(ಕಾಯಪAಡ ಶಶಿ ಸೋಮಯ್ಯ)

ಮಡಿಕೇರಿ, ಡಿ. ೧೪: ಕೊಡವ ಕುಟುಂಬಗಳ ನಡುವೆ ಪ್ರತಿವರ್ಷ ಜರುಗುವ ಕೌಟುಂಬಿಕ ಹಾಕಿ ಉತ್ಸವ ಒಂದಲ್ಲಾ ಒಂದು ವಿಶೇಷತೆಗಳನ್ನು ಒಳಗೊಂಡAತೆ ಮುಂದುವರಿಯುತ್ತಿದೆ. ಈ ಬಾರಿ ೨೬ನೇಯ ವರ್ಷದ ಕೌಟುಂಬಿಕ ಹಾಕಿ ಉತ್ಸವವನ್ನು ಚೇನಂಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿ ಆಯೋಜಿಸುತ್ತಿದ್ದು, ಮುಂದಿನ ಏಪ್ರಿಲ್ - ಮೇ ತಿಂಗಳಿನಲ್ಲಿ ನಡೆಯಲಿದೆ.

ಈಗಾಗಲೇ ಉತ್ಸವದ ಸಿದ್ಧತೆಗಳು ನಡೆಯುತ್ತಿದ್ದು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಕಿ ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ. “ ಒಂದು ಗೋಲು ಒಂದು ಗಿಡ'' ಎಂಬ ಪರಿಕಲ್ಪನೆಯೊಂದಿಗೆ ಆಯೋಜಕ ಪರಿಸರ ಕಾಳಜಿಯನ್ನು ತೋರುತ್ತಿದ್ದ ಹಲವೆಡೆ ಗಿಡ ನೆಡುವ ಕಾರ್ಯ ನಡೆದಿದೆ.

ಈ ಬಾರಿ ಮತ್ತೊಂದು ಪ್ರಯತ್ನ

ಹಾಕಿ ಉತ್ಸವಕ್ಕೆ ಹೊಸತೊಂದು ವಿಶೇಷತೆ ಎಂಬAತೆ ಹಾಕಿ ಕ್ರೀಡೆಗೆ ಚಿಕ್ಕಂದಿನಲ್ಲಿಯೇ ಮಕ್ಕಳನ್ನು ಪ್ರೇರೇಪಿಸುವ ಹೊಸ ಪ್ರಯತ್ನವೊಂದಕ್ಕೆ ಚೇನಂಡ ಕುಟುಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗಮನಾರ್ಹವಾಗಿದೆ. ಕೌಟುಂಬಿಕ ಹಾಕಿ ಕೊಡವ ಕುಟುಂಬಗಳ ನಡುವೆ ಮಾತ್ರ ಜರುಗುತ್ತದೆ. ಇದು ವಾರ್ಷಿಕ ನಮ್ಮೆಯಾಗಿದ್ದು, ಇದನ್ನು ಇನ್ನಷ್ಟು ಅರ್ಥಪೂರ್ಣ ಮಾಡಬೇಕೆಂಬುದು ಇವರ ಕನಸ್ಸು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಮಟ್ಟದ ಪ್ರತ್ಯೇಕ ಹಾಕಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.

ಶಾಲಾ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಯಾವುದೇ ಜಾತಿ - ಮತ ಬೇಧವಿಲ್ಲದೆ ಯುವ ಹಾಕಿ ಪ್ರತಿಭೆಗಳನ್ನು ಬೆಳಕಿಗೆ ತರುವುದು ಹೊಸ ಚಿಂತನೆಯಾಗಿದೆ. “ ಹಾಕಿ ಸ್ಟಿಕ್ ವಿತ್ ಪ್ರೆöÊಮರಿ ಸ್ಟೇಜ್'' ಎಂಬದು ಇವರ ಉದ್ದೇಶ. ಪ್ರಾಥಮಿಕ ಹಂತದಲ್ಲೇ ಮಕ್ಕಳು ಹಾಕಿ ಸ್ಟಿಕ್ ಹಿಡಿದು ಆಡಲು ಮುಂದಾದಲ್ಲಿ ಮುಂದೊAದು ದಿನ ರಾಷ್ಟç, ಅಂತರರಾಷ್ಟçಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಅವಕಾಶವಾಗುತ್ತದೆ ಎಂಬ ಪರಿಕಲ್ಪನೆಯೊಂದಿಗೆ ಈ ಪ್ರತ್ಯೇಕ ಪಂದ್ಯಾವಳಿ ನಡೆಸಲು ಮುಂದಾಗಿದ್ದಾರೆ.

ಜ. ೧ ರಿಂದ ೪ ರ ತನಕ ಮೂರ್ನಾಡಿನಲ್ಲಿ ಪಂದ್ಯಾಟ

ಚೇನAಡ ಕುಟುಂಬಸ್ಥರು ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯೊಂದಿಗೆ ವ್ಯವಹರಿಸಿದ್ದು, ಇಲಾಖೆಯೂ ಈ ಪ್ರಯತ್ನಕ್ಕೆ ಸಹಕಾರ ನೀಡಲು ಒಪ್ಪಿಗೆ ನೀಡಿದೆ. ೪ಐದನೇ ಪುಟಕ್ಕೆ

೪ಐದನೇ ಪುಟಕ್ಕೆ ಜನವರಿ ೧ ರಿಂದ ೪ ರತನಕ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿ ನಿಗದಿಯಾಗಿದೆ. ಶಿಕ್ಷಣ ಇಲಾಖೆಯ ಮೂಲಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸೂಚಿಸಿ ಪತ್ರ ರವಾನಿಸಲಾಗಿದೆ.

ಈ ಪಂದ್ಯಾವಳಿಗೆ ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಜೂನಿಯರ್ ಅಂಪರ‍್ಸ್ ಅನ್ನು ಕಳುಹಿಸಿಕೊಡಲಾಗುತ್ತಿದೆ. ಹಾಕಿ ಕೂರ್ಗ್ ಸಂಸ್ಥೆಯೊAದಿಗೆ ಕೊಡವ ಹಾಕಿ ಅಕಾಡೆಮಿಯೂ ಈ ಪಂದ್ಯಾವಳಿಗೆ ಸಹಕಾರ ನೀಡುತ್ತಿದೆ ಎಂದು ಚೇನಂಡ ಕಪ್ ಉತ್ಸವ ಸಮಿತಿ ಪ್ರಮುಖರಾದ ದೀನಾ ಚಂಗಪ್ಪ ಅವರು “ಶಕ್ತಿ''ಗೆ ಮಾಹಿತಿ ನೀಡಿದ್ದಾರೆ.

ಹಾಕಿ ಪಂದ್ಯಾವಳಿ ಸಂದರ್ಭ ೩೦ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಇದಕ್ಕೆ ಒಲಂಪಿಯನ್ ಚೆಪ್ಪುಡೀರ ಎನ್. ಪೂಣಚ್ಚ, ರಾಷ್ಟಿçÃಯ ತರಬೇತುದಾರ ಬಿ.ಜೆ. ಕಾರ್ಯಪ್ಪ ಅವರುಗಳು ಸಹಕಾರ ನೀಡಲಿದ್ದಾರೆ. ಆಯಾ ಶಾಲಾ ತಂಡಗಳಲ್ಲಿ ಮಕ್ಕಳ ಕೊರತೆಯಿದ್ದರೆ, ಬಾಲಕಿಯರೂ ತಂಡದ ಪರ ಆಡಬಹುದಾಗಿದೆ. ಒಂದು ವೇಳೆ ನಾಲ್ಕೆöÊದೇ ಮಕ್ಕಳಿದ್ದಲ್ಲಿ ಅವರುಗಳನ್ನು ಒಂದು ತಂಡವಾಗಿ ಆಯ್ಕೆ ಮಾಡಿ ಆಡಿಸುವ ಚಿಂತನೆಯೂ ಇದೆ.

ಆಯ್ಕೆಯಾಗುವ ೩೦ ಪ್ರತಿಭೆಗಳಿಗೆ ಪರಿಣತರಿಂದ ಏಪ್ರಿಲ್‌ನಲ್ಲಿ ನಾಪೋಕ್ಲುವಿನಲ್ಲಿ ತರಬೇತಿ ಒದಗಿಸಲಾಗುವುದು. ಇಲ್ಲಿಯೂ ಅತ್ಯುತ್ತಮ ಸಾಧನೆ ತೋರುವ ೧೦ ಪಟುಗಳನ್ನು ಆಯ್ಕೆ ಮಾಡಿ ಅವರನ್ನು ಮುಂದಿನ ಹಂತಕ್ಕೆ ತಲುಪಿಸಲು ಕುಟುಂಬ ಸಹಕಾರ ನೀಡಲಿರುವುದಾಗಿಯೂ ದೀನಾ ಚಂಗಪ್ಪ ತಿಳಿಸಿದ್ದಾರೆ.

ಜ. ೧ ರಿಂದ ೪ ರ ತನಕ ಜರುಗುವ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಗದು, ಟ್ರೋಫಿಯೊಂದಿಗೆ ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಮಾನ್ಯತಾ ಪತ್ರ ನೀಡುವ ನಿಟ್ಟಿನಲ್ಲೂ ಕ್ರಮವಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಕುಟುಂಬದ ಈ ಪ್ರಯತ್ನಕ್ಕೆ ಜಿಲ್ಲೆಯ ಪ್ರಾಥಮಿಕ - ಪ್ರೌಢಶಾಲಾ ತಂಡಗಳು ತಮ್ಮ ತಂಡ ಕಳುಹಿಸುವ ಮೂಲಕ ಸಹಕರಿಸುವಂತೆ ಚೇನಂಡ ಕುಟುಂಬ ವಿನಂತಿಸುವುದಾಗಿ ಉತ್ಸವ ಸಮಿತಿ ಪ್ರಮುಖರು ತಿಳಿಸಿದ್ದಾರೆ.