ಗೋಣಿಕೊಪ್ಪಲು.ಡಿ.೧೬: ಕ್ರೀಡೆಯ ತವರೂರು ಕೊಡಗು ಜಿಲ್ಲೆ ಎಂಬ ಕೀರ್ತಿ ಹೊಂದಿದ್ದರೂ ಕೊಡಗಿನಲ್ಲಿ ಕ್ರೀಡೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ. ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯಗಳು ದೊರಕಿದ್ದಲ್ಲಿ ಸಾಕಷ್ಟು ಸಾಧನೆಗಳನ್ನು ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಮಾಡಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಪ್ರತಿಷ್ಠಿತ ‘ಕೈಗ್’ ಸ್ಪೋರ್ಟ್ಸ್ ಫೌಂಡೇಷನ್, ಕೂರ್ಗ್ ಚಾಲೆಂಜರ್ ಸಹಯೋಗದಲ್ಲಿ ಪ್ರಥಮ ವರ್ಷದ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಕ್ರೀಡಾ ಸಂಕೀರ್ಣ ಸ್ಥಾಪನೆಗೆ ಪೊನ್ನಂಪೇಟೆ ತಾಲೂಕಿನ ವಿ.ಬಾಡಗದಲ್ಲಿ ೧೧ ಎಕರೆ ಭೂಮಿಯನ್ನು ಕಾಯ್ದಿರಿಸುವ ಮೂಲಕ ಶಾಸಕ ಪೊನ್ನಣ್ಣ ಸುಮಾರು ನೂರು ಕೋಟಿ ವೆಚ್ಚದ ಕ್ರೀಡಾ ಸಂಕೀರ್ಣವನ್ನು ಆರಂಭಿಸಲು ಬಹುದೊಡ್ಡ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಕಾಮಗಾರಿ ಆರಂಭಗೊAಡಿದ್ದು, ಆರಂಭಿಕ ಹಂತದಲ್ಲಿ ರೂ. ೩೦ ಕೋಟಿ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಕೊಡಗಿನ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯ ದೊರೆಯಲಿದೆ. ಹಾಕಿಯನ್ನು ಪ್ರೋತ್ಸಾಹಿಸಲು ಕೈಗ್ ಸಂಸ್ಥೆ ಮುಂದೆ ಬಂದಿರುವುದು ಶ್ಲಾಘನೀಯ ಎಂದರು.

ಈ ಪಂದ್ಯಾವಳಿಯಲ್ಲಿ ಬಲಿಷ್ಠ ೧೬ ತಂಡಗಳು ಹಣಾಹಣಿ ನಡೆಸುತ್ತಿದ್ದು ೫ ದಿನಗಳ ಹಾಕಿ ಪಂದ್ಯಾವಳಿಯು ಟರ್ಫ್ ಮೈದಾನದಲ್ಲಿ ಆಯೋಜನೆಗೊಂಡಿದೆ. ಪ್ರತಿಷ್ಠಿತ ‘ಕೈಗ್’ ಗ್ರೂಪ್ ಅಧೀನದ ಕೈಗ್ ಸ್ಪೋರ್ಟ್ಸ್ ಫೌಂಡೇಷನ್, ಕೂರ್ಗ್ ಚಾಲೆಂಜರ್ ಸಹಯೋಗ ನೀಡುತ್ತಿದೆ ಎಂದರು.ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಅಂತರರಾಷ್ಟಿçÃಯ ಅಥ್ಲೀಟ್ ಅರ್ಜುನ್ ದೇವಯ್ಯ ಮಾತನಾಡಿ, ಕೊಡಗಿನಲ್ಲಿ ಯಾವುದೆ ಕ್ರೀಡೆ ಇರಲಿ ಯುವ ತರುಣರಿಗೆ ಪೂರಕವಾಗಿ ಪಂದ್ಯಾವಳಿಗಳು ನಡೆಯಬೇಕು. ಇದರಿಂದ ಶಾಲಾ ಹಂತದಲ್ಲಿಯೇ ಮಕ್ಕಳನ್ನು ಕ್ರೀಡೆಗೆ ಹೆಚ್ಚಿನ ಆಸಕ್ತಿ ತೋರಲು ಸಾಧ್ಯವಾಗುತ್ತದೆ. ಕೈಗ್ ಸಂಸ್ಥೆ ಮೊದಲ ಬಾರಿಗೆ ರಾಷ್ಟಿçÃಯ ಮಟ್ಟದ ರೀತಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ. ದುಶ್ಚಟಗಳಿಂದ ಕ್ರೀಡಾಪಟುಗಳು ದೂರವಿರಬೇಕು. ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಗ್ ಗ್ರೂಪ್ ಮುಖ್ಯಸ್ಥ ಕುಟ್ಟಂಡ ಸುದಿನ್ ಮಂದಣ್ಣ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರು ಹಾಕಿ ಅಸೋಸಿಯೇಷನ್ ಉಪಾಧ್ಯಕ್ಷ ತೂದಿಮಾಡ ಲೋಕೇಶ್ ಕುಟ್ಟಪ್ಪ, ಕ್ರೀಡಾ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ಕೂರ್ಗ್ ಚಾಲೆಂರ‍್ಸ್ನ ಸ್ಥಾಪಕ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಕೂರ್ಗ್ ಚಾಲೆಂರ‍್ಸ್ನ ಪ್ರಮುಖರಾದ ಗುಮ್ಮಟ್ಟಿರ ಮುತ್ತಣ್ಣ, ಪೊನ್ನಿಮಾಡ ಲೋಕೇಶ್, ಪಳಂಗAಡ ಕರಣ್, ಬೇರೆರ ಪ್ರಣಯ್ ಮಾಚಯ್ಯ, ಅಚ್ಚಾಂಡಿರ ಪ್ರೀತಮ್ ಕುಶಾಲಪ್ಪ, ಕಾಳಪಂಡ ಕುಸ್ಮಿತ್ ಸೋಮಣ್ಣ, ಕೈಗ್ ಸಂಸ್ಥೆಯ ಪ್ರಮುಖರಾದ ಕುಂಡ್ಯೋಳAಡ ಶಶಿ ಮೇದಪ್ಪ, ತಾತಂಡ ಸೋಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಕಿ ವೀಕ್ಷಣೆ ವಿವರಣೆಯನ್ನು ಅಜ್ಜೆಟ್ಟಿರ ವಿಕ್ರಂ ಉತ್ತಪ್ಪ ನೆರವೇರಿಸಿದರು. ಕೈಗ್ ಸಂಸ್ಥೆಯ ತಾತಂಡ ಕಲ್ಪನಾ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಕೊಡಗು ಮೂಲದ ಸಾಮಾಜಿಕ ಜಾಲತಾಣದ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಪ್ರತಿ ತಂಡದಲ್ಲಿ ರಾಷ್ಟಿçÃಯ ಮಟ್ಟದ ೫ ಅತಿಥಿ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.

ಮೊದಲ ದಿನದ ಹಾಕಿ ಪಂದ್ಯಾವಳಿಯು ಬೆಳಿಗ್ಗೆ ೯ ಗಂಟೆಗೆ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೇರಿ-ಯುಎಸ್‌ಸಿ ಬೇರಳಿನಾಡು ನಡುವೆ ನಡೆಯಿತು. ಉಳಿದಂತೆ ೧೧ ಗಂಟೆಗೆ ೨ನೇ ಪಂದ್ಯವು ಕೋಣನಕಟ್ಟೆ ಇಲೆವೆನ್ ಹಾಗೂ ಚಾಮರ್ಸ್ ಮಡಿಕೇರಿ ನಡುವೆ ನಡೆಯಿತು. ಮಧ್ಯಾಹ್ನ ೧ ಗಂಟೆಗೆ ಮಲ್ಮ ಕ್ಲಬ್ ಹಾಗೂ ಕಡಿಯತ್‌ನಾಡ್ ವಾರಿಯರ್ಸ್ ನಡುವೆ ನಡೆಯಿತು. ೩ ಗಂಟೆಗೆ ಡಾಲ್ಫಿನ್ ಸೋಮವಾರಪೇಟೆ ಹಾಗೂ ಸ್ಪೋರ್ಟ್ಸ್ ಹಾಸ್ಟೆಲ್ ಕೂಡಿಗೆ ನಡುವೆ ನಡೆಯಿತು. ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಹಾಕಿ ವೀಕ್ಷಿಸಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದರು.

-ಹೆಚ್.ಕೆ.ಜಗದೀಶ್