ನಾಪೋಕ್ಲು, ಡಿ. ೧೯: ಇಲ್ಲಿಗೆ ಸಮೀಪದ ಕೊಕೇರಿ ಗ್ರಾಮದ ನೀಲಿಯಟ್ ಶ್ರೀ ಶಾಸ್ತಾವು ದೇವರ ಕೊಂಬಾಟ್ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ಈ ಉತ್ಸವದಲ್ಲಿ ಕೊಂಬಾಟ್, ಪೀಲಿಯಟ್, ಬಿಲ್ಲಾಟ್, ಕತ್ತಿಯಾಟ್, ತೇಲಾಟ್, ಸೇರಿದಂತೆ ೧೮ ತರದ (ಆಟ್) ಪೂರ್ವ ಪದ್ಧತಿ ಕುಣಿತ ವಿಶೇಷವಾಗಿತ್ತು.

ಪ್ರತಿ ವರ್ಷದಂತೆ ಈ ವರ್ಷವೂ ಮೊದಲು ನೀಲಿಯಟ್ ಶ್ರೀ ಶಾಸ್ತಾವು ದೇವರ ಸನ್ನಿಧಿಯಲ್ಲಿ ಗ್ರಾಮಸ್ಥರು ಎತ್ತು ಹೇರಾಟ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಸನ್ನಿಧಿಗೆ ಸಂಬAಧಪಟ್ಟ ವ್ರತಧಾರಿ ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಕೆಂಪು ಮತ್ತು ಶ್ವೇತ ವಸ್ತçಗಳನ್ನು, ಗೆಜ್ಜೆ ತೊಟ್ಟುಕೊಂಡು ದೇವಾಲಯದ ಪ್ರಣಾಂಗಣದಲ್ಲಿ ವೃತ್ತಾಕಾರವಾಗಿ ಪಡುವ ಎಂಬ ಚರ್ಮ ವಾದ್ಯಕ್ಕೆ ತಕ್ಕಂತೆ ದಯಬದ್ಧವಾಗಿ ಹೆಜ್ಜೆ ಹಾಕುವುದು ಅತ್ಯಾಕರ್ಷಕವಾಗಿದ್ದು ನೆರೆದ ಭಕ್ತಾದಿಗಳು ವೀಕ್ಷಿಸಿದರು.

ಉತ್ಸವಕ್ಕೆ ಈ ಗ್ರಾಮಕ್ಕೆ ಸಂಬAಧಿಸಿದ ಗ್ರಾಮಸ್ಥರು ೨೦ ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡಿದರು. ಹಬ್ಬದ ದಿನ ನವಿಲು ಗರಿಗಳನ್ನು ಹಿಡಿದು ಕುಣಿಯುವ ಪೀಲಿಯಟ್, ಪ್ರಾಣಿಗಳ ಅಥವಾ ಮರದಿಂದ ಮಾಡಿದ ಕೊಂಬುಗಳನ್ನು ಹಿಡಿದುಕೊಂಡು ಕುಣಿಯುವ ಕೊಂಬಾಟ್, ಬಿಲ್ಲು ಬಾಣಗಳನ್ನು ಹಿಡಿದು ಕುಣಿಯುವ ಬಿಲ್ಲಾಟ್, ಮರದಿಂದ ತಯಾರಿಸಿದ ಕತ್ತಿ ಹಿಡಿದು ಕುಣಿಯುವ ಕತ್ತಿಯಾಟ್ ಸೇರಿದಂತೆ ೧೮ ತರದ (ಆಟ್) ಕುಣಿತ ಹಬ್ಬದ ದಿನ ಬೆಳಿಗ್ಗೆ ಮತ್ತು ಸಂಜೆ ದೇವಾಲಯದ ಆವರಣದಲ್ಲಿ ನೆರವೇರಿತು.

ಈ ಸಂದರ್ಭ ದೇವಾಲಯದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಳಿಗೆ ಹರಕೆ ಕಾಣಿಕೆ ಒಪ್ಪಿಸಿ ಪೂಜೆಗಳನ್ನು ನೆರವೇರಿಸಿದರು. ಹಬ್ಬದ ಪ್ರಯುಕ್ತ ವಿವಿಧ ಪೂಜಾ ವಿಧಿವಿಧಾನಗಳ ಬಳಿಕ ಮಂಗಳಾರತಿ, ಮಹಾಪೂಜೆ, ತೀರ್ಥ-ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನದಾನ ನೆರವೇರಿಸಲಾಯಿತು.

ಉತ್ಸವದಲ್ಲಿ ತಕ್ಕಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.