ಮಡಿಕೇರಿ, ಡಿ. ೧೮: ನಗರದ ಐಟಿಐ ಬಳಿಯಲ್ಲಿ ಮೆಟ್ಟಿಲು ಹಾಗೂ ಪಾದಚಾರಿ ರಸ್ತೆ ನಿರ್ಮಾಣಕ್ಕೆ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಚಾಲನೆ ನೀಡಿದರು.
೨ ವರ್ಷಗಳ ಹಿಂದೆ ತೀವ್ರ ಮಳೆಯಿಂದ ಮೆಟ್ಟಿಲು ಕುಸಿದು ಹಾನಿಯಾಗಿ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮೆಟ್ಟಿಲುಗಳು ಈ ಭಾಗದ ಜನರ ಸಂಚಾರಕ್ಕೆ ದಾರಿಯಾಗಿತ್ತು. ಇದು ಹಾನಿಗೀಡಾಗಿ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದರಿಂದ ಸ್ಥಳೀಯರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಒಂದು ಕಿ.ಮೀ. ಹೆಚ್ಚುವರಿಯಾಗಿ ನಡೆದು ತೆರಳಬೇಕಾದ ಸ್ಥಿತಿ ತಲೆದೋರಿತ್ತು.
ಪೌರಾಯುಕ್ತ ರಮೇಶ್, ಉಪಾಧ್ಯಕ್ಷ ಮಹೇಶ್ ಜೈನಿ ಅವರ ಗಮನ ಸೆಳೆದ ಹಿನ್ನೆಲೆ ನಗರಸಭಾ ನಿಧಿಯಿಂದ ರೂ. ೪.೫೪ ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಇದನ್ನು ಬಳಸಿಕೊಂಡು ಸುಸಜ್ಜಿತ ಮೆಟ್ಟಿಲು ಹಾಗೂ ಪಾದಚಾರಿ ರಸ್ತೆ ನಿರ್ಮಿಸಲಾಗುವುದು ಎಂದು ಸದಸ್ಯ ಅರುಣ್ ಶೆಟ್ಟಿ ‘ಶಕ್ತಿ’ಗೆ ತಿಳಿಸಿದ್ದಾರೆ.