ತಾ. ೨೬ ರಿಂದ ಕೊಡವ ಕೌಟುಂಬಿಕ ಚಾಂಪಿಯನ್ಸ್ ಟ್ರೋಫಿಮಡಿಕೇರಿ, ಡಿ. ೧೫: ಕೊಡವ ಹಾಕಿ ಅಕಾಡೆಮಿ ವತಿಯಿಂದ ಹಾಕಿ ಕೂರ್ಗ್ ಸಂಸ್ಥೆ, ಎಂ. ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಹಾಗೂ ಮೂರ್ನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ತಾ. ೨೬ ರಿಂದ ೩೦ ರ ತನಕ ಮೂರ್ನಾಡಿನಲ್ಲಿ ಕೊಡವ ಕೌಟುಂಬಿಕ ಲೆವಿಸ್ಟಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೯೭ರಲ್ಲಿ ಪಾಂಡAಡ ಕುಟ್ಟಪ್ಪ (ಕುಟ್ಟಣಿ) ಹಾಗೂ ಅವರ ಸಹೋದರ ಕಾಶಿ ಅವರಿಂದ ಕರಡ ಗ್ರಾಮದಲ್ಲಿ ಆರಂಭವಾದ ಕೊಡವ ಕುಟುಂಬಗಳ ನಡುವಿನ ಹಾಕಿ ನಮ್ಮೆ ಇದೀಗ ೨೫ ವರ್ಷ ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಹಿನ್ನೆಲೆ ಇದುವರೆಗೂ ಹಾಕಿ ನಮ್ಮೆಯಲ್ಲಿ ವಿನ್ರ್ಸ್ ಹಾಗೂ ರನ್ರ್ಸ್ ಆದ ಒಟ್ಟು ೧೩ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ. ೪ ಪೂಲ್ಗಳಾಗಿ ತಂಡಗಳನ್ನು ವಿಂಗಡಿಸಿದ್ದು, ಸೆಮಿಫೈನಲ್ ತನಕ ಲೀಗ್ ಮಾದರಿಯಲ್ಲಿ, ನಂತರ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ ಎಂದು ವಿವರಿಸಿದರು.
ಅಕಾಡೆಮಿ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ. ೩ ದಿನಗಳ ಕಾಲ ಮೂರ್ನಾಡಿನ ದಿ. ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಲೀಗ್ ಹಂತದಲ್ಲಿ ೨೫ ನಿಮಿಷಗಳ ೨ ಸುತ್ತಿನಲ್ಲಿ ಪಂದ್ಯಾವಳಿ ನಡೆಯಲಿದೆ. ಸೆಮಿಫೈನಲ್ ನಂತರದ ಪಂದ್ಯಗಳು ೧೫ ನಿಮಿಷಗಳ ೪ ಸುತ್ತಿನ ಪಂದ್ಯ ನಡೆಯಲಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೨ ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೧ ಲಕ್ಷ, ಸೆಮಿಫೈನಲ್ಗೆ ಅರ್ಹತೆ ಪಡೆದ ತಂಡಗಳಿಗೆ ರೂ. ೫೦ ಸಾವಿರ ಹಾಗೂ ಭಾಗವಹಿಸಿದ ಎಲ್ಲಾ ತಂಡಕ್ಕೆ ರೂ. ೨೫ ಸಾವಿರ ೫ನೇ ಪುಟಕ್ಕೆ
(ಮೊದಲ ಪುಟದಿಂದ) ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ, ಕೊಡವ ಕುಟುಂಬಗಳನ್ನು ಒಗ್ಗೂಡಿಸುವ ಸಲುವಾಗಿ ಕುಟ್ಟಪ್ಪ ಅವರು ಆರಂಭಿಸಿದ ಹಾಕಿ ಹಬ್ಬ ಇದೀಗ ವಿಶ್ವ ದಾಖಲೆ ಬರೆದಿದೆ. ೬೦ ಕುಟುಂಬಗಳಿAದ ಆರಂಭವಾದ ಹಾಕಿ ಉತ್ಸವ ಇದೀಗ ದಾಖಲೆ ಸಂಖ್ಯೆಯ ಕುಟುಂಬಗಳು ಭಾಗವಹಿಸುವ ಹಂತಕ್ಕೆ ತಲುಪಿದೆ. ಕುಟ್ಟಪ್ಪ ಅವರು ಹಾಕಿಯ ಮೂಲಕ ಜನಾಂಗವನ್ನು ಒಟ್ಟುಗೂಡಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಕಾಡೆಮಿ ಉಪಾಧ್ಯಕ್ಷ ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ನಿರ್ದೇಶಕ ಮುಕ್ಕಾಟಿರ ಸುಬ್ಬಯ್ಯ ಹಾಜರಿದ್ದರು.