್ರ, ಸುಜಾತ, ಇಂದಿರಾ, ನಿವೃತ್ತ ಶಿಕ್ಷಕಿ ಅಮ್ಮಕ್ಕಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದಿವ್ಯ, ಶಿಕ್ಷಕಿ ಕಾಳಮ್ಮ ಗ್ರಾ.ಪಂ. ಸದಸ್ಯ ನಿಂಗಪ್ಪ ಇನ್ನಿತರರು ಇದ್ದರು.