ಕರಿಕೆ, ಡಿ. ೧೫ : ಮಡಿಕೇರಿ ಪ್ರಾದೇಶಿಕ ವಿಭಾಗದ ಭಾಗಮಂಡಲ ವಲಯ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಗೆ ತೆರಳಿದ ಆರೋಪಿಗಳನ್ನು ಬಂದಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕೊಡಗು ಅರಣ್ಯ ವೃತ್ತದ ಸಂರಕ್ಷಣಾ ಅಧಿಕಾರಿ ಸೋನಾಲಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಅವರ ಸೂಚನೆಯ ಮೇರೆಗೆ ಮಡಿಕೇರಿ ಉಪ ವಿಭಾಗದ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸೆಂಥಿಲ್ ಕುಮಾರ್ ಮಾರ್ಗದರ್ಶನದಲ್ಲಿ ಭಾಗಮಂಡಲ ವಲಯ ಅರಣ್ಯ ಅಧಿಕಾರಿ ಶಂಕರ್ ಬಿ.ಎಂ. ಅವರ ನಿರ್ದೇಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಅಪರೂಪದ ಪ್ರಾಣಿ ಮೂಷಿಕ ಜಿಂಕೆ (ಬರಿಕ) ಬೇಟೆಯಾಡಿದ ಮಣಿವೇಲು (ಜಾನ್) ಬೇಂಗೂರು ಗ್ರಾಮ, ಪ್ರಥ್ವಿನ್ ಬಿ.ಡಿ. ಸಿಂಗತ್ತೂರು ಗ್ರಾಮ, ಗಣೇಶ್ ಸಿ.ಎಂ. ಕೋಪಟ್ಟಿ ಗ್ರಾಮದವರನ್ನು ಬಂದಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂದಿತರಿAದ ಒಂಟಿ ನಳಿಕೆ ಕೋವಿ, ಹತ್ತು ತೋಟಗಳು, ಗುಂಡೆಟಿನಿAದ ಸತ್ತ ಒಂದು ಮುಷಿಕಾ ಜಿಂಕೆ, ಕತ್ತಿ, ಮೊಬೈಲ್ ಫೋನ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ್ ವೊಡೆಯರ್, ಸೂರ್ಯ ಎಂ.ಕೆ., ಅರಣ್ಯ ರಕ್ಷಕರಾದ ಕೆಂಪಣ್ಣ ಮ್ಯಾಳಗೊಳ, ಸಚಿನ್ ತಳವಾರ, ರವಿ ಓ.ಡಿ. ಹಾಗೂ ಸಿಬ್ಬಂದಿಗಳಾದ ದೇವಿ ಪ್ರಸಾದ್, ಜೀವಿತ್ ಕುಮಾರ್ ಭಾಗಿಯಾಗಿದ್ದರು.
-ಸುಧೀರ್ ಹೊದ್ದೆಟ್ಟಿ