ಮಡಿಕೇರಿ, ಡಿ. ೧೫: ದೇವಾಟ್‌ಪರಂಬುವಿನಲ್ಲಿ ಈ ಹಿಂದೆ ಟಿಪ್ಪುವಿನಿಂದ ನಡೆದ ದೌರ್ಜನ್ಯದಲ್ಲಿ ಬಲಿಯಾದ ಕೊಡವ ಜನಾಂಗದ ಹಿರಿಯರ ಸಂಸ್ಮರಣೆಯಲ್ಲಿ ಹತ್ಯಾಕಾಂಡ ನಡೆದಿದೆ ಎನ್ನಲಾದ ಡಿಸೆಂಬರ್ ೧೨ ರಂದು ಸಂಜೆ ದೀಪ ಬೆಳಗಿ ಹಿರಿಯರನ್ನು ಸ್ಮರಿಸಲು ಕರೆ ನೀಡಲಾಗಿತ್ತು.

ಆ ದಿನದಂದು ಜನಾಂಗದ ಹಲವಾರು ಮಂದಿ ಸಂಜೆ ೭ ರ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ದೀಪ ಬೆಳಗಿ ಗೌರವ ಸಲ್ಲಿಸಿದ್ದಾರೆ. ಸಿ.ಎನ್.ಸಿ. ಸಂಘಟನೆಯೂ ಆ ದಿನದಂದು ದೇವಾಟ್‌ಪರಂಬುವಿನಲ್ಲಿ ಗೌರವ ನಮನ ಸಲ್ಲಿಸಿದೆ.

ಈ ಬಾರಿ ವಿಶೇಷವಾಗಿ ಬೆಂಗಳೂರು ಕೊಡವ ಸಮಾಜದಲ್ಲಿ ಈಗಿನ ಆಡಳಿತ ಮಂಡಳಿಯ ಪ್ರಮುಖರು, ಸದಸ್ಯರು ಸೇರಿ ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.