ಕೂಡಿಗೆ, ಡಿ. ೧೮: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದಲ್ಲಿ ನೂತನ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರಿಂದ ಭೂಮಿಪೂಜೆ ನೆರವೇರಿತು.

ಕಳೆದ ೧೨ ವರ್ಷಗಳಿಂದ ತಂಗುದಾಣವಿಲ್ಲದೆ ಅನಾನುಕೂಲ ಎದುರಿಸುತ್ತಿದ್ದ ಹಕ್ಕೆ ಗ್ರಾಮಸ್ಥರ ಬೇಡಿಕೆ ಈಡೇರಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಕ್ಕೆ-ಹುಲುಸೆ ಗ್ರಾಮಸ್ಥರು ಬುಧವಾರ ನಡೆಸಿದ ಹೋರಾಟದ ಫಲವಾಗಿ ಇಂದು ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಈ ಹಿಂದೆ ಹೆದ್ದಾರಿ ಅಭಿವೃದ್ಧಿ ಸಂದರ್ಭ ನೆಲಸಮಗೊಂಡ ಹಳೆಯ ತಂಗುದಾಣ ಸಮೀಪವೇ ನೂತನ ತಂಗುದಾಣ ನಿರ್ಮಾಣಕ್ಕೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ, ಸಾಮಾಜಿಕ ಹೋರಾಟಗಾರ ಮೋಹನ್ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು.

ಹಕ್ಕೆ-ಹುಲುಸೆ ಗ್ರಾಮಸ್ಥರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿನ್ನೆ ನಡೆಸಿದ ಹೋರಾಟಕ್ಕೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ. ಚರಂಡಿ ಸ್ವಚ್ಛತೆಗೊಳಿಸಲಾಗಿದೆ. ಹಾರಂಗಿ ಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸಲಾಗುತ್ತಿದೆ. ಕೆರೆಗಳ ಒತ್ತುವರಿ ತೆರವು ಕಾರ್ಯ ಫೆಬ್ರವರಿ ತಿಂಗಳಲ್ಲಿ ಆರಂಭಿಸುವ ಭರವಸೆ ಅಧಿಕಾರಿಗಳು ನೀಡಿದ್ದಾರೆ. ಬಹು ಬೇಡಿಕೆಯ ಬಸ್ ತಂಗುದಾಣ ನಿರ್ಮಾಣಕ್ಕೆ ಇದ್ದ ಅಡ್ಡಿಯನ್ನು ನಿವಾರಿಸಿ ಲೋಕೋಪಯೋಗಿ ಇಲಾಖೆ ಸ್ಥಳ ಗುರುತಿಸಿಕೊಟ್ಟಿದ್ದು, ಕುಶಾಲನಗರ ರೋಟರಿ ವತಿಯಿಂದ ತಂಗುದಾಣ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತದೆ.

ವಾರದೊಳಗೆ ನೂತನ ತಂಗುದಾಣ ಉದ್ಘಾಟನೆ ನೆರವೇರಿಸಲಾಗುವುದು ಎಂದು ಮೋಹನ್ ತಿಳಿಸಿದರು. ಈಬಸ್ ಪ್ರಯಾಣಿಕರ ತಂಗುದಾಣಕ್ಕೆ ಭೂಮಿಪೂಜೆ

ಕೂಡಿಗೆ, ಡಿ. ೧೮: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದಲ್ಲಿ ನೂತನ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರಿಂದ ಭೂಮಿಪೂಜೆ ನೆರವೇರಿತು.

ಕಳೆದ ೧೨ ವರ್ಷಗಳಿಂದ ತಂಗುದಾಣವಿಲ್ಲದೆ ಅನಾನುಕೂಲ ಎದುರಿಸುತ್ತಿದ್ದ ಹಕ್ಕೆ ಗ್ರಾಮಸ್ಥರ ಬೇಡಿಕೆ ಈಡೇರಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಕ್ಕೆ-ಹುಲುಸೆ ಗ್ರಾಮಸ್ಥರು ಬುಧವಾರ ನಡೆಸಿದ ಹೋರಾಟದ ಫಲವಾಗಿ ಇಂದು ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಈ ಹಿಂದೆ ಹೆದ್ದಾರಿ ಅಭಿವೃದ್ಧಿ ಸಂದರ್ಭ ನೆಲಸಮಗೊಂಡ ಹಳೆಯ ತಂಗುದಾಣ ಸಮೀಪವೇ ನೂತನ ತಂಗುದಾಣ ನಿರ್ಮಾಣಕ್ಕೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ, ಸಾಮಾಜಿಕ ಹೋರಾಟಗಾರ ಮೋಹನ್ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು.

ಹಕ್ಕೆ-ಹುಲುಸೆ ಗ್ರಾಮಸ್ಥರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿನ್ನೆ ನಡೆಸಿದ ಹೋರಾಟಕ್ಕೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ. ಚರಂಡಿ ಸ್ವಚ್ಛತೆಗೊಳಿಸಲಾಗಿದೆ. ಹಾರಂಗಿ ಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸಲಾಗುತ್ತಿದೆ. ಕೆರೆಗಳ ಒತ್ತುವರಿ ತೆರವು ಕಾರ್ಯ ಫೆಬ್ರವರಿ ತಿಂಗಳಲ್ಲಿ ಆರಂಭಿಸುವ ಭರವಸೆ ಅಧಿಕಾರಿಗಳು ನೀಡಿದ್ದಾರೆ. ಬಹು ಬೇಡಿಕೆಯ ಬಸ್ ತಂಗುದಾಣ ನಿರ್ಮಾಣಕ್ಕೆ ಇದ್ದ ಅಡ್ಡಿಯನ್ನು ನಿವಾರಿಸಿ ಲೋಕೋಪಯೋಗಿ ಇಲಾಖೆ ಸ್ಥಳ ಗುರುತಿಸಿಕೊಟ್ಟಿದ್ದು, ಕುಶಾಲನಗರ ರೋಟರಿ ವತಿಯಿಂದ ತಂಗುದಾಣ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತದೆ.

ವಾರದೊಳಗೆ ನೂತನ ತಂಗುದಾಣ ಉದ್ಘಾಟನೆ ನೆರವೇರಿಸಲಾಗುವುದು ಎಂದು ಮೋಹನ್ ತಿಳಿಸಿದರು. ಈ ಸಂದರ್ಭ ಗ್ರಾಮಸ್ಥರಾದ ಲೋಕೇಶ್, ಚೆಲುವರಾಜು, ಕೃಷ್ಣಪ್ಪ, ಸಂಪತ್, ಮಹೇಶ್, ಮಂಜು, ಗ್ರಾಮಸ್ಥರು ಮತ್ತಿತರರು ಇದ್ದರು. ಸಂದರ್ಭ ಗ್ರಾಮಸ್ಥರಾದ ಲೋಕೇಶ್, ಚೆಲುವರಾಜು, ಕೃಷ್ಣಪ್ಪ, ಸಂಪತ್, ಮಹೇಶ್, ಮಂಜು, ಗ್ರಾಮಸ್ಥರು ಮತ್ತಿತರರು ಇದ್ದರು.