ಮಡಿಕೇರಿ, ಡಿ. ೧೫: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಕರ್ನಾಟಕ ದಕ್ಷಿಣ ಪ್ರಾಂತದ ೪೫ನೇ ಪ್ರಾಂತ ಸಮ್ಮೇಳನ ತಾ. ೧೭, ೧೮ ಹಾಗೂ ೧೯ ರಂದು ಮಡಿಕೇರಿಯ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಂತ ಕಾರ್ಯದರ್ಶಿ ಹೆಚ್.ಕೆ. ಪ್ರವೀಣ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಂತದ ೯ ಸಂಘಟನಾತ್ಮಕ ವಿಭಾಗಗಳಿಂದ ಸುಮಾರು ೬೦೦ ವಿದ್ಯಾರ್ಥಿಗಳು, ಅಧ್ಯಾಪಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ತಾ. ೧೭ ರ ಬೆಳಿಗ್ಗೆ ೧೦ ಗಂಟೆಗೆ ಧ್ವಜಾರೋಹಣ ಹಾಗೂ ಸಂಘಟನೆಯ ಕಾರ್ಯಚಟುವಟಿಕೆ ಸೇರಿದಂತೆ ಸಾಧಕರ ವಿವರಗಳನ್ನೊಳಗೊಂಡ ಮಾಹಿತಿ ಫಲಕ ‘ಪ್ರದರ್ಶಿನಿ’ಯನ್ನು ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ೧೨ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಹಾಗೂ ಅಭಿಮನ್ಯು ಅಕಾಡೆಮಿ ಸಿಇಓ ಅರ್ಜುನ್ ದೇವಯ್ಯ ಭಾಗವಹಿಸಲಿದ್ದಾರೆ.
ತಾ. ೧೮ ರಂದು ಗೌಡ ಸಮಾಜದಿಂದ ಗಾಂಧಿ ಮೈದಾನ ತನಕ ಶೋಭಾಯಾತ್ರೆ ಸಾಗಲಿದೆ. ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಎಬಿವಿಪಿ ಕಾರ್ಯದರ್ಶಿ ಶ್ರವಣ್ ಬಿ ರಾಜ್ ಮುಖ್ಯ ಭಾಷಣ ಮಾಡಲಿದ್ದಾರೆ. ತಾ. ೧೯ ರಂದು ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತ ರಾಘವೇಂದ್ರ ಜೋಷಿ ಪಾಲ್ಗೊಳ್ಳಲಿದ್ದು, ಸಾಮಾಜಿಕ ಕಾರ್ಯಕರ್ತ ಮನೋಜ್ ನಂದೀಶಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮ್ಮೇಳನದಲ್ಲಿ ಆರ್‌ಎಸ್‌ಎಸ್‌ಗೆ ೧೦೦ ವರ್ಷ ತುಂಬಿದ ಹಿನ್ನೆಲೆ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಹ ಪ್ರಾಂತ ಪ್ರಚಾರಕ ನಂದೀಶ್ ಹಾಗೂ ವಂದೇ ಮಾತರಂಗೆ ೧೫೦ ವರ್ಷ ಸಂದ ಹಿನ್ನೆಲೆ ಪ್ರಜ್ಞಾ ಪ್ರವಾಹ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ್ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ಪ್ರಸಕ್ತ ವರ್ತಮಾನ ಸ್ಥಿತಿಗತಿ, ಸರಕಾರಿ ಉದ್ಯೋಗ ಶೀಘ್ರ ಭರ್ತಿಗೆ ಆಗ್ರಹ, ಶಿಕ್ಷಣದಲ್ಲಿ ಎಐ ನ್ಯಾಯಯುತ ಸಂಯೋಜನೆ ಕುರಿತು ನಿರ್ಣಯ ಮಂಡಿಸಲಾಗುವುದು ಎಂದು ಹೇಳಿದರು. ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಮಾತನಾಡಿ, ರಾಷ್ಟಿçÃಯ ಹಿತಾಸಕ್ತಿ ಉಳಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಸಹಕಾರಿಯಾಗಿದೆ. ಜ್ಞಾನ, ರಾಷ್ಟçಭಕ್ತಿ, ಶಿಸ್ತು, ಸಂಘಟನೆ ಬೆಳೆಸುತ್ತದೆ. ಸಾಮಾಜಿಕ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಟಿ.ಪಿ. ಗಂಧರ್ವ, ಮಂಗಳೂರು ವಿಭಾಗದ ಕಲಾ ಮಂಚ್ ಪ್ರಮುಖ್ ಕೌಶಲ್ಯ ಹಾಜರಿದ್ದರು.