ಶನಿವಾರಸAತೆ, ಡಿ..೧೪ : ಪಟ್ಟಣದ ಶ್ರೀ ವೀರಾಂಜನೆಯ ಉತ್ಸವ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಶೋಭಾ ಯಾತ್ರಾ ಕಾರ್ಯಕ್ರಮಕ್ಕೆ ಬೆಳಿಗ್ಗೆ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿ - ಗುಳಿಗ ದೈವದ ಬನದಲ್ಲಿ ವಿಶೇಷ ಪೂಜೆ ಹಾಗೂ ಗೋಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವಕ್ಕೆ ಹೂವಿನ ಅಲಂಕಾರ ಮಾಡಿ, ಎಳನೀರು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ ಪೂಜಿಸಲಾಯಿತು.ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.

ಗೋವು-ಕರುವಿಗೆ ಗಂಗಾ ಸ್ನಾನ ಮಾಡಿಸಿ, ಅರಶಿನ-ಕುಂಕುಮ ಹಚ್ಚಿ, ಹೂವಿನ ಮಾಲೆ ಹಾಕಿ ಅಲಂಕರಿಸಿ, ಅರ್ಚಕರು, ಮುತ್ತೆöÊದೆಯರು ಆರತಿ ಬೆಳಗಿ ಪೂಜಿಸಲಾಯಿತು. ಅಕ್ಕಿ-ಬೆಲ್ಲ-ಬಾಳೆಹಣ್ಣು ತಿನ್ನಿಸಿ ನಮಿಸಲಾಯಿತು.

ಶ್ರೀ ವಿಜಯ ವಿನಾಯಕ ದೇವಸ್ಥಾನದ ಅರ್ಚಕ ಮಂಜುನಾಥ್ ಶರ್ಮ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದ ಅರ್ಚಕ ಪ್ರಕಾಶ್ಚಂದ್ರ ಪೂಜಾ ವಿಧಿ ನೆರವೇರಿಸಿದರು.

ಹಿಂದೂ ಜಾಗರಣಾ ವೇದಿಕೆ ಶ್ರೀ ವೀರಾಂಜನೇಯ ಉತ್ಸವ ಸಮಿತಿ ಅಧ್ಯಕ್ಷ ಪುನೀತ್ ತಾಳೂರು, ಉಪಾಧ್ಯಕ್ಷ ದಿನೇಶ್ ಬಿಳಾಹ, ಖಜಾಂಚಿ ಸೋಮಶೇಖರ್ ಪೂಜಾರಿ, ಮುಖಂಡರಾದ ಅಭಿ, ಗಿರೀಶ್, ಸುರೇಶ್, ಜಿ.ಈ. ಪ್ರವೀಣ್, ವಿನೋದ್, ನಿಂಗರಾಜ್, ಪ್ರಕಾಶ್, ಕುಮಾರ್ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.