ಮುಳ್ಳೂರು, ಡಿ. ೧೬ : ಸಮೀಪದ ಶನಿವಾರಸಂತೆ ಕಾವೇರಿ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನೀಶ್ ಇತ್ತೀಚೆಗೆ ಗುಜರಾತಿನ ಆಹಮದಾಬಾದ್‌ನಲ್ಲಿ ನಡೆದ ರಾಷ್ಟçಮಟ್ಟದ ಖೇಲೋ ಇಂಡಿಯಾದಲ್ಲಿ ರಾಷ್ಟçಮಟ್ಟದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ೫೬.೩೩ ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಪಂದ್ಯಾವಳಿಯಲ್ಲಿ ಹೊಸ ದಾಖಲೆ ಮಾಡಿದ್ದಾನೆ ಮತ್ತು ಅನೀಶ್ ೧೧೦ ಹರ್ಡಲ್ಸ್ನಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟçಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ ಎಂದು ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮತ್ತು ಉಪನ್ಯಾಸಕರು ತಿಳಿಸಿದ್ದಾರೆ.ಅನೀಶ್ ದೊಡ್ಡಮಳ್ತೆ ಗ್ರಾಮದ ಡಿ.ಬಿ. ರಾಜೇಶ್, ವಿಮಲಾ ದಂಪತಿ ಪುತ್ರ.