ಚೆಟ್ಟಳ್ಳಿ, ಡಿ. ೧೬: ಸುಮಾರು ೫ ವರ್ಷ ವಯಸ್ಸಿನ ಗಂಡು ಹುಲಿಯೊಂದು ಉರುಳಿಗೆ ಸಿಲುಕಿ ಮರಣ ಹೊಂದಿದ ಘಟನೆ ಚೆಟ್ಟಳ್ಳಿಯಲ್ಲಿ ಇಂದು ನಡೆದಿದೆ.

ಕುಶಾಲನಗರ ತಾಲೂಕು ಚೇರಳ-ಶ್ರೀಮಂಗಲ ಗ್ರಾಮದ ಅಪ್ಪಯ್ಯನವರ ಕಾಫಿ ತೋಟದೊಳಗಿನ ಬೇಲಿ ಬದಿಯಲ್ಲಿ ಮಧ್ಯ ವಯಸ್ಸಿನ ಗಂಡು ಹುಲಿಯೊಂದು ಉರುಳಿಗೆ ಸಿಲುಕಿ ಕುತ್ತಿಗೆ ಭಾಗಕ್ಕೆ ತೀವ್ರ ತರಹದ ಪೆಟ್ಟಾಗಿ ಮೃತಪಟ್ಟಿದೆ. ಮೀನುಕೊಲ್ಲಿ ಅರಣ್ಯ ವಲಯದ ಉಪವಲಯಾಧಿಕಾರಿ ಸಚಿನ್ ಲಿಂಬಾಳ್‌ಕರ್, ಗಸ್ತುವನ ಪಾಲಕರಾದ ನಾಗರಾಜು ಹಾಗೂ ಅರಣ್ಯ ಸಿಬ್ಬಂದಿವರ್ಗ ಆರ್‌ಆರ್‌ಟಿ ತಂಡದವರು ಪರಿಶೀಲಿಸಿದರು. ಮಾಹಿತಿ ಮೇರೆಗೆ ಡಿ.ಸಿ.ಎಫ್. ಅಭಿಷೇಕ್, ಎ.ಸಿ.ಎಫ್. ಎ.ಎ. ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್, ವೈದ್ಯಾಧಿಕಾರಿಗಳಾದ ಡಾ. ಮಜೀದ್, ಡಾ. ಸಂಜೀವ್ ಆರ್. ಶಿಂಧೆ, ಚೆಟ್ಟಳ್ಳಿ ಪೋಲೀಸ್ ಠಾಣಾ ಎಎಸ್‌ಐ ದಿನೇಶ್ ಸ್ಥಳಕ್ಕೆ ಭೇಟಿಯಿತ್ತರು.

ಈ ಕುರಿತಾಗಿ ಅಭಿಪ್ರಾಯ ಬಯಸಿದಾಗ ಮಡಿಕೇರಿಯ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು “ಶಕ್ತಿ”ಗೆ ನೀಡಿದ ಮಾಹಿತಿ ಹೀಗಿದೆ ಗ್ರಾಮದ ಸರಹದ್ದಿನಿಂದ ಸುಮಾರು ೫ ಕಿ.ಮೀ. ದೂರದ ಅರಣ್ಯ ಪ್ರದೇಶದಿಂದ ಈ ಹುಲಿ ಬಂದಿರುವ ಸಾಧ್ಯತೆಯಿದೆ. ಮೊಲ ಇತ್ಯಾದಿ ಪ್ರಾಣಿ ಹಿಡಿಯಲು ಯಾರೋ ಉರುಳು ಇಟ್ಟಿದ್ದು ಅದರಲ್ಲಿ ಸಿಲುಕಿ ಒದ್ದಾಡಿದೆ. ನಿನ್ನೆಯೇ ಈ ಘಟನೆ ನಡೆದಿರಬಹುದಾಗಿದ್ದು ಇಂದು ಒದ್ದಾಡುತ್ತ ಹುಲಿ ತೋಟದ ಆವರಣಕ್ಕೆ ಬಂದಿರಬಹುದಾಗಿದೆ. ನರಳಿ ಸತ್ತಿರಬಹುದಾಗಿದೆ. ಈ ಕುರಿತು ರಾಷ್ಟಿçÃಯ ಹುಲಿ ಸಂರಕ್ಷÀಣಾ ಪ್ರಾಧಿಕಾರದ ಪ್ರತಿನಿಧಿಗಳಿಗೂ ಮಾಹಿತಿ ನೀಡಿದ್ದು ಶ್ವಾನ ದಳವನ್ನೂ ಕರೆಸಿ ಸ್ಥಳ ಪರಿ ಶೀಲನೆ ನಡೆಸ ಲಾಗಿದೆ. ಅವರ ಸಮ್ಮುಖದಲ್ಲಿಯೇ ಹುಲಿಯ ಶವ ಸಂಸ್ಕಾರ ನಡೆದಿದೆ. ಸಂಜೆ ಹುಲಿಯ ಕಳೇಬರವನ್ನು ಆನೆಕಾಡು ಮೀಸಲು ಅರಣ್ಯಕ್ಕೆ ಕೊಂಡ್ಯೊಯ್ದು ಅಂತ್ಯಕ್ರಿಯೆ ನಡೆಸಲಾಯಿತು ಎಂದು ಅರಣ್ಯಾ ಧಿಕಾರಿ ಮಾಹಿತಿಯಿತ್ತಿದ್ದಾರೆ.

ಉರುಳಿನ ಬಗ್ಗೆ ಜನ ಜಾಗೃತಿ ಮೂಡಿಸಲು ಸೂಚನೆ

ಕಾಡಂಚಿನ ಜಮೀನಿನಲ್ಲಿ ಅಳವಡಿಸಿರುವ ಉರುಳುಗಳನ್ನು ತೆರವು ಮಾಡಿಸಲು ಮತ್ತು ವನ್ಯಜೀವಿಗಳು ಸಾವಿಗೀಡಾದರೆ ಎದುರಾಗುವ ಕಾನೂನು ತೊಡಕಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಚೆಟ್ಟಳ್ಳಿ ಬಳಿಯ ಶ್ರೀಮಂಗಲದಲ್ಲಿAದು ಉರುಳಿಗೆ ಸಿಲುಕಿ ಹುಲಿ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ತುರ್ತು ಸಭೆ ನಡೆಸಿದ ಅವರು, ಎಲ್ಲಾ ವಲಯಗಳಲ್ಲಿ ತಂಡಗಳನ್ನು ರಚಿಸಿ ಕಾಡಂಚಿನ ಗ್ರಾಮಗಳಲ್ಲಿ ಉರುಳಿನ ಶೋಧವನ್ನು ನಿಯಮಿತವಾಗಿ ನಡೆಸಬೇಕು. ಹುಲಿ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಕರುಣ್ ಕಾಳಯ್ಯ