ವೀರಾಜಪೇಟೆ, ಡಿ. ೧೪: ಸಮರ ಕಲೆಯಾದ ಕರಾಟೆ ಪಂದ್ಯಾಟದಲ್ಲಿ ಗೋಜೊಕಾಯ್ ಕರಾಟೆ ತರಬೇತಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ವಿ.ಎಸ್.ಕೆ ಓಪನ್ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾಟ ಮೈಸೂರಿನ ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಮುಕ್ತ ಕರಾಟೆ ಪಂದ್ಯಾಟಗಳಲ್ಲಿ ಕೊಡಗು ಜಿಲ್ಲೆಯ ಗೋಜೊಕಾಯ್ ಕರಾಟೆ ತರಬೇತಿ ಶಾಲೆಯ ಒಟ್ಟು ೬೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕತಾ ಮತ್ತು ಕುಮಿಟೆ ವಿಭಾಗದಲ್ಲಿ ೩೨ ಪ್ರಥಮ, ೨೮ ದ್ವಿತೀಯ ಹಾಗೂ ೨೪ ತೃತೀಯ ಸ್ಥಾನಗಳನ್ನು ಪಡೆದುಕೊಂಡು ಉತ್ತಮ ಪ್ರದರ್ಶನದೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ. ಭಾಗವಹಿಸಿದ ಎಲ್ಲಾ ೬೮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಯಿತು.

ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ಶಾಲೆಯ ತರಬೇತುದಾರ ಸೆನ್‌ಸಾಯಿ ಎಂ.ಬಿ ಚಂದ್ರನ್ ಅವರು ತರಬೇತಿ ನೀಡುತ್ತಿದ್ದಾರೆ.