ಶ್ರೀಮಂಗಲ, ಡಿ. ೧೫: ಶ್ರೀಮಂಗಲದ ಕುರ್ಚಿ ಗ್ರಾಮದವರಾದ, ಪ್ರಸ್ತುತ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ರಾಜ್ಯಶಾಸ್ತç ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕಾವ್ಯಾ ಸಿ.ಟಿ. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ. ಮಿಡತಲಾ ರಾಣಿ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್..ಡಿ ಪದವಿಗಳಿಸಿದ್ದಾರೆ. ಅವರು ೧೩ ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದು ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತçದಲ್ಲಿ ಎಂ.ಎ. ಮತ್ತು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿAದ ಬಿಇಡಿ (ಆರ್‌ಐಇ) ವ್ಯಾಸಂಗ ಮಾಡಿದ್ದು, ಇದೀಗ "ಕರ್ನಾಟಕದಲ್ಲಿ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರ ಸಬಲೀಕರಣ, ಕೊಡಗು ಜಿಲ್ಲೆಗೆ ವಿಶೇಷ ಉಲ್ಲೇಖದೊಂದಿಗೆ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಡಾ. ಕಾವ್ಯ ಸಿ.ಟಿ. ಭಾರತೀಯ ರಾಜ್ಯಶಾಸ್ತç ಸಂಘದ (ಐಪಿಎಸ್‌ಸಿ) ಖಾಯಂ ಸದಸ್ಯರೂ ಆಗಿದ್ದಾರೆ ಮತ್ತು ಮೇಘಾಲಯ, ಮಹಾರಾಷ್ಟç ಮತ್ತು ರಾಜಸ್ಥಾನದಲ್ಲಿ ನಡೆದ ಅಂತರರಾಷ್ಟಿçÃÃಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಇದು ಅಂತರರಾಷ್ಟಿçÃಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿರುತ್ತದೆ.

ಇವರು ಶ್ರೀಮಂಗಲ ಕುರ್ಚಿ ಗ್ರಾಮದ ಕೋಣೇರಿರ ಬೋಪಣ್ಣ ಅವರ ಪತ್ನಿ. ಟಿ. ಶೆಟ್ಟಿಗೇರಿ ಗ್ರಾಮದ ಚಟ್ಟಂಡ ತಿಮ್ಮಯ್ಯ (ರಘು) ಮತ್ತು ಪಾರ್ವತಿ ದಂಪತಿಯ ಪುತ್ರಿ.