ಶನಿವಾರಸAತೆ, ಡಿ. ೧೬: ಪಟ್ಟಣದ ಹಿಂದೂ ಜಾಗರಣಾ ವೇದಿಕೆ ಶ್ರೀ ವೀರಾಂಜನೇಯ ಉತ್ಸವ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಶೋಭಾಯಾತ್ರಾ ಕಾರ್ಯಕ್ರಮ ಭಾನುವಾರ ರಾತ್ರಿ ವಿಜೃಂಭಣೆಯಿAದ ಜರುಗಿತು.
ಶನಿವಾರಸಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ೪ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬೆಳಿಗ್ಗೆ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ - ಗುಳಿಗ ದೈವದ ಬನದಲ್ಲಿ ವಿಶೇಷ ಪೂಜೆ ಹಾಗೂ ಗೋಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಹಿನ್ನೆಲೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಪಟ್ಟಣವೆಲ್ಲಾ ಕೇಸರಿ ಬಂಟಿAಗ್ಸ್ ಹಾಗೂ ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿತ್ತು. ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟು ಜನಮನ ಸೂರೆಗೊಂಡಿತ್ತು ರಾತ್ರಿ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಹೋಮ ಕಾರ್ಯ ಪೂಜೆ, ಮಹಾಮಂಗಳಾರತಿ ನಡೆಯಿತು.
ನಂತರ ಕೊಣನೂರು ಅನ್ನಪೂರ್ಣೇಶ್ವರಿ ರಥದಲ್ಲಿ ಪಂಚಲೋಹದ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ವೈಭವದ ಶೋಭಾಯಾತ್ರೆ ಆರಂಭವಾಯಿತು. ನಂದಿಧ್ವಜ, ಬೆಳ್ಳಿರಥ, ನಾಸಿಕ್ ಬ್ಯಾಂಡ್, ಚಂಡೆವಾದ್ಯ, ಸಿಡಿಮದ್ದಿನ ಪ್ರದರ್ಶನ ಹಾಗೂ ಡಿಜೆ ಸೌಂಡ್ಸ್ ಮೆರವಣಿಗೆ ವೈಭವವನ್ನು ಹೆಚ್ಚಿಸಿತು. ದೇವಾಲಯದಿಂದ ಹೊರಟು ಮುಖ್ಯರಸ್ತೆಯ ಮೂಲಕ ಗುಡುಗಳಲೆಯ ಶ್ರೀ ಬಸವೇಶ್ವರ ದೇವಾಲಯ ತಲುಪಿ, ಪ್ರವಾಸಿ ಮಂದಿರ ರಸ್ತೆ ಮಾರ್ಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಬನ್ನಿಮಂಟಪ ತಲುಪಿತು. ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಶ್ವೇತವಸ್ತç, ಕೇಸರಿ ಶಲ್ಯ ಧರಿಸಿ ಭಕ್ತರು ಪೂಜೆ ಹಾಗೂ ಮೆರವಣಿಗೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಮಾಜಿ ಶಾಸಕ ಅಪ್ಪಚ್ಚು ರಂಜನ್, ಸಮಾಜ ಸೇವಕ ಹರಪಳ್ಳಿ ರವೀಂದ್ರ, ಸೋಮವಾರಪೇಟೆ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ತಿಮ್ಮಯ್ಯ, ಸಕಲೇಶಪುರದ ರಘು, ಶಾಂತವೇರಿ ವಸಂತ್, ಶ್ರೀ ವೀರಾಂಜನೇಯ ಉತ್ಸವ ಸಮಿತಿ ಅಧ್ಯಕ್ಷ ಪುನೀತ್ ತಾಳೂರು, ಉಪಾಧ್ಯಕ್ಷ ದಿನೇಶ್ ಬಿಳಾಹ, ಖಜಾಂಚಿ ಸೋಮಶೇಖರ್ ಪೂಜಾರಿ, ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶನಿವಾರಸAತೆ ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕ ಕೃಷ್ಣರಾಜ್, ಪಿಎಸ್‌ಐ ಹೆಚ್.ವೈ. ಚಂದ್ರ, ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು; ಶಾಂತಿ - ಸುವ್ಯವಸ್ಥೆ ಕಾಪಾಡಿದರು.