ಮಡಿಕೇರಿ, ಡಿ. ೧೬: ಕಳೆದ ೪೦ ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ಕೊಡವಲ್ಯಾಂಡ್‌ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನಜಾಗೃತಿ ಮೂಡಿಸಲು ಜನವರಿ ತಿಂಗಳಿನಿAದ ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ತಿಳಿಸಿದರು.
ತಿತಿಮತಿಯಲ್ಲಿ ಇಂದು ನಡೆದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಿ.ರಿಚರ್ ಬರೆದ `ಕೂರ್ಗ್ ಗೆಜಿಟಿಯರ್', ಡಿ.ಎನ್. ಕೃಷ್ಣಯ್ಯ ಅವರು ಬರೆದ `ಕೊಡಗಿನ ಇತಿಹಾಸ', ಕೃಷ್ಣಮೂರ್ತಿ ಅವರು ಬರೆದ `ಪ್ರಾಚ್ಯ ಇತಿಹಾಸ ದಾಖಲೆ', ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಬರೆದ `ಚಿಕ್ಕವೀರ ರಾಜೇಂದ್ರ', ಐಪಿಎಸ್ ಅಧಿಕಾರಿ ಡಾ. ಬಿ.ಎಸ್. ರಾಮಾನುಜಂ ಅವರು ಬರೆದ `ಕೊಡವರು', ಡಾ. ಐ.ಎಂ. ಮುತ್ತಣ್ಣ ಅವರು ಬರೆದ `ದಿ ಡೈನೀಸ್ ಮಾಡಲ್ ಸ್ಟೇಟ್ ಆಫ್ ಸೌತ್ ಇಂಡಿಯಾ ಮತ್ತು ಟಿಪ್ಪು ಸುಲ್ತಾನ್ ಎಕ್ಸ್ ರೈಡ್', ಬಾಚಮಾಡ ಗಣಪತಿ ಅವರು ಬರೆದ `ಕೊಡವರ ಮೂಲ' ಹಾಗೂ ಡಾ. ಕೊರವಂಡ ಅಪ್ಪಯ್ಯ ಅವರು ಬರೆದ `ಕೊಡವರ ಕುಲಚಾರ ತತ್ವೋಪಜೀವಿನ' ಸಾಹಿತ್ಯದಲ್ಲಿ ಹಾಗೂ ಜಿ. ಯದುಮಣಿ ವಿರಚಿತ "ನಂಗ ಕೊಡವ" ಮತ್ತು ಪಂಜೆಮAಗೇಶರಾಯರು ರಚಿಸಿದ "ಪುತ್ತರಿ ಪಾಟ್‌ನಲ್ಲಿ" ಆದಿಮಸಂಜಾತ, ಇಂಡಿಜಿನಸ್, ಆನಿಮಿಸ್ಟಿಕ್ ನಂಬಿಕೆಯ ಏಕ ಜನಾಂಗೀಯ ಕೊಡವರು ಈ ದೇಶಕ್ಕೆ ಹಾಗೂ ಕೊಡವ ಲ್ಯಾಂಡ್‌ಗೆ ನೀಡಿದ ನೈಜ ಕಾಣಿಕೆ, ಕೊಡವರ ಪರಾಕ್ರಮ, ಅರ್ಪಣಾ ಮನೋಭಾವ, ತ್ಯಾಗ, ಉದಾರ ಗುಣಗಳ ಸತ್ಯದರ್ಶನವಾಗಿದೆ.
ಆದರೆ ಹಂಪಿ ವಿ.ವಿ.ಯ ಚರಿತ್ರಾಕಾರರೊಬ್ಬರು ಕೊಡವರ ಚರಿತ್ರೆಯನ್ನು ಕೊಡವರಿಂದಲೇ ವಿಕೃತವಾಗಿ ಬರೆಸಿ ನೈಜ ಚಿತ್ರಣವನ್ನು ಮರೆಮಾಚಿಸುತ್ತಿದ್ದಾರೆ. ಮಂಗಳೂರಿನ ಒಬ್ಬರು ಹಾಗೂ ಬೆಂಗಳೂರಿನ ಮೂವರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಪಿ.ಹೆಚ್.ಡಿ ಪದವಿಯ ಕೊಡವ ಯುವಕ ಹಾಗೂ ಯುವತಿಯರ ಮೂಲಕ ಸುಳ್ಳು ಚರಿತ್ರೆಯನ್ನು ಸೃಷ್ಟಿಸಿ ಕಳಂಕ ತರಲಾಗುತ್ತಿದೆ ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು ಹಕ್ಕಿನ ಕುರಿತು ಪ್ರಶ್ನೆ ಮಾಡಿ ವಿಕೃತಿ ಮೆರೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಅಪಪ್ರಚಾರದ ಕುರಿತು ಜನವರಿಯಿಂದ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಅವರು ನುಡಿದರು.
ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ. ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ ‘ಸಂಘ’ ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಗಬೇಕಾದರೆ, ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿ ಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟ್ರೀಯ ಜನಗಣತಿಯ ಸಂದರ್ಭ `ಕೊಡವ' ಎಂದು ದಾಖಲೀಕರಣವಾಗಬೇಕು. ಹೀಗೆ ಮಾಡಿದಾಗ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದರು.
೨೦೨೬-೨೭ ರಲ್ಲಿ ನಡೆಯಲಿರುವ ೧೬ನೇ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್‌ಅನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್‌ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವ ಸರಪಳಿಯಲ್ಲಿ ಕಾಣತಂಡ ನವ್ಯಾ ನವೀನ್, ಚೆಪ್ಪುಡಿರ ರಾಮಕೃಷ್ಣ, ಪಾಳೆಂಗಡ ಮನು, ಬೊಳ್ಳಿಮಾಡ ನಂಜಪ್ಪ, ನೆಲ್ಲಮಕ್ಕಡ ವಿವೇಕ್, ಮನೆಯಪಂಡ ಬೋಪಣ್ಣ, ಕೊಕ್ಕಂಡ ದಿನೇಶ್, ಕಾಂಡೆರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಅಮ್ಮಂಡ ಶೆರಿನ್, ಅಮ್ಮಂಡ ಧನು, ಅಪ್ಪೆಂಗಡ ಮಾಲೆ, ಚೆಂಬAಡ ಜನತ್, ಮನೆಯಪಂಡ ರತನ್ ಅಯ್ಯಪ್ಪ, ಸಂಜು ಕೊಣಿಯಂಡ, ಕಳ್ಳಿಚಂಡ ಅಶ್ವಥ್, ಕಳ್ಳಿಚಂಡ ಕಾವೇರಿಯಪ್ಪ, ಕಾಣತಂಡ ನವೀನ್, ಸಣ್ಣುವಂಡ ಮಂದಣ್ಣ, ಚೆಕ್ಕೆರ ಕಿಶ ತಮ್ಮಯ್ಯ, ಕಳ್ಳಿಯಪಂಡ ಮದನ್, ಮನೆಯಪಂಡ ಮಂಜು, ಮನೆಯಪಂಡ ಸುಬ್ಬಯ್ಯ, ಗಾಂಡAಗಡ ಅಶೋಕ್, ಗಾಂಡAಗಡ ಗಣಪತಿ, ಗಾಂಡAಗಡ ಪೂಣಚ್ಚ, ಗಾಂಡAಗಡ ತಮ್ಮಯ್ಯ, ಪುದಿಯೊಕ್ಕಡ ಪೃಥ್ವಿ, ಗಾಂಡAಗಡ ಡಾಲಿ, ಮಂಡೇಪAಡ ಸಚಿನ್, ಮಂಡೇಪAಡ ಕಿರಣ್, ಗಾಂಡAಗಡ ಜೋಯಪ್ಪ, ಮಂಡೇಪAಡ ಕಿಶನ್, ಕುಪ್ಪಂಡ ರಾಜೀವ್ ಪಾಲ್ಗೊಂಡಿದ್ದರು.