ಸಿದ್ದಾಪುರ, ಡಿ. ೧೬: ಇಲ್ಲಿನ ಶ್ರೀ ಮುತ್ತಪ್ಪ ಭಗವತಿ ದೇವಾಲಯ ದಲ್ಲಿ ಪುತ್ತರಿ ವೆಳ್ಳಾಟಂ ಶ್ರದ್ಧಾಭಕ್ತಿಯಿಂದ ನಡೆಯಿತು. ಶನಿವಾರ ಸಂಜೆ ೫ ಗಂಟೆಗೆ ಮುತ್ತಪ್ಪನ ಮಲೆ ಇಳಿಸ ಲಾಯಿತು. ನಂತರ ಮುತ್ತಪ್ಪ ಮತ್ತು ತಿರುವಪ್ಪನ ವೆಳ್ಳಾಟಂ ನೆರವೇರಿತು.

ಸಿದ್ದಾಪುರ, ನೆಲ್ಲಿಹುದಿಕೇರಿ, ಕರಡಿ ಗೋಡು, ಇಂಜಿಲಗೆರೆ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡು ಪೈಯಂಕುತ್ತಿ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವಾಲಯದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷ ಪೂಣಚ್ಚ, ಕಾರ್ಯದರ್ಶಿ ಶಿಜು, ಖಜಾಂಚಿ ಬಾಬು, ಗೌರವ ಅಧ್ಯಕ್ಷ ರವಿ, ಶ್ರೀಧರನ್ ನಿರ್ದೇಶಕರಾದ ಸುಬ್ರಮಣಿ, ಅನಿಲ್ ಕುಮಾರ್, ಶಿವರಾಜ್, ವಿನು, ಪ್ರಕಾಶ್, ರಾಜೀವ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರುಗಳು ಇದ್ದರು.