ಪೊನ್ನಂಪೇಟೆ, ಡಿ. ೧೯ : ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಬಿಟ್ಟಂಗಾಲ ಸಮೀಪದ ಕಂಡAಗಾಲ ಗ್ರಾಮದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಕೊಡವ ಮುಸ್ಲಿಂ ಮನೆತನಗಳ ನಡುವಿನ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೊದಲನೇ ವರ್ಷದ ಕೌಟುಂಬಿಕ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿದೆ.

೧೨ ಬೋರ್ ವಿಭಾಗದಲ್ಲಿ ಚಿಮ್ಮಿಚ್ಚಿರ ರೌಫ್ ಪ್ರಥಮ, ಚಿಮ್ಮಿಚ್ಚಿರ ನಾಸಿರ್ ದ್ವಿತೀಯ, ಅರೆಯಂಡ ರಶೀದ್ ತೃತೀಯ, ಪಾಯಿಂಟ್ ೨೨ ವಿಭಾಗದಲ್ಲಿ ಚಿಮ್ಮಿಚ್ಚಿರ ನಾಸಿರ್ ಪ್ರಥಮ, ಮುತ್ತಲ ರಜಾಕ್ ದ್ವಿತೀಯ, ಚಿಮ್ಮಿಚಿರ ಜಲೀಲ್ ತೃತೀಯ, ಏರ್‌ಗನ್ ವಿಭಾಗದಲ್ಲಿ ಅಕ್ಕಳತಂಡ ಶಫೀಕ್ ಪ್ರಥಮ, ಚಿಮ್ಮಿಚ್ಚಿರ ನಸೀರ್ ದ್ವಿತೀಯ, ಚಿಮ್ಮಿಚ್ಚಿರ ನಿಸಾರ್ ತೃತೀಯ ಬಹುಮಾನ ಪಡೆದುಕೊಂಡರು.

೧೫ ವರ್ಷ ಒಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಯರ್ತೆಯಂಡ ಶಾಹಲ್ ಪ್ರಥಮ, ಆಲಿರ ನವಾಜ್ ದ್ವಿತೀಯ, ಮಂದಮಾಡ ಜಶೀರ್ ತೃತೀಯ ಸ್ಥಾನ ಪಡೆದುಕೊಂಡರು. ಟೂರ್ನಮೆಂಟ್‌ನ ಎಮರ್ಜಿಂಗ್ ಶೂಟರ್ ಪ್ರಶಸ್ತಿಯನ್ನು ಯರ್ತೆಯಂಡ ಶಾಹಲ್ ಪಡೆದರು.

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಆಲಿರ ರಶೀದ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭ ದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ, ಕಂಡAಗಾಲ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಮಂದಮಾಡ ಮೊಹಮದ್, ಕೆ.ಎಂ. ಎಸ್.ಎ. ಉಪಾಧ್ಯಕ್ಷರಾದ ಕೆಂಗೋಟAಡ ಸೂಫಿ, ಕುಂಡAಡ ರಜಾಕ್, ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್, ಕೋಶಾಧಿಕಾರಿ ಅಬ್ದುಲ್ ಅಜೀಜ್, ನಿರ್ದೇಶಕರಾದ ಆಲಿರ ಹುಸೈನ್, ಪರವಂಡ ಸಿರಾಜ್, ಪುಂಜೇರ ಅಬ್ದುಲ್, ಕುಪ್ಪೋಡಂಡ ಮಹಮದ್, ಚಿಮ್ಮಚ್ಚಿರ ಅಬ್ದುಲ್, ಆಲಿರ ಮೂಸಾ, ಕ್ರೀಡಾ ಸಂಚಾಲಕ ಕತ್ತಣಿರ ಅಂದಾಯಿ, ಸ್ಪರ್ಧೆಯ ಉಸ್ತುವಾರಿಗಳಾದ ಮಂದಮಾಡ ಮುನ್ನ, ಶಫೀಕ್, ಸಮಿತಿಯ ಸದಸ್ಯರು ಇದ್ದರು.