ಚೆಟ್ಟಳ್ಳಿ, ಡಿ. ೧೭ : ಉರುಳಿಗೆ ಸಿಲುಕಿ ಸಾವನ್ನಪ್ಪಿದ ಹುಲಿಯ ಸಾವಿಗೆ ಕಾರಣರಾದವರ ಪತ್ತೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆಯ ಎಸಿಎಫ್ ಎ.ಎ. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಮೀನುಕೊಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಶ್ವಾನದಳದ ನುರಿತ ಶ್ವಾನ ಸ್ಟೆಲ್ಲಾ ಹಾಗೂ ಮೇಲ್ವಿಚಾರಕ ಬೋಳನೊಂದಿಗೆ ಕೂಂಬಿAಗ್ ಕಾರ್ಯಾಚರಣೆ ನಡೆಸಲಾಯಿತು. ಮೀನುಕೊಲ್ಲಿ ಮೀಸಲು ಅರಣ್ಯದಿಂದ ಹುಲಿ ಬಂದಿರಬಹುದೆAದು ಶಂಕಿಸಲಾಗಿದ್ದು, ಸುತ್ತಲಿನ ಕಾಫಿ ತೋಟಗಳ ನಡುವೆ ಎರಡು ಕಿ.ಮೀ. ದೂರ ಹುಡುಕಾಡಿದ ಶ್ವಾನ ಹಿಂತಿರುಗಿ ಹುಲಿ ಮೃತಪಟ್ಟ ಸ್ಥಳಕ್ಕೆ ಬಂದಿತು. ಉರುಳು ಹಾಕಿದ ಜಾಗ ಇನ್ನೂ ಪತ್ತೆಯಾಗಲಿಲ್ಲ. ಕಾರ್ಯಾಚರಣೆ ಮುಂದುವರೆದು ಹುರುಳು ಹಾಕಿದ ಜಾಗವನ್ನು ಹಾಗೂ ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಗೋಪಾಲ್ ತಿಳಿಸಿದ್ದಾರೆ.