ಸುಂಟಿಕೊಪ್ಪ, ಡಿ. ೧೯ : ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಲ್ಲಿ ಆಚರಿಸಲು ಅಣಿಗೊಳ್ಳುತ್ತಿದ್ದು ಸುಂಟಿಕೊಪ್ಪ ದೇವಾಲಯದಲ್ಲಿಯೂ ಕ್ರೆöÊಸ್ತ ಧರ್ಮಗುರುಗಳು, ಕ್ರೆöÊಸ್ತ ಬಾಂಧವರು ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಅಂಗವಾಗಿ ಕ್ರೆöÊಸ್ತ ಬಾಂಧವರ ಮನೆಗಳಿಗೆ ತೆರಳಿ ಶುಭಕೋರುವ ಕಾರ್ಯಕ್ರಮ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ವತಿಯಿಂದ ಕೈಗೊಳ್ಳಲಾಯಿತು. ಕ್ಯಾರೋಲ್ಸ್ ಗಾಯನದ ಅಂಗವಾಗಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೆವರೆಂಡ್ ಫಾದರ್ ವಿಜಯಕುಮಾರ್, ಸಾಂತಕ್ಲಾಸ್ ವೇಷಾಧಾರಿ, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತಿçÃಯರು, ದೇವಾಲಯದ ಪಾ¯ನಾ ಸಮಿತಿಯ ಪದಾಧಿಕಾರಿಗಳು, ಯುವಕ ಯುವತಿಯರು ಹಾಗೂ ಚಿಕ್ಕ ಮಕ್ಕಳು ಮನೆ ಮನೆಗೆ ತೆರಳಿ ವಿಶೇಷ ಪ್ರಾರ್ಥನೆ, ಗಾಯನವನ್ನು ಹಾಡುತ್ತಾ ಶುಭ ಸಂದೇಶವನ್ನು ವಾಚಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿ ಮನೆಯ ಮಂದಿಯನ್ನು ಹರಸಿದರು. ಕ್ರೆöÊಸ್ತ ಧರ್ಮಕೇಂದ್ರಗಳಿAದ ಮನೆ ಮನೆಗಳಿಗೆ ತೆರಳಿ ಕ್ರಿಸ್ಮಸ್ ಕ್ಯಾರೋಲ್ಸ್ ಅಂಗವಾಗಿ ಸಾಂತಕ್ಲಾಸ್ ವೇಷಧಾರಿ, ಧರ್ಮಗುರುಗಳು, ಕನ್ಯಾಸ್ತಿçÃಯರು ಹಾಗೂ ಗಾಯನ ವೃಂದದವರು ತೆರಳಿ ಮನೆಯ ಮಂದಿಯೊAದಿಗೆ ಪ್ರಾರ್ಥಿಸಿ, ಕ್ರಿಸ್ತರ ಶುಭ ಸಂದೇಶವನ್ನು ವಾಚಿಸಿ ಗುರುಗಳು ಮನೆಯ ಮಂದಿಗೆ ಆಶೀರ್ವಚಿಸಿ ಶುಭಾಶಯ ಕೋರಿ ಈ ಹಬ್ಬದ ವೈಶಿಷ್ಟö್ಯತೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡುವುದು ವಾಡಿಕೆಯಾಗಿದೆ.

ಡಿಸೆಂಬರ್ ಮೊದಲ ವಾರವೇ ದೇವಾಲಯದಲ್ಲಿ ನೂತನ ಮಾದರಿಯ ೫ ಬಣ್ಣಗಳ ಮೊಂಬತ್ತಿಗಳನ್ನು ಪ್ರಾರ್ಥನ ಪೀಠದ ಮುಂದೆ ಅಳವಡಿಸಲಾಯಿತು. ಪ್ರತಿ ಭಾನುವಾರ ಬಲಿಪೂಜೆಯ ಸಂದರ್ಭ ೫ ವಾರಗಳು ವಿಶೇಷ ಮೊಂಬತ್ತಿಯನ್ನು ಉರಿಸುವ ಮೂಲಕ ಹಬ್ಬದ ಆಚರಣೆಗೆ ಮುನ್ನುಡಿಯನ್ನು ಧರ್ಮಗುರುಗಳು ನೀಡಿದರು.