ಗೋಣಿಕೊಪ್ಪಲು, ಡಿ. ೧೬: ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯ ನೂತನ ಹಾಕಿ ಆಸ್ಟೊçÃಟರ್ಫ್ ಮೈದಾನದಲ್ಲಿ ನಡೆದ ಅಂತರ ಶಾಲಾ ಮಾಸ್ಟರ್ಸ್ ಹಾಕಿ ಕಪ್ ೨೦೨೫ರಲ್ಲಿ ಫೈನಲ್ ಪಂದ್ಯಕ್ಕೆ ಕರುಂಬಯ್ಯಸ್ ಅಕಾಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋರ್ಟ್ಸ್ ಹಾಗೂ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ ಪ್ರವೇಶ ಪಡೆದವು. ತಾ. ೧೭ರಂದು (ಇಂದು) ಮಧ್ಯಾಹ್ನ ೨ ಗಂಟೆಗೆ ಫೈನಲ್ ಪಂದ್ಯಾಟವು ಜರುಗಲಿದೆ.

ಕ್ಯಾಲ್ಸ್ ಆಸ್ಟೊçÃಟರ್ಫ್ ಮೈದಾನದಲ್ಲಿ ೩ ದಿನಗಳ ಕಾಲ ಅಂತರ ಶಾಲಾ ಹಾಕಿ ಪಂದ್ಯಾವಳಿಯು ಆಯೋಜನೆ ಗೊಂಡಿತ್ತು. ೧೮ ವರ್ಷದೊಳಗಿನ ಈ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ಕ್ಯಾಲ್ಸ್, ಅಪ್ಪಚ್ಚಕವಿ ವಿದ್ಯಾಲಯ, ಪೊನ್ನಂಪೇಟೆ ಸೆಂಟ್ ಆಂಥೋನಿ, ಗೋಣಿ ಕೊಪ್ಪ ಲಯನ್ಸ್ ಸ್ಕೂಲ್, ಅರಮೇರಿ ಎಸ್‌ಎಂಎಸ್ ಅಕಾಡೆಮಿ, ಮಡಿಕೇರಿ ಕೊಡಗು ವಿದ್ಯಾಲಯ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಸ್ಕೂಲ್ ಹಾಗೂ ಬೆಂಗಳೂರು ಚಿನ್ಮಯ ವಿದ್ಯಾಲಯ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು.

ಸಮಾರೋಪ ಸಮಾರಂಭವು ಸಂಜೆ ನಡೆಯಲಿದ್ದು ಹಾಕಿಯ ೧೦೦ನೇ ಸಂಭ್ರಮವನ್ನು ಕ್ಯಾಲ್ಸ್ ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನದ ಮೂಲಕ ಆಚರಿಸಲಾಗುತ್ತಿದೆ. ಹಾಕಿ ದಿಗ್ಗಜರಾದ ಹಾಕಿ ಇಂಡಿಯಾ ಅಧ್ಯಕ್ಷ ಪದ್ಮಶ್ರೀ ಅವಾರ್ಡಿ ದಿಲೀಪ್ ಟರ್ಕಿ ಇದೇ ಮೊದಲ ಬಾರಿಗೆ ಕೊಡಗಿಗೆ ಆಗಮಿಸುತ್ತಿದ್ದಾರೆ. ಇವರೊಂದಿಗೆ ಒಲಂಪಿಯನ್ ಧನರಾಜ್ ಪಿಳ್ಳೆ, ಒಲಂಪಿಯನ್ ಬಾಳೆಯಡ ಸುಬ್ರಮಣಿ, ಒಲಂಪಿಯನ್ ಎ.ಬಿ. ಸುಬ್ಬಯ್ಯ, ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ರಘುನಾಥ್, ಒಲಿಂಪಿಯನ್ ಎಂ.ಎA. ಸೋಮಯ್ಯ ಹಾಗೂ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಲು ಕ್ಯಾಲ್ಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ದತ್ತ ಕರುಂಬಯ್ಯ,ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್‌ನ ಸ್ಥಾಪಕ ಸಂಸ್ಥೆಯ ಮ್ಯಾನೇಜಿಂಗ್ ಟಸ್ಟಿ ಅಶ್ವಿನಿ ನಾಚಪ್ಪ, ವಿಶೇಷ ಆಸಕ್ತಿ ವಹಿಸಿದ್ದು ಗಣ್ಯರ ಆಗಮನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.