ಕುಶಾಲನಗರ, ಡಿ. ೧೫: ಗುಡ್ಡೆಹೊಸೂರು ಕೊಡವ ಕೂಟದಿಂದ ಒತ್ತೋರ್ಮೆ ಕೂಟ ನಡೆಯಿತು. ಕುಶಾಲನಗರ ಗಂಧದಕೋಟೆ ಇಗ್ಗುತ್ತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಕುಶಾಲನಗರದ ಉದ್ಯಮಿ ಚೇಂದAಡ ಜೆಮ್ಸಿ ಪೊನ್ನಪ್ಪ ಅವರು ಉದ್ಘಾಟಿಸಿ ಮಾತನಾಡಿ, ಸಮುದಾಯದ ಪ್ರತಿಯೊಬ್ಬರು ಪರಸ್ಪರ ಸಹಕಾರ ವಿಶ್ವಾಸದಿಂದ ಜೀವನ ನಡೆಸುವಂತಾಗಬೇಕು.

ಯುವ ಜನಾಂಗಕ್ಕೆ ಕೊಡವ ಸಂಸ್ಕಾರ ಆಚಾರ ವಿಚಾರ ಪರಂಪರೆ ಬಗ್ಗೆ ಹಿರಿಯರು ತಿಳಿ ಹೇಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ಕೂಟದ ಅಭಿವೃದ್ಧಿಗೆ ತಾನು ವೈಯಕ್ತಿಕವಾಗಿ ಹಾಗೂ ಸರಕಾರದ ಮೂಲಕ ಎಲ್ಲಾ ರೀತಿಯ ಸಹಕಾರ ಒದಗಿಸುವ ಭರವಸೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗುಡ್ಡೆಹೊಸೂರು ಕೊಡವ ಕೂಟದ ಅಧ್ಯಕ್ಷ ಮಾಳೆಟ್ಟಿರ ಪೂಣಚ್ಚ ಅವರು ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಕೊಡವ ಮನೆಗಳು ವೃದ್ಧಾಶ್ರಮಗಳಂತೆ ಭಾಸವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಮಕ್ಕಳು ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಪರಭಾಷಾ ವ್ಯಾಮೋಹಗಳನ್ನು ಬಿಟ್ಟು, ಕೊಡವ ಭಾಷೆಗೆ ಆದ್ಯತೆ ನೀಡಬೇಕು. ಆಸ್ತಿ-ಪಾಸ್ತಿ ಮಾರಾಟ ಮಾಡದಂತೆ ಕಿವಿಮಾತು ಹೇಳಿದರು. ಕೊಡವ ಕೂಟದ ಮೂಲಕ ಪರಸ್ಪರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶ ಹೊಂದಿದ್ದು ಈ ಸಂಬAಧ ಎಲ್ಲರ ಸಹಕಾರ ಕೋರಿದರು.

ಇದೇ ಸಂದರ್ಭ ನಿರ್ದೇಶಕ ಉಡುವೆರ ಹ್ಯಾರಿ ಚಿಟ್ಟಿಯಪ್ಪ ಅವರು ಕೂಟದಲ್ಲಿ ವಿದ್ಯಾನಿಧಿ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ಕಲ್ಪಿಸಲು ಸಹಕಾರ ನೀಡುವ ಬಗ್ಗೆ ತಿಳಿಸಿ ಕೂಟದ ಹಲವು ಸದಸ್ಯರು, ಪ್ರಮುಖರು ದೇಣಿಗೆ ನೀಡಿದರು.

ಇದೇ ಸಂದರ್ಭ ತುರ್ತು ಆರೋಗ್ಯ ನಿಧಿಗೆ ಮತ್ತು ಕೂಟದ ಅಭಿವೃದ್ಧಿಗೆ ಕೆಲವು ಸದಸ್ಯರು ದೇಣಿಗೆ ನೀಡಿದರು. ಕಾರ್ಯದರ್ಶಿ ಪಾಲಚಂಡ ಸುರೇಶ್ ಮಾದಪ್ಪ ವರದಿ ಮಂಡಿಸಿದರು. ಸದಸ್ಯರಿಗೆ ಆಟೋಟ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು.

ಕೂಟದ ಖಜಾಂಚಿ ಮಂಡೆಪAಡ ಚಿಮ್ಮ ಉತ್ತಪ್ಪ, ಮತ್ತು ನಿರ್ದೇಶಕರುಗಳು ಇದ್ದರು. ಕಸ್ತೂರಿ ಪೂಣಚ್ಚ ಪ್ರಾರ್ಥನೆ, ಸುನಿತಾ ಪೂಣಚ್ಚ ಸ್ವಾಗತಿಸಿ, ಆಶಿತ್ ಚಿಟ್ಟಿಯಪ್ಪ ಕಾರ್ಯಕ್ರಮ ನಿರೂಪಿಸಿದರು.