ಗೋಣಿಕೊಪ್ಪಲು, ಡಿ. ೧೫ : ಗೋಣಿಕೊಪ್ಪಲುವಿನ ಪ್ರತಿಷ್ಠಿತ ಕ್ಯಾಲ್ಸ್ ವಿದ್ಯಾಸಂಸ್ಥೆಯ ನೂತನ ಹಾಕಿ ಆಸ್ಟೊçÃಟರ್ಪ್ ಮೈದಾನದಲ್ಲಿ ಅಂತರ ಶಾಲಾ ಮಾಸ್ಟರ್ಸ್ ಹಾಕಿ ಕಪ್ - ೨೦೨೫ ವಿದ್ಯುಕ್ತ ಚಾಲನೆ ದೊರೆತಿದೆ. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ ಹಾಕಿ ಸ್ಟಿಕ್‌ನಿಂದ ಚೆಂಡನ್ನು ತಳ್ಳುವ ಮೂಲಕ ೩ ದಿನಗಳ ಕಾಲ ನಡೆಯುವ ಅಂತರ ಶಾಲಾ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಸಿ.ಎಸ್. ಅರುಣ್ ಮಾಚಯ್ಯ, ಗೋಣಿಕೊಪ್ಪಲುವಿನ ಪ್ರತಿಷ್ಠಿತ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಜಿಲ್ಲೆಗೆ ವರದಾನವಾಗಿದೆ. ವಿದ್ಯಾಸಂಸ್ಥೆಯಲ್ಲಿ ಹಾಕಿ ಅಥ್ಲೆಟಿಕ್, ಈಜು ಗಾರಿಕೆ, ಶೂಟಿಂಗ್ ಸೇರಿದಂತೆ ಎಲ್ಲಾ ವಿಧದ ಕ್ರೀಡೆಗಳು ಒಂದೇ ಸಂಕೀರ್ಣದಲ್ಲಿ ದೊರೆಯುತ್ತಿದೆ. ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸಲು ವಿದ್ಯಾ ಸಂಸ್ಥೆಯು ಕಳೆದ ೨೦ ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದೆ. ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರದರ್ಶನ ಮಾಡಿದ್ದಾರೆ. ಜಿಲ್ಲೆಯ ನಾಗರಿಕರ ಹಾಗೂ ಸರ್ಕಾರದ ಪ್ರೋತ್ಸಾಹ ದೊರೆಯುವಂತಾಗಲಿ, ರಾಷ್ಟçಮಟ್ಟಕ್ಕೆ ಮತ್ತಷ್ಟು ಕ್ರೀಡಾ ಪ್ರತಿಭೆಗಳು ಪ್ರತಿನಿಧಿಸಲಿ ಎಂದು ಆಶಿಸಿದರು.

ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಕ್ಯಾಲ್ಸ್ ಸಂಸ್ಥೆಯ ಚರ‍್ಮನ್ ದತ್ತ ಕರುಂಬಯ್ಯ ಮಾತನಾಡಿ. ಹಾಕಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಆಧುನಿಕ ಶೈಲಿಯಲ್ಲಿ ಅತ್ಯಂತ ಗುಣಮಟ್ಟ ಹೊಂದಿರುವ ಹಸಿರು ಬಣ್ಣದ ಆಸ್ಟೊçÃಟರ್ಫ್ ಮೈದಾನದಲ್ಲಿ ಅಂತರಶಾಲಾ ಹಾಕಿ ಪಂದ್ಯಾವಳಿಯನ್ನು ಮನೆಯಪಂಡ ಕರುಂಬಯ್ಯನವರ ಜ್ಞಾಪಕಾರ್ಥವಾಗಿ ಆಯೋಜಿಸಲಾಗಿದೆ. ಅಂತರಶಾಲಾ ಪಂದ್ಯಾವಳಿಯನ್ನು ಆರಂಭಿಸಿರುವುದರಿAದ ಶಾಲೆಯ ಆರಂಭಿಕ ಹಂತದಲ್ಲಿಯೇ ಟರ್ಫ್ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಆಟವಾಡುವ ಅವಕಾಶವು ಲಭಿಸುತ್ತಿದೆ. ೫ನೇ ಆವೃತ್ತಿಯಾಗಿ ಅಂತರ ಶಾಲಾ ಮಾಸ್ಟರ್ಸ್ ಕಪ್ ಹಾಕಿ ಟೂರ್ನಮೆಂಟ್ ಆಯೋಜನೆ ಮಾಡಿದೆ. ಕಿರಿಯ ಆಟಗಾರರನ್ನು ಭಾರತ ತಂಡಕ್ಕೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಯುವ ಕ್ರೀಡಾಪಟುಗಳಿಗೆ ಇದು ಸ್ಪೂರ್ತಿಯಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಒಲಂಪಿಯನ್ ಸಿ.ಎಸ್.ಪೂಣಚ್ಚ ಮಾತನಾಡಿ, ಕ್ರೀಡಾಪಟುಗಳು ಕಠಿಣ ಪರಿಶ್ರಮ ೫ನೇ ಪುಟಕ್ಕೆ

(ಮೊದಲ ಪುಟದಿಂದ) ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟಿçÃಯ ಗುಣಮಟ್ಟದ ಟರ್ಫ್ ಮೈದಾನದಲ್ಲಿ ಯುವ ಪ್ರತಿಭೆಗಳು ತಮ್ಮ ಪ್ರದರ್ಶನವನ್ನು ತೋರುವ ಮೂಲಕ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕ್ರೀಡಾಪಟುಗಳಿಗೆ ಕರೆ ನೀಡಿದರು.

ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಸ್ಥಾಪಕ, ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಅಶ್ವಿನಿ ನಾಚಪ್ಪ ಮಾತನಾಡಿ, ಹಾಕಿಯ ೧೦೦ನೇ ಸಂಭ್ರಮವನ್ನು ಆಚರಿಸಲಾಗುತ್ತದೆ. ಅಂತಿಮ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಇದೇ ಮೊದಲ ಬಾರಿಗೆ ಹಾಕಿ ಇಂಡಿಯಾ ಅಧ್ಯಕ್ಷ ಪದ್ಮಶ್ರೀ ಅವಾರ್ಡಿ ದಿಲೀಪ್ ಟರ್ಕಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ. ಇದರಿಂದ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.

ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡಿರ ಕಾರ್ಯಪ್ಪ, ಶಿಕ್ಷಕಿಯರಾದ ಪವಿತ, ಸ್ವರೂಪ್ ಕಾರ್ಯ ನಿರ್ವಹಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಗೌರಮ್ಮ ಸ್ವಾಗತಿಸಿ. ವಂದಿಸಿದರು. ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಹಾಕಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿ ವೀಕ್ಷಿಸಿದರು.

೧೮ ವರ್ಷದೊಳಗಿನ ಈ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ಕ್ಯಾಲ್ಸ್, ಅಪ್ಪಚ್ಚಕವಿ ವಿದ್ಯಾಲಯ, ಪೊನ್ನಂಪೇಟೆ, ಸೆಂಟ್ ಆಂಥೋನಿ, ಪೊನ್ನಂಪೇಟೆ, ಗೋಣಿಕೊಪ್ಪ ಲಯನ್ಸ್ ಸ್ಕೂಲ್, ಅರಮೇರಿ ಎಸ್‌ಎಂಎಸ್ ಅಕಾಡೆಮಿ, ಮಡಿಕೇರಿ ಕೊಡಗು ವಿದ್ಯಾಲಯ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಸ್ಕೂಲ್ ಹಾಗೂ ಬೆಂಗಳೂರು ಚಿನ್ಮಯ ವಿದ್ಯಾಲಯ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಹಾಕಿ ಕೂರ್ಗ್ನ ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಕ್ಯಾಲ್ಸ್ನ ಹಾಕಿ ತರಬೇತುದಾರ ಚೇತನ್, ಮನೆಯಪಂಡ ರಾಜ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.