ಮಡಿಕೇರಿ, ಡಿ. ೧೪: ಮಡಿಕೇರಿಯ ಸಂತ ಮೈಕಲರ ದೇವಾಲಯದ ಬೆಳ್ಳಿ ಮಹೋತ್ಸವ ಹಾಗೂ ವಾರ್ಷಿಕೋತ್ಸವ ವಿಜೃಂಭಣೆಯಿAದ ನಡೆಯಿತು.

ಸಂಜೆ ಅಲಂಕೃತ ವಾಹನದಲ್ಲಿ ದೇವರ ವಿಗ್ರಹಗಳನ್ನು ಕುಳ್ಳಿರಿಸಿ ಸಹಸ್ರಾರು ಸಂಖ್ಯೆಯ ಕ್ರಿಶ್ಚಿಯನ್ ಬಾಂಧವರು ನಗರದಲ್ಲಿ ಮೆರವಣಿಗೆ ನಡೆಸಿದರು.

ಮಕ್ಕಳು,ಮಹಿಳೆಯರಾದಿಯಾಗಿ ಜನಾಂಗದ ಮಂದಿ ಸಂತ ಮೈಕಲರ ದೇವಾಲಯದಿಂದ ಚೌಕಿವರೆಗೆ ಹಾಗೂ ಅಲ್ಲಿಂದ ಮತ್ತೆ ಸಂತ ಮೈಕಲರ ದೇವಾಲಯದತ್ತ ಪಾದಯಾತ್ರೆ ನಡೆಸಿದರು. ದೇವಾಲಯಕ್ಕೆ ೨೫ ವರ್ಷ ತುಂಬಿದ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.