ಮಡಿಕೇರಿ, ಡಿ. ೧೮: ಇಲ್ಲಿಗೆ ಸಮೀಪದ ಮರಗೋಡು ಗೌಡ ಸಮಾಜದಲ್ಲಿ ಸಮಾಜದ ಅಧ್ಯಕ್ಷ ಕಟ್ಟೆಮನೆ ಜನಾರ್ದನ ಅಧ್ಯಕ್ಷತೆಯಲ್ಲಿ ಅರೆಭಾಷೆ ದಿನಾಚರಣೆ ಆಚರಿಸಲಾಯಿತು.

ಮಡಿಕೇರಿ ಆಕಾಶವಾಣಿಯ ಸುದ್ದಿವಾಚಕ ಉಳುವಾರನ ರೋಶನ್ ವಸಂತ್ ಮಾತನಾಡಿ, ಅರೆಭಾಷೆ ನಮ್ಮ ಜನಾಂಗದ ಮಾತೃಭಾಷೆ. ಈ ಭಾಷೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಾಗಿದ್ದು ಯಾರು ಕೂಡ ಮಾತನಾಡಲು ಹಿಂಜರಿಯ ಕೂಡದು, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಉಳಿಯಲು ಸಾಧ್ಯ ಎಂಬುದನ್ನು ಯಾರು ಕೂಡ ಮರೆಯಕೂಡದು, ಜನಾಂಗದ ಸಂಸ್ಕೃತಿಯನ್ನು ಉಳಿಸಿ, ಬೆಳಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.

ಮರಗೋಡು ಗ್ರಾ.ಪಂ. ಅಧ್ಯಕ್ಷ ಬಳಪದ ಪೂವಯ್ಯ ಮಾತನಾಡಿ ಅರೆಭಾಷೆ ನಮ್ಮ ಜನಾಂಗದ ಭಾಷೆ. ನಮ್ಮ ಹೆಮ್ಮೆಯ ಭಾಷೆ. ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರು ಪ್ರಯತ್ನಿಸಬೇಕು. ಯುವ ಜನಾಂಗ ಸಂಸ್ಕೃತಿಯ ಕಡೆಗೆ ಹೆಚ್ಚಿನ ಒಲವು ನೀಡಬೇಕೆಂದರು.

ಸಮಾಜದ ಅಧ್ಯಕ್ಷ ಕಟ್ಟೆಮನೆ ಜನಾರ್ದನ ಅವರು ಮಾತನಾಡಿ ಅರೆಭಾಷೆ ಅಕಾಡೆಮಿಯ ಸೇವೆಯನ್ನು ಮೆಚ್ಚುವಂತದ್ದು. ಉತ್ತಮ ಕೆಲಸವನ್ನು ಅಕಾಡೆಮಿ ಸದಾ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮರಗೋಡು ಭಾಗದಲ್ಲಿ ಅರೆಭಾಷೆ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಕರ್ಣಯ್ಯನ ಮೋಟಯ್ಯ, ಕಾರ್ಯದರ್ಶಿ ಪೋತಂಡ್ರ ತೇಜ ಪ್ರಸಾದ್ ಅವರು ಸೇರಿದಂತೆ ಇನ್ನಿತರರು ಭಾಗÀವಹಿಸಿದ್ದರು.