ಮಡಿಕೇರಿ, ಡಿ. ೧೫: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಬೆಂಗಳೂರು ಅರ್ಬನ್ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ತಾ. ೨೫ ರಿಂದ ೨೮ ರವರೆಗೆ ಆನೇಕಲ್ ನಗರದ ಸರ್ಕಾರಿ ಹೊಸ ಮಾಧ್ಯಮಿಕ ಆಟದ ಮೈದಾನದಲ್ಲಿ ಪುರುಷ ಮತ್ತು ಮಹಿಳೆಯರ ಸೀನಿಯರ್ ಸ್ಟೇಟ್ ಚಾಂಪಿಯನ್‌ಶಿಪ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.

ಕೊಡಗು ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ತಾ. ೧೮ ರಂದು ಮಧ್ಯಾಹ್ನ ೩.೩೦ ಗಂಟೆಗೆ ಕುಶಾಲನಗರದ ಜ್ಞಾನಭಾರತಿ ಶಾಲಾ ಮೈದಾನದಲ್ಲಿ ನಡೆಸಲಾಗುತ್ತಿದ್ದು, ಆಸಕ್ತ ಕಬಡ್ಡಿ ಕ್ರೀಡಾಪಟುಗಳು ತಮ್ಮ ಆಧಾರ್ ಪ್ರತಿಯೊಂದಿಗೆ ಹಾಜರಾಗುವಂತೆ ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕಪಿಲ್ ದುಗ್ಗಳ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅವಿನಾಶ್ ೭೩೩೭೭೭೦೦೧೧, ಮಣಿಕಂಠ ೯೪೮೨೮೬೩೭೦೭, ಹೇಮಂತ್ ೯೫೯೧೩೩೮೭೧೯ ಇವರುಗಳನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ.