ಸಿದ್ದಾಪುರ, ಡಿ. ೧೮: ಉರುಮಾಲ್ ಮಾಸಿಕ ಪತ್ರಿಕೆಯ ೨೦ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಉರುಮಾಲ್ ಆಯೋಜಿಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿಯ ಮುಹ್‌ಮೀನ್ ಮರಿಯಂ ಪಿ.ಎಂ. ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೆಲ್ಲಿಹುದಿಕೇರಿಯ ದಾರುನ್ನಾಜಾತ್ ಮದರಸ ವಿದ್ಯಾರ್ಥಿನಿಯಾದ ಈಕೆ ನೆಲ್ಲಿಹುದಿಕೇರಿಯ ಕೆಪಿಎಸ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿ ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಪಿ.ಕೆ. ಮುಸ್ತಫಾ ಅವರ ಪುತ್ರಿ.