ಶ್ರೀಮAಗಲ, ಡಿ. ೧೫: ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಸಿಐಟಿ ಕಾಲೇಜಿನ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಪ್ರದೀಪ್ ಸಿ.ಆರ್. ಎಂಬವರು ತಮ್ಮ ಅಸ್ಸಾಂ ಮೂಲದ ಕಾರ್ಮಿಕರನ್ನು ವಿವಿಧ ಕಡೆಗೆ ಗುತ್ತಿಗೆ ಕೆಲಸಕ್ಕೆ ಕಳುಹಿಸುವ ಸಂದರ್ಭ ತಮ್ಮ ಮನೆಯ ತ್ಯಾಜ್ಯಗಳನ್ನು ಕೆಲಸ ನಿರ್ವಹಿಸುವ ಜಾಗಗಳಲ್ಲಿ ಸುರಿಯುತ್ತಿದ್ದು, ಇಂದು ಬೇಗೂರಿನಲ್ಲಿ ಸುರಿದದ್ದನ್ನು ಗ್ರಾಮಸ್ಥರು ಪತ್ತೆಹಚ್ಚಿ ಹುದಿಕೇರಿ ಗ್ರಾಮ ಪಂಚಾಯಿತಿಗೆ ಒಪ್ಪಿಸಿದ ಹಿನ್ನೆಲೆ ರೂ. ೧೦ ಸಾವಿರ ದಂಡವನ್ನು ಗುತ್ತಿಗೆದಾರ ಪ್ರದೀಪ್ ಅವರಿಗೆ ವಿಧಿಸಲಾಗಿದೆ.
ದಂಡ ವಿಧಿಸಿ, ಸುರಿದ ತ್ಯಾಜ್ಯವನ್ನು ವಾಪಸು ತೆಗೆಯಿಸಿ ಕಳುಹಿಸಲಾಯಿತು. ಈ ಸಂದರ್ಭ ಹುದಿಕೇರಿ ಪಂಚಾಯಿತಿ ಸದಸ್ಯರಾದ ಮಂಡೆಚAಡ ರಜಿ ಪೊನ್ನಪ್ಪ, ಎಸ್.ಡಿ.ಎ. ತಿಮ್ಮಯ್ಯ, ಕೇಚೆಟ್ಟೀರ ಅಪ್ಪಣ್ಣ, ಮತ್ರಂಡ ರಾಜೇಂದ್ರ, ಕೊಟ್ಟಂಗಡ ರಾಜ ಸುಬ್ಬಯ್ಯ, ಕಾಯಪಂಡ ಕಂಠಿ, ಕೇಚೆಟ್ಟೀರ ಅಕ್ಷಯ್, ಮತ್ರಂಡ ಮಿತ್ರ, ಮಲ್ಲಂಡ ವಿನಯ್, ಮಲ್ಲಂಡ ಧನೀಶ, ಮಂಡAಗಡ ಬೋಪಣ್ಣ ಹಾಜರಿದ್ದರು.