ಶನಿವಾರಸAತೆ, ಡಿ. ೧೮: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜ ಮತ್ತು ಸಾರ್ವಜನಿಕರ ವತಿಯಿಂದ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಹಲವಾರು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿ, ಅನೇಕರನ್ನು ಶಿಕ್ಷಣ ಜ್ಞಾನಿಗಳನ್ನಾಗಿ ಮಾಡಿದ್ದಾರೆ ಎಂದರು. ತಪೋವನ ಕ್ಷೇತ್ರ ಮನೆಹಳ್ಳಿಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಸಮಾಜಕ್ಕೆ ದಾರಿದೀಪವಾಗಿದ್ದರು ಎಂದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಡಿ.ಬಿ.ಧರ್ಮಪ್ಪ, ಎಸ್.ಸಿ.ಶರತ್ ಶೇಖರ್, ಕೆ.ಬಿ.ಹಾಲಪ್ಪ, ಬಸವಣ್ಣ, ಶಿರಂಗಾಲ ನಂಜಪ್ಪ, ಕಾಂತರಾಜ್, ಯತೀಶ್ ಕುಮಾರ್, ಮಹೇಶ್, ಸಂದೀಪ್, ಹರ್ಷ, ಕಿರಣ್, ಡಿ.ಬಿ.ಸೋಮಪ್ಪ, ಪುಟ್ಟಸ್ವಾಮಿ, ಆಶಾ, ಎಸ್.ಪಿ.ರಾಜು, ಪುಟ್ಟರಾಜ್, ಷಡಕ್ಷರಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಜೆ.ಗಿರೀಶ್, ಸರೋಜಾ ಇತರರು ಪಾಲ್ಗೊಂಡಿದ್ದರು.