ಮಡಿಕೇರಿಯಲ್ಲಿರುವ ಜಿಲ್ಲಾ ಕ್ರೀಡಾಂಗಣ ತಿಮ್ಮಯ್ಯ ಕ್ರೀಡಾಂಗಣ ಹಲವಾರು ಅಂತರರಾಷ್ಟಿçÃಯ ಆಟಗಾರರನ್ನು ನೀಡಿದ ಖ್ಯಾತಿಯನ್ನು ಹೊಂದಿದೆ. ಬಿ.ಪಿ. ಗೋವಿಂದ, ಎಂ.ಪಿ. ಗಣೇಶ್, ಪೈಕೆರ ಕಾಳಯ್ಯ, ಎಂ.ಎA. ಸೋಮಯ್ಯ, ಎ.ಬಿ. ಸುಬ್ಬಯ್ಯ, ವಿನೋದ್ ಚಿಣ್ಣಪ್ಪ, ಬಿ.ಸಿ. ಪೂಣಚ್ಚ, ವಿ.ಎಸ್. ವಿನಯ್ ರಂತಹ ನೂರಾರು ರಾಷ್ಟಿçÃಯ ಕ್ರೀಡಾಪಟುಗಳನ್ನು ಸಹ ನೀಡಿದ ಖ್ಯಾತಿ ಈ ಮೈದಾನಕ್ಕಿದೆ. ಕೊಡಗಿನ ಭೀಷ್ಮ ಎಂದೆ ಖ್ಯಾತಿಯಾಗಿದ್ದ ದಿವಂಗತ ಶಂಕರ್ ಸ್ವಾಮಿ ಅವರ ಗರಡಿಯಲ್ಲಿ ಅದೆಷ್ಟು ಕ್ರೀಡಾಪಟುಗಳು ಕ್ರೀಡೆಯ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಪ್ರಸ್ತುತ ಜಿಲ್ಲಾ ಕ್ರೀಡಾಂಗಣ ಜನರಲ್ ತಿಮ್ಮಯ್ಯ ಕ್ರೀಡಾಂಗಣವಾಗಿ ನಾಮಕರಣಗೊಂಡಿದೆ.
ಯುವಜನ ಸೇವಾ ಮತ್ತು ಸಬಲೀಕರಣ ಇಲಾಖೆ ಅಧೀನದಲ್ಲಿ ಈ ಮೈದಾನ ಬರುತ್ತಿದ್ದು ಇದರ ಉಸ್ತುವಾರಿಯೂ ಈ ಇಲಾಖೆಯದ್ದಾಗಿದೆ. ಮಡಿಕೇರಿ ನಗರದ ಮಕ್ಕಳಿಗೆ ತಮ್ಮ ಕ್ರೀಡಾ ಕೌಶಲ್ಯ ಪ್ರತಿಭೆಯನ್ನು ಹೊರ ತರಲು ಸಾರ್ವಜನಿಕವಾಗಿ ದೊರಕುತ್ತಿರುವ ಏಕೈಕ ಮೈದಾನ ಇದಾಗಿದೆ. ಎಫ್ಎಂಸಿ ಕಾಲೇಜು ಮೈದಾನ ಯೂನಿವರ್ಸಿಟಿ ಕಾಲೇಜ್ ಆಗಿ ಪರಿವರ್ತನೆಗೊಂಡ ನಂತರ ಅದರ ವ್ಯಾಪ್ತಿಯಲ್ಲಿ ಬರುತ್ತದೆ. ಸಾಯಿ ಗ್ರೌಂಡ್ ಶನಿವಾರ ಮತ್ತು ಆದಿತ್ಯವಾರ ಮಾತ್ರ ಇತರ ಕ್ರೀಡಾಪಟುಗಳಿಗೆ ಲಭ್ಯ. ಬಾಕಿ ದಿನ ಸಾಯಿ ಮಕ್ಕಳಿಗೆ ಅಭ್ಯಾಸಕ್ಕಾಗಿ ಮೀಸಲು. ಪೊಲೀಸ್ ಮೈದಾನ ಪೊಲೀಸ್ ಕವಾಯತು ಹಾಗೂ ಇತರ ಪೊಲೀಸ್ ಕಾರ್ಯಕ್ರಮಗಳಿಗೆ ಮೀಸಲು. ಗಾಂಧಿ ಮಂಟಪ ಮೈದಾನ ಈಗಾಗಲೇ ಪಾರ್ಕಿಂಗ್ ಮೈದಾನವಾಗಿದೆ.
ಹೀಗಾದರೆ ಕ್ರೀಡಾಪಟುಗಳು ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ದೈಹಿಕವಾಗಿ ಸದೃಢಗೊಳ್ಳಲು ಮಡಿಕೇರಿಯಲ್ಲಿ ಮೈದಾನವು ಎಲ್ಲಿದೆ? ಇದು ಸಾರ್ವಜನಿಕವಾಗಿ ಎಲ್ಲರೂ ಯೋಚಿಸಬೇಕಾದ ವಿಚಾರ. ಕೆಲವು ಅಧಿಕಾರಿಗಳು ನೀಡುವ ತಪ್ಪು ಮಾಹಿತಿಯಿಂದ ಇಂದು ಮಿಡ್ಲ್ ಗ್ರೌಂಡ್ನಲ್ಲಿ ಅವೈಜ್ಞಾನಿಕವಾಗಿ ಕಾಂಕ್ರೀಟ್ ಕಟ್ಟಡಗಳು ಮೈದಾನವನ್ನೇ ಆವರಿಸಿಕೊಂಡು ಬಿಟ್ಟಿದ್ದು ಸುಸಜ್ಜಿತವಾಗಿದ್ದ ಫುಟ್ಬಾಲ್ ಗ್ರೌಂಡ್ ಮೈದಾನವನ್ನೇ ನುಂಗಿಬಿಟ್ಟಿದೆ. ಬೇಕಾಬಿಟ್ಟಿ ಕಾಂಕ್ರೀಟ್ ಕಟ್ಟಡಗಳು ಮೈದಾನವನ್ನು ಆವರಿಸಿಕೊಂಡು ಇರುವ ಮೈದಾನವು ಸಹ ಮುಂದಿನ ಪೀಳಿಗೆಗೆ ದೊರಕುವುದು ಅನುಮಾನವಾಗಿದೆ. ಹವಾ ನಿಯಂತ್ರಣ ರೂಮ್ನಲ್ಲಿ ಕುಳಿತುಕೊಂಡು ಯೋಜನೆ ರೂಪಿಸುವ ಅಧಿಕಾರಿಗಳು ಕನಿಷ್ಟ ಪಕ್ಷ ಕ್ರೀಡಾ ಮೈದಾನ... ಮೈದಾನವಿದ್ದರೆ ಕ್ರೀಡೆ ಆಟ ಎಲ್ಲವೂ ಸಾಧ್ಯ ಎಂಬುದನ್ನು ಸಹ ಮರೆತಂತಿದೆ. ಹೀಗೆ ಮುಂದುವರೆದರೆ ಮೈದಾನದ ಬದಲು ಬರಿ ಕಾಂಕ್ರೀಟ್ ಕಟ್ಟಡ ಕಾಣುವ ಸಮಯ ದೂರವಿಲ್ಲ.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಇಲಾಖೆಗೆ ಸಂಬAಧಪಟ್ಟಿರುವ ಕಚೇರಿ ಹಾಗೂ ಕಟ್ಟಡವಿದ್ದರೂ ಇಲಾಖೆಗೆ ಹೊಸದೊಂದು ಕಟ್ಟಡವನ್ನು ಮೈದಾನದ ಇನ್ನೊಂದು ಭಾಗದಲ್ಲಿ ಕಟ್ಟುವ ಅವಶ್ಯಕತೆ ಏನಿದೆ? ಇದಕ್ಕೆ ಯೋಜನೆ ರೂಪಿಸಿದವರಾರು? ಹೀಗೆ ಒಂದೊAದು ಕಾಂಕ್ರೀಟ್ ಕಟ್ಟಡವು ನೈಸರ್ಗಿಕವಾದ ಮೈದಾನವನ್ನು ಅತಿಕ್ರಮಿಸುತ್ತಿದ್ದು ಕ್ರೀಡಾ ಅಭಿಮಾನಿಗಳು ಕ್ರೀಡಾಪಟುಗಳನ್ನು ಮೂಕ ಪ್ರೇಕ್ಷಕರನ್ನಾಗಿಸಿದೆ. ಒಂದು ವೇಳೆ ಇಲಾಖೆಯ ಕಚೇರಿ ಹೊಸದಾಗಿ ನಿರ್ಮಾಣವಾಗುವಾಗ ಕಟ್ಟಡಕ್ಕೆ ಸ್ಥಳಾಂತರಗೊAಡಲ್ಲಿ ಈಗಿರುವ ಬೃಹತ್ ಕಟ್ಟಡ ಕಾಡುಪಾಲು ಅಥವಾ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಏಕೆಂದರೆ ಅಲ್ಲಿ ನಡೆಯುತ್ತಿರುವ ಕ್ರೀಡಾ ವಿದ್ಯಾರ್ಥಿ ವಸತಿಗೃಹ ಕೂಡ ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಹಾಗಾದರೆ ಯುವಜನ ಸೇವಾ ಮತ್ತು ಸಬಲೀಕರಣ ಇಲಾಖೆಗೆ ಹೊಸ ಕಚೇರಿಯ ಅವಶ್ಯಕತೆಯ ಬಗ್ಗೆ ಇಲಾಖೆ ಸ್ಪಷ್ಟೀಕರಣ ನೀಡಬೇಕಾಗಿದೆ. ತಮ್ಮ ಕಣ್ಣ ಮುಂದೆ ಅನಧಿಕೃತವಾಗಿ ಖಾಸಗಿ ವ್ಯಕ್ತಿಯೊಬ್ಬರು ಮೈದಾನದ ಮೂಲೆಯಲ್ಲಿ ಹರಿಯುತ್ತಿರುವ ರಾಜ ಕಾಲುವೆಯ ಪಥವನ್ನೇ ಬದಲಾಯಿಸಿ ಕೆಳಭಾಗದಲ್ಲಿ ಮಣ್ಣು ಕೊರೆಯುವಾಗ ಕಣ್ಣುಮುಚ್ಚಿ ಕುಳಿತಿದ್ದ ಇಲಾಖೆ ಕಳೆದ ಮಳೆಗಾಲದಲ್ಲಿ ಮೈದಾನದ ಒಂದು ಬದಿಯ ಕಾಂಪೌAಡ್ವಾಲ್ ಕುಸಿದು ಬಿದ್ದಿದ್ದು ಮೈದಾನದ ಒಂದು ಭಾಗವೇ ಕುಸಿದು ಹೋಗಿದೆ. ಸಂಬAಧಪಟ್ಟ ಇಲಾಖೆ ಗಮನಕ್ಕೆ ತಂದರೂ ಸಹ ಜಾಣ ಮೌನವನ್ನು ವಹಿಸಿದ ಕಾರಣ ಖಾಸಗಿ ವ್ಯಕ್ತಿಯ ಈ ಅವಾಂತರದಿAದ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬದಲಿ ತಡೆಗೋಡೆ ಖಾಸಗಿ ವ್ಯಕ್ತಿಯ ಕೈಯಿಂದ ಕಟ್ಟಿಸುವ ಬದಲು ಇಲಾಖೆ ಮೈದಾನದ ಒಳಭಾಗದಲ್ಲಿ ೨೦ ಅಡಿ ಜಾಗವನ್ನು ಬಳಸಿಕೊಂಡು ಕಾಂಪೌAಡ್ ಕಟ್ಟುವ ಯೋಜನೆ ರೂಪಿಸಿದೆ. ಇದಕ್ಕೆ ಕಾರಣಕರ್ತನಾದ ವ್ಯಕ್ತಿ ಯಾರು? ಜಾಗ ಯಾರ ಹೆಸರಲ್ಲಿದೆ ಅನುಮತಿ ಪಡೆದುಕೊಳ್ಳದೆ ಈ ಕಾನೂನುಬಾಹಿರ ಕೆಲಸವನ್ನು ಮಾಡಿದವರ ಮೇಲೆ ಕ್ರಿಮಿನಲ್ ದಾವೆ ಕೂಡ ಬೇಕಾಗಿರುವುದು ಇಲಾಖೆಯ ಆದ್ಯ ಕರ್ತವ್ಯವಾಗಿದೆ. ವಾರ್ಡಿಗೆ ಸಂಬAಧಪಟ್ಟ ನಗರಸಭಾ ಸದಸ್ಯರು ಬಂದು ಸ್ಥಳ ಪರೀಶೀಲಿಸಿ ಹೋಗಿ ಜಾಣ ಮೌನಕ್ಕೆ ಶರಣಾಗಿದ್ದು ಸಂಶಯಕ್ಕೆ ಕಾರಣವಾಗಿದೆ. ಏನೇ ಆಗಲಿ ಮೈದಾನ ಮೈದಾನವಾಗಿಯೇ ಉಳಿಯಲಿ., "ಮೈದಾನವಿದ್ದರಷ್ಟೇ ಕ್ರೀಡೆ" ಎಲ್ಲರನ್ನು ಒಟ್ಟಿಗೆ ಸೇರಿಸುವ ಶಕ್ತಿ ಇರುವುದು ಇದೇ ಕ್ರೀಡೆಗೆ. ಬದಲಾಗುತ್ತಿರುವ ಈಗಿನ ಕ್ರೀಡೆಗೆ ಸರಿಯಾಗಿ ಕೃತಕ ಹಾಸು ಮೈದಾನ, ಸಿಂಥೆಟಿಕ್ ಟ್ರ್ಯಾಕ್ ಅವೆಲ್ಲದರ ಅವಶ್ಯಕತೆ ಇಂದಿನ ಆಧುನಿಕ ಕ್ರೀಡೆಗಿದೆ. ಪ್ರತಿ ಜಿಲ್ಲೆಯ ಹೆಡ್ಕ್ವಾರ್ಟರ್ಸ್ನಲ್ಲಿ ಸುಸಜ್ಜಿತ ಸ್ಟೇಡಿಯಂ ಇರಬೇಕು ಸರಕಾರದ ಆದೇಶವಾಗಿದೆ. ಆ ನಿಟ್ಟಿನಲ್ಲಿ ಹಾಸನ, ಶಿವಮೊಗ್ಗ, ಮಂಡ್ಯ, ಮೈಸೂರು, ಧಾರವಾಡ ಎಲ್ಲಾ ಜಿಲ್ಲೆಗಳಲ್ಲಿಯೂ ಸುಸಜ್ಜಿತವಾದ ಸ್ಟೇಡಿಯಂ ನಿರ್ಮಾಣವಾಗಿದೆ. ಕ್ರೀಡೆಗೆ ಹೆಸರಾದ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣ ಬದಲಾಗಬೇಕಾಗಿದೆ. ಶಾಸಕರಾದ ಮಂತರ್ ಗೌಡರವರು ಕ್ರೀಡಾಪಟುಗಳ ಅಭಿಲಾಷೆಯಂತೆ ಈಗಾಗಲೇ ಸಿಂಥೆಟಿಕ್ ಟ್ರ್ಯಾಕಿಗೆ ಸರಕಾರದಿಂದ ಅನುಮೋದನೆ ದೊರಕಿಸಿದ್ದು, ಇದು ಕ್ರೀಡಾಪಟುಗಳಿಗೆ ಅತೀವ ಸಂತಸ ತಂದಿದೆ. ಕ್ರೀಡಾಪಟುಗಳು ಇವರಿಗೆ ಆಭಾರಿಯಾಗಿದ್ದೇವೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡರವರು, ವೀರಾಜಪೇಟೆಯ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣರವರ ಹಾಗೂ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಹಾಗೂ ಸ್ವತಃ ಕ್ರೀಡಾಪಟುವಾಗಿರುವ ಸಿ.ಎಸ್. ಅರುಣ್ ಮಾಚಯ್ಯರವರ ಅಧಿಕಾರಾವಧಿಯಲ್ಲಿ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣ ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ ಎಂಬುದು ಎಲ್ಲಾ ಕ್ರೀಡಾ ಅಭಿಮಾನಿಗಳ ಆಶಯ.
- ಚುಮ್ಮಿ ದೇವಯ್ಯ, ಅಧ್ಯಕ್ಷರು, ಜನರಲ್ ತಿಮ್ಮಯ್ಯ ಕ್ರೀಡಾಂಗಣ ರಕ್ಷಣಾ ಸಮಿತಿ ಮಡಿಕೇರಿ.